
ಶಿಗ್ಗಾವಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪುಣ್ಯ ಸ್ಮರಣೋತ್ಸವ ಅಂಗವಾಗಿ ಶಿಗ್ಗಾವಿ ಪಟ್ಟಣದ ಮೈಲಾರಲಿಂಗೇಶ್ವರ ದೇವಸ್ಥಾನದಿಂದ ಕಿತ್ತೂರ ಚನ್ನಮ್ಮ ವೃತ್ತದವರೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸೇನೆ ವತಿಯಿಂದ ಸೋಮವಾರ ರಾತ್ರಿ ಪಂಜಿನ ಮೆರವಣಿಗೆ ನಡೆಯಿತು.
ಕುರುಬ ಸಮಾಜದ ಹಿರಿಯ ಮುಖಂಡ ಫಕ್ಕೀರಪ್ಪ ಕುಂದೂರ ಮಾತನಾಡಿ, ‘ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯ ತರುವಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಶೌರ್ಯ, ಧೈರ್ಯ ಹಾಗೂ ದೇಶಾಭಿಮಾನ ಮೆಚ್ಚುವುವಂತಹದ್ದಾಗಿದೆ. ಕಿತ್ತೂರ ಚನ್ನಮ್ಮ ಅವರ ಬಲಗೈ ಬಂಟನಾಗಿ ಬ್ರಿಟಿಷ್ ಸರ್ಕಾವನ್ನು ನಡುಗಿಸಿದ ವೀರ. ಅಂತಹ ಮಹಾತ್ಮರು ಸ್ವಾತಂತ್ರ್ಯೋತ್ಸವ ಆ. 15ರಂದೇ ಜನಿಸಿ, ಜ. 26 ಗಣರಾಜ್ಯೋತ್ಸವ ದಿನದಂದು ಹುತಾತ್ಮರಾದರು. ಅಂತಹ ಮಹಾತ್ಮರ ಆದರ್ಶ ಪ್ರತಿಯೊಬ್ಬರಲ್ಲಿ ಬೆಳೆಯಲಿ’ ಎಂದರು.
ನಂತರ ನಡೆದ ಪಂಜಿನ ಮೆರವಣಿಗೆ ಮೈಲಾರಲಿಂಗೇಶ್ವರ ದೇವಸ್ಥಾನದಿಂದ ಆರಂಭವಾಗಿ, ಹಳಪೇಟೆ, ಅಂಚೆ ಕಚೇರಿ, ಗೋಳಿ ಬಸವಣ್ಣ ದೇವಸ್ಥಾನ, ರಾಚನಕಟ್ಟಿ ಕೆರೆ, ಡಿಪೊ ನಿಲ್ದಾಣ, ಪಿ.ಎಲ್.ಡಿ ಬ್ಯಾಂಕ್ ವೃತ್ತ, ಹಳೆ ಬಸ್ ನಿಲ್ದಾಣ, ಪೇಟೆ ರಸ್ತೆ, ಸಂತೆ ಮೈದಾನ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಸಚಿವ ಜಾರಕಿಹೊಳಿ ಅಭಿಮಾನ ಬಳಗದ ಮುಖಂಡ ಏಳಕೋಟೆಪ್ಪ ಪಾಟೀಲ ಮೆರವಣಿಗೆಗೆ ಚಾಲನೆ ನೀಡಿದರು. ಮುಖಂಡ ಭರತ್ ಬೊಮ್ಮಾಯಿ, ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಗುಡ್ಡಪ್ಪ ಜಲದಿ, ತಾಲ್ಲೂಕು ಗ್ಯಾಂರಂಟಿ ಯೋಜನೆ ಅಧ್ಯಕ್ಷ ಎಸ್.ಎಫ್.ಮಣಕಟ್ಟಿ, ಸಂತೋಷ ಚಾಕಲಬ್ಬಿ, ಚಂದ್ರು ಕೊಡ್ಲಿವಾಡ, ಮಹಾಂತೇಶ ಕಂಕನವಾಡ, ಚಂದ್ರಣ್ಣ ಹೆಬ್ಬಾಳ, ಗೌಸಖಾನ್ ಮುನಸಿ, ಅಣ್ಣಪ್ಪ ಲಮಾಣಿ, ಮಂಜುನಾಥ ಮಣ್ಣಣ್ಣವರ, ಬಸವರಾಜ ದೊಡ್ಡಮನಿ, ಸೋಮಣ್ಣ ಶಿಗ್ಗಾವಿ, ಪೀರ್ಸಾಬ ನದಾಫ್, ಶಿವಾನಂದ ಚಾಕಲಬ್ಬಿ, ತಿಪ್ಪಣ್ಣ ಮೀಶಿ, ಫಕ್ಕೀರೇಶ ಹರಿಜನ, ಸಂತೋಷ ಲಚಮಣ್ಣವರ, ನೀಲಪ್ಪ ಬಸವನಾಳ, ಸಂತೋಶ ಇಂಗಳಗಿ ಸೇರಿದಂತೆ ಕ್ರಾಂತಿವೀಋ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಗಳಗದ ಸದಸ್ಯರು, ವಿವಿಧ ಸಂಘಟನೆಗಳ ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.