ಬ್ಯಾಡಗಿ: ‘ಧಾರ್ಮಿಕ ಮತ್ತು ಸಾಂಸ್ಕೃತಿಕ ಅವನತಿಯ ವೇಳೆ ಹಿಂದೂ ಧರ್ಮವನ್ನು ಪುನರುಜ್ಜೀವನಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಹಾಗೂ ಆಧ್ಯಾತ್ಮಿಕ ಮತ್ತು ತತ್ವಜ್ಞಾನಿಗಳಲ್ಲಿ ಒಬ್ಬರಾದ ಶಂಕರಾಚಾರ್ಯರ ಸ್ಮರಣೆ ಪ್ರಸ್ತುತ ಅಗತ್ಯವಿದೆ’ ಎಂದು ತಹಶೀಲ್ದಾರ್ ಫಿರೋಜಷಾ ಸೋಮನಕಟ್ಟಿ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ತಾಲ್ಲೂಕು ಆಡಳಿತದಿಂದ ಏರ್ಪಡಿಸಿದ್ದ ಸಂತ ಶಂಕರಾಚಾರ್ಯರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸೂಕ್ತ ಸಮಯದಲ್ಲಿ ದಾನ ಮಾಡುವುದೇ ಮೌಲ್ಯಯುತವಾಗಿದೆ. ಅಜ್ಞಾನದ ನಾಶವೇ ಮೋಕ್ಷ. ಸತ್ಯವೇ ಅಂತಿಮವಾಗಿ ಜೀವಿಗಳಿಗೆ ಸಹಾಯ ಮಾಡುವ ಮಾರ್ಗವಾಗಿದೆ ಎಂದು ಜಗತ್ತಿಗೆ ಸಾರಿದ ಸಂತರು ಅವರು’ ಎಂದು ಬಣ್ಣಿಸಿದರು.
ಪ್ರಾಚಾರ್ಯ ಎಸ್.ಜಿ.ವೈದ್ಯ ಮಾತನಾಡಿ, ‘ದೇಶದ ನಾಲ್ಕು ದಿಕ್ಕುಗಳಲ್ಲಿ 4 ಪೀಠಗಳನ್ನು ಸ್ಥಾಪಿಸಿ ಭಾರತದ ಸನಾತನ ಸಂಸ್ಕೃತಿಯನ್ನು ಜಗತ್ತಿಗೆ ಸಾರಿದ ಮೊದಲಿಗರು ಶಂಕರಾಚಾರ್ಯರು’ ಎಂದರು.
ಬ್ರಾಹ್ಮಣ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಶಂಕರರಾವ್ ಕುಲಕರ್ಣಿ, ಉಪಾಧ್ಯಕ್ಷ ವಿನಾಯಕ ಹುದ್ದಾರ, ಮುಖಂಡರಾದ ಉಮೇಶ ರಟ್ಟಿಹಳ್ಳಿ, ಬಾಬುರಾವ್ ಹುದ್ದಾರ, ಸಂಧ್ಯಾರಾಣಿ ದೇಶಪಾಂಡೆ, ಗೋಪಾಲ ದೇಶಪಾಂಡೆ, ಶ್ರೀನಿವಾಸ ಕುಲಕರ್ಣಿ, ಪವನ್ ಗೋಸಾವಿ, ಸುಪ್ರಭಾ ಗೋಸಾವಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.