ADVERTISEMENT

ಸವಣೂರು: ಡಿಜೆಗಾಗಿ ಯುವಕರ ಪಟ್ಟು; ಗಣೇಶ ವಿಸರ್ಜನೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 6:07 IST
Last Updated 11 ಸೆಪ್ಟೆಂಬರ್ 2025, 6:07 IST
ಸವಣೂರು ಪಟ್ಟಣದ ಬಡಾವಣೆಯೊಂದರಲ್ಲಿ ಪ್ರತಿಷ್ಠಾಪಿಸಿದ ಗಣೇಶನನ್ನು ಇನ್ನೂ ವಿಸರ್ಜನೆಗೊಳಿಸಿಲ್ಲ
ಸವಣೂರು ಪಟ್ಟಣದ ಬಡಾವಣೆಯೊಂದರಲ್ಲಿ ಪ್ರತಿಷ್ಠಾಪಿಸಿದ ಗಣೇಶನನ್ನು ಇನ್ನೂ ವಿಸರ್ಜನೆಗೊಳಿಸಿಲ್ಲ   

ಸವಣೂರು: ಗಣೇಶ ವಿಸರ್ಜನೆ ಸಂದರ್ಭದಲ್ಲಿ ಡಿಜೆ ಬಳಕೆ ನಿಷೇಧಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಅನೇಕ ಗಣೇಶ ಯುವಕ ಮಂಡಳಿಗಳು ಕಿಡಿಕಾರಿವೆ. ಪೊಲೀಸ್ ಇಲಾಖೆಯಿಂದ ಡಿಜೆ ಪರವಾನಿಗೆ ನೀಡುವವರೆಗೆ ಗಣೇಶ ವಿಸರ್ಜನೆಗೆ ಮುಂದಾಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಡಿಜೆ ಸದ್ದು ಮಾಡದೇ ಉತ್ಸವಕ್ಕೆ ಜೀವವಿಲ್ಲ ಎನ್ನುವ ಅಭಿಪ್ರಾಯದಲ್ಲಿ ಯುವಕರು ಪೊಲೀಸರ ಕಟ್ಟಳೆ ವಿರುದ್ಧ ಸೆಡ್ಡು ಹೊಡೆದಿದ್ದಾರೆ. 

ಐದು ದಿನಗಳ ಬಳಿಕ ವಿಸರ್ಜನೆ ಮಾಡಬೇಕಿದ್ದ ಗಣೇಶನನ್ನು ಹಾಗೇ ಇರಿಸಲಾಗಿದೆ. ಡಿಜೆ ಪರವಾನಿಗೆ ಸಿಗಲೆಂದು ಗಣೇಶನಿಗೆ ಹರಕೆ ಕಟ್ಟಿ ಯುವಕರು ಪೂಜಿಸುತ್ತಿದ್ದಾರೆ. ಇನ್ನೊಂದೆಡೆ, ಗಣೇಶೋತ್ಸವಕ್ಕಾಗಿ ಹಾಕಿರುವ ಶಾಮಿಯಾನ ಬಾಡಿಗೆ ಹಾಗೂ ಇತರ ಖರ್ಚುಗಳಿಂದ ಕೆಲವು ಸಮಿತಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ADVERTISEMENT

ಪರವಾನಿಗೆ ನೀಡುವ ವಿಷಯದಲ್ಲಿ ಪೊಲೀಸ್ ಇಲಾಖೆಯ ಮುಂದಿನ ನಡೆ ಏನೆಂಬುದು ಗೊತ್ತಾಗಬೇಕಿದೆ. 

‘ಹಾವೇರಿ ಜಿಲ್ಲೆಯಲ್ಲಿ ಬಿಜೆಪಿ ಶಾಸಕರು ಇಲ್ಲದ ಕಾರಣದಿಂದಾಗಿ ಜಿಲ್ಲಾ ಉಸ್ತುವಾರಿ ಸಚಿವರ ಅಣತಿಯಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಡೆದುಕೊಳ್ಳುತ್ತಿದ್ದಾರೆ. ಇದರಿಂದ ಪ್ರಜಾಪ್ರಭುತ್ವ ಆಶಯಗಳಿಗೆ ಕೊಡಲಿ ಪೆಟ್ಟು ನೀಡಿದಂತಾಗಿದೆ. ಪಕ್ಕದ ಜಿಲ್ಲೆಗಳಲ್ಲಿ ಗಣೇಶ ವಿಸರ್ಜನೆಗೆ ಡಿಜೆ ಅನುಮತಿ ನೀಡಿದಂತೆ ನಮಗೂ ನೀಡದಿದ್ದಲ್ಲಿ ಉಗ್ರ ಹೋರಾಟ ಅನಿವಾರ್ಯ’ ಎಂದು ಬಿಜೆಪಿ ಸವಣೂರು ಮಂಡಲದ ನಿಕಟಪೂರ್ವ ಅಧ್ಯಕ್ಷ ಗಂಗಾಧರ ಬಾಣದ ಹೇಳಿದರು.

ಗಂಗಾಧರ ಬಾಣದ. ನಿಕಟಪೂರ್ವ ಅಧ್ಯಕ್ಷರು ಬಿಜೆಪಿ ಸವಣೂರು ಮಂಡಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.