ADVERTISEMENT

ರೇಷ್ಮೆ ಬೆಳೆದು ಆರ್ಥಿಕವಾಗಿ ಸದೃಢರಾಗಿ

ರೇಷ್ಮೆ ಬೆಳೆ ನಿರೀಕ್ಷಕ ಮೃತ್ಯುಂಜಯ್ಯ ತೋಟದ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 4:14 IST
Last Updated 24 ಜನವರಿ 2026, 4:14 IST
ಹಾವೇರಿ ತಾಲ್ಲೂಕಿನ ಮೇಲ್ಮುರಿ ಗ್ರಾಮದಲ್ಲಿ ಶುಕ್ರವಾರ ನಡೆದ ರೈತ ಜಾಗೃತಿ ಕಾರ್ಯಕ್ರಮದ ಮುನ್ನ ರೇಷ್ಮೆ ಬೆಳೆಯನ್ನು ಅಧಿಕಾರಿಗಳು, ರೈತರು ವೀಕ್ಷಣೆ ಮಾಡಿದರು
ಹಾವೇರಿ ತಾಲ್ಲೂಕಿನ ಮೇಲ್ಮುರಿ ಗ್ರಾಮದಲ್ಲಿ ಶುಕ್ರವಾರ ನಡೆದ ರೈತ ಜಾಗೃತಿ ಕಾರ್ಯಕ್ರಮದ ಮುನ್ನ ರೇಷ್ಮೆ ಬೆಳೆಯನ್ನು ಅಧಿಕಾರಿಗಳು, ರೈತರು ವೀಕ್ಷಣೆ ಮಾಡಿದರು   

ಹಾವೇರಿ: ರೇಷ್ಮೆ ಬೆಳೆಗಾರರು ಕಡಿಮೆ ಖರ್ಚಿನ ಸಾವಯವ ಕೃಷಿ ಪದ್ಧತಿಯಲ್ಲಿ ರೇಷ್ಮೆ ಬೆಳೆ ಬೆಳೆಯುವ ಮೂಲಕ ಗುಣಮಟ್ಟದ ಇಳುವರಿ ಪಡೆದು ಆರ್ಥಿಕವಾಗಿ ಸದೃಢರಾಗಬೇಕೆಂದು ಧಾರವಾಡ ರೇಷ್ಮೆ ಇಲಾಖೆಯ ರೇಷ್ಮೆ ಬೆಳೆ ನಿರೀಕ್ಷಕ ಮೃತ್ಯುಂಜಯ್ಯ ತೋಟದ ಹೇಳಿದರು.

ತಾಲ್ಲೂಕಿನ ಮೇಲ್ಮುರಿ ಗ್ರಾಮದ ಪ್ರಗತಿಪರ ಕೃಷಿಕ ಶಿವಾನಂದ ವೀರಪ್ಪ ಅರಳಿ ಅವರ ರೇಷ್ಮೆ ತೋಟದಲ್ಲಿ ನಡೆದ ರೈತ ಜಾಗೃತಿ ಕಾರ್ಯಕ್ರಮದಲ್ಲಿ ವೀರಭದ್ರಪ್ಪ ಅರಳಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಹಾವೇರಿ ಜಿಲ್ಲಾ ಘಟಕ ಹಾಗೂ ಕರ್ನಾಟಕ ಸರ್ಕಾರ ರೇಷ್ಮೆ ಇಲಾಖೆ, ತರಬೇತಿ ಸಂಸ್ಥೆ ರಾಯಾಪುರ, ಧಾರವಾಡ ಹಾಗೂ ವೇದಾಂತ ಸಂಸ್ಥೆ ಸಹಯೋಗದಲ್ಲಿ ಆಶ್ರಯದಲ್ಲಿ ಶುಕ್ರವಾರ ನಡೆದ ರೈತ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರೇಷ್ಮೆ ಬೆಳೆಯ ರೋಗ ಮತ್ತು ಕೀಟಬಾಧೆ ನಿಯಂತ್ರಣದ ಕುರಿತು ಸಮಗ್ರವಾಗಿ ವಿವರಿಸಿದರು. ಪ್ರಗತಿಪರ ಕೃಷಿಕ ಶಿವಾನಂದ ವೀರಪ್ಪ ಅರಳಿ ಮಾತನಾಡಿ, ರಾಸಾಯನಿಕ ಬಳಕೆ ಕಡಿಮೆ ಮಾಡಿ ನಮ್ಮ ಭೂಮಿಗೆ ಕೊಟ್ಟಿಗೆ ಗೊಬ್ಬರ, ಬೇವಿನ ಹಿಂಡಿ ಭೂಮಿಯ ಫಲವತ್ತತೆ ಹೆಚ್ಚಿಸುವ ಕಾರ್ಬನ್ ಇಂಗಾಲ ಹಾಗೂ ಸಿಲಿಕಾನ್ ಉತ್ಪನ್ನಗಳನ್ನ ನಿರಂತರವಾಗಿ ಉಪಯೋಗಿಸುತ್ತಿರುವುದರಿಂದ ಗುಣಮಟ್ಟದ ಫಸಲು ಪಡೆಯಲು ಸಾಧ್ಯವಾಗಿದೆ ಎಂದರು.

ADVERTISEMENT

ಕೃಷಿ ಸಲಹೆಗಾರ ಗಂಗಯ್ಯ ಕುಲಕರ್ಣಿ ಮಾತನಾಡಿ, ನೀರು ಮತ್ತು ಮಣ್ಣಿನ ಮಹತ್ವ ಕುರಿತು ತಿಳಿಸಿದರು. ಧಾರವಾಡ, ಬೆಳಗಾವಿ, ಬಿಜಾಪುರ, ಬಾಗಲಕೋಟಿ, ಕಲಬುರಗಿ, ಕೊಪ್ಪಳ, ಗದಗ, ಹಾವೇರಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 50ಕ್ಕೂ ಅಧಿಕ ರೈತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.