ಶಿಗ್ಗಾವಿ ಪಟ್ಟಣದಲ್ಲಿ ಗುರುವಾರ ತ್ರಿಮೂರಲಿಂಗೇಶ್ವರ ದೇವಸ್ಥಾನದ ನೂತನ ಕಟ್ಟಡದ ಭೂಮಿ ಪೂಜೆಗೆ ವಿರಕ್ತಮಠದ ಸಂಗನಬಸವ ಸ್ವಾಮೀಜಿ ಚಾಲನೆ ನೀಡಿದರು.
ಶಿಗ್ಗಾವಿ: ‘ಮಠ–ಮಂದಿರಗಳು ನಾಡಿನ ಸಂಸ್ಕೃತಿ, ಸಂಸ್ಕಾರಗಳನ್ನು ಹೆಚ್ಚಿಸುತ್ತವೆ. ಶಾಂತಿ, ನೆಮ್ಮದಿಯ ಪ್ರಮುಖ ಕೇಂದ್ರಗಳಾಗಿದ್ದು, ಸರ್ವ ಜನರಲ್ಲಿ ಸಮಾನತೆ ಕಾಣಲು ಸಾಧ್ಯವಿದೆ’ ಎಂದು ಹೆಸ್ಕಾಂ ನಿಗಮದ ಅಧ್ಯಕ್ಷ ಸೈಯದ್ ಅಜ್ಜಂಪೀರ್ ಎಸ್.ಖಾದ್ರಿ ಹೇಳಿದರು.
ಪಟ್ಟಣದಲ್ಲಿ ಗುರುವಾರ ತ್ರಿಮೂರಲಿಂಗೇಶ್ವರ ದೇವಸ್ಥಾನದ ನೂತನ ಕಟ್ಟಡದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ‘ಮಠಮಂದಿರಗಳಿಲ್ಲದ ಗ್ರಾಮಗಳಿಲ್ಲ. ಒಗ್ಗಟ್ಟಾಗಿ ಬಾಳಿಬದುಕಲು ಮಾರ್ಗದರ್ಶನ ನೀಡಲಾಗುತ್ತಿದೆ. ಜನರಲ್ಲಿ ಭಕ್ತಿ ಮಾರ್ಗ ಮೂಡಲು ಸಾಧ್ಯವಾಗಿದೆ. ದೇವಸ್ಥಾನದ ನೂತನ ಕಟ್ಟಡಕ್ಕೆ ಪ್ರತಿಯೊಬ್ಬರು ಕಂಕಣಬದ್ದರಾಗಿ ನಿಲ್ಲಬೇಕು’ ಎಂದರು.
ವಿರಕ್ತಮಠದ ಸಂಗನಬಸವ ಸ್ವಾಮೀಜಿ ಚಾಲನೆ ನೀಡಿ ಮಾತನಾಡಿ, ‘ಧರ್ಮದ ತಳಹದಿಯ ಮೇಲೆ ನಡೆದಾಗ ಮಾತ್ರ ಸರ್ವ ಸಮುದಾಯದ ಜನರಲ್ಲಿ ಸಮಾನತೆ ಮನೋಭಾವನೆ ಬೆಳೆಯಲು ಸಾಧ್ಯವಿದೆ. ಪ್ರತಿಯೊಬ್ಬರು ದಾನಧರ್ಮದ ಕಾಯಕದಲ್ಲಿ ನಿರತರಾಗಬೇಕು. ಸಮಾಜಕ್ಕೆ ತಮ್ಮೆದೆಯಾದ ಕೊಡುಗೆ ನೀಡಬೇಕು ಎಂದರು.
ಪುರಸಭೆ ಅಧ್ಯಕ್ಷ ಸಿದ್ದಾರ್ಥಗೌಡ ಪಾಟೀಲ ಮಾತನಾಡಿದರು. ಪುರಸಭೆ ಸದಸ್ಯ ಸಮೇಶ ವನಹಳ್ಳಿ, ಮುಖಂಡರಾದ ಶಿವಾನಂದಸ್ವಾಮಿ ಹಿರೇಮಠ, ಸಂಗಪ್ಪ ಕಂಕನವಾಡ, ಪ್ರಕಾಶ ಹಿರೇಮಠ, ಮಲ್ಲಯ್ಯ ಹಿರೇಮಠ, ಮಾಲತೇಶ ಯಲಿಗಾರ, ಶಂಕರಗೌಡ್ರ ಪಾಟೀಲ, ರಾಜಣ್ಣ ವಿರಕ್ತಿಮಠ, ಶಂಭಣ್ಣ ಹಾವೇರಿ, ಈರಪ್ಪ ಹೊಟ್ಟೂರ, ಶಂಕ್ರಪ್ಪ ಯಲವಿಗಿ, ಚನ್ನಪ್ಪ ಚಿಟ್ಟಿ, ಶಿವಬಪ್ಪ ಗಂಜೀಗಟ್ಟಿ, ಈರಪ್ಪ ಅರಳೇಶ್ವರ, ಸಿದ್ದು ಕಾರಡಗಿ ಸೇರಿದಂತೆ ದೇವಸ್ಥಾನ ಸೇವಾ ಸಮಿತಿ ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.