ADVERTISEMENT

ಸವಣೂರು: ಸಾಲಬಾಧೆ ರೈತ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 3:08 IST
Last Updated 18 ಆಗಸ್ಟ್ 2025, 3:08 IST
ದುರ್ಗಪ್ಪ ಸಿದ್ದಕ್ಕನವರ
ದುರ್ಗಪ್ಪ ಸಿದ್ದಕ್ಕನವರ   

ಸವಣೂರು: ಸಾಲಬಾಧೆಗೆ ಮನನೊಂದ ರೈತರೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ತಾಲ್ಲೂಕಿನ ಹುರಳಿಕುಪ್ಪಿ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.

ಮೃತ ದುರ್ದೈವಿ ಹುರಳಿಕುಪ್ಪಿ ಗ್ರಾಮದ ರೈತ ದುರ್ಗಪ್ಪ ಬೀರಪ್ಪ ಸಿದ್ದಕ್ಕನವರ (42) ಕೃಷಿ ಕಾರ್ಯಕ್ಕಾಗಿ ಹುರಳಿಕುಪ್ಪಿ ಗ್ರಾಮದ ಕೆವಿಜಿ ಬ್ಯಾಂಕಿನಲ್ಲಿ ₹ 2 ಲಕ್ಷ, ವಿವಿಧ ಸಂಘಗಳಲ್ಲಿ ₹ 2 ಲಕ್ಷ, ಕೈಗಡ ಸಾಲವಾಗಿ ₹ 4 ಲಕ್ಷ ಸೇರಿದಂತೆ ಒಟ್ಟು ₹ 8 ಲಕ್ಷ ಸಾಲ ಪಡೆದಿದ್ದ.

ಕಳೆದ 2 ವರ್ಷಗಳಿಂದ ಸಕಾಲಕ್ಕೆ ಮಳೆ ಬೆಳೆ ಬಾರದೆ ಇರುವದರಿಂದ ಚಿಂತೆಗೀಡಾಗಿ ಮನನೊಂದ ರೈತ ಶನಿವಾರ ಬೆಳಿಗ್ಗೆ ವಿಷ ಸೇವನೆ ಮಾಡಿ ಆತ್ಮಹತ್ಯತ್ಯೆಗೆ ಪ್ರಯತ್ನಿಸಿದಾನೆ. ಆತ ನೆರಳಾಡುವುದನ್ನು ಕಂಡು ಸಂಬಂಧಿಕರು ಕೂಡಲೇ ಸವಣೂರಿನ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ADVERTISEMENT

ಪ್ರಥಮ ಚಿಕಿತ್ಸೆ ನೀಡಿದ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲು ಹೊದ ಸಮಯದಲ್ಲಿ ವೈದ್ಯರು ಪರೀಕ್ಷಿಸಿದ ವೇಳೆ ರೈತ ದುರ್ಗಪ್ಪ ಮರಣ ಹೊಂದಿದ್ದಾನೆ ಎಂದು ವೈದ್ಯರು ಖಚಿತ ಪಡಿಸಿದ ನಂತರ ಮೃತ ರೈತನ ಪತ್ನಿ ರೇಖಾ ದುರ್ಗಪ್ಪ ಸಿದ್ದಕ್ಕನವರ ನೀಡಿದ ವರದಿ ಆಧಾರದ ಮೆಲೆ ಸವಣೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.