ರಾಣೆಬೆನ್ನೂರು: ತಾಲ್ಲೂಕಿನ ಹರನಗಿರಿ ಗ್ರಾಮದ ನಿಂಗಪ್ಪ ಛತ್ರದ ಎಂಬುವರು ಸಾಕಿದ್ದ ₹ 50 ಸಾವಿರ ಕಿಮ್ಮತ್ತಿನ ಎರಡು ವರ್ಷದ 4 ಹಲ್ಲಿನ ಟಗರನ್ನು ಯಾರೋ ಕಿಡಿಗೇಡಿಗಳು ಕಳ್ಳತನ ಮಾಡಿಕೊಂಡು ಹೋದ ಬುಧವಾರ ಘಟನೆ ನಡೆದಿದೆ.
ಹರನಗಿರಿ ಗ್ರಾಮದ ನಿಂಗಪ್ಪ ಛತ್ರದ ಮಾತನಾಡಿ, ₹ 50 ಸಾವಿರಕ್ಕೂ ಹೆಚ್ಚು ಮೌಲ್ಯದ ಎರಡು ವರ್ಷದ 4 ಹಲ್ಲಿನ ಟಗರುಗಳನ್ನು ಕಿಡಿಗೇಡಿಗಳು ಕಳ್ಳತನ ಮಾಡಿದ್ದಾರೆ. ವಿವಿಧ ಕಡೆಗಳಲ್ಲಿ ನಡೆದ ಟಗರಿನ ಕಾಳಗದಲ್ಲಿ ಸೆಣಸಿದ್ದು, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಹೆಸರು ಮಾಡಿ ಅನೇಕ ಬಹುಮಾನಗಳನ್ನು ಪಡೆದಿತ್ತು ಎಂದರು.
ಗ್ರಾಮದಲ್ಲಿ ಈಚೆಗೆ ಅಂಬೇಡ್ಕರ್ ಭಾವಚಿತ್ರವನ್ನು ದುಷ್ಕರ್ಮಿಗಳು ವಿರೂಪಗೊಳಿಸಿದ್ದ ಘಟನಾ ಸ್ಥಳದಲ್ಲಿದ್ದ ಸಿಸಿ ಕ್ಯಾಮರಾ ಮುಂದೆಯೇ ಟಗರು ಕಳ್ಳತನವಾಗಿದೆ. ಪೊಲೀಸರು ಕಳ್ಳರನ್ನು ಕೂಡಲೇ ಪತ್ತೆ ಮಾಡಬೇಕು. ಇಲ್ಲದಿದ್ದರೆ, ನ್ಯಾಯಕ್ಕಾಗಿ ಒತ್ತಾಯಿಸಿ ಹರನಗಿರಿ ಗ್ರಾಮದಿಂದ ದಾವಣಗೆರೆ ಐಜಿಪಿ ಕಚೇರಿಯವರೆಗೆ ಪಾದಯಾತ್ರೆ ಮಾಡುತ್ತೇನೆ ಎಂದು ಎಚ್ಚರಿಸಿದ್ದಾರೆ.
ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.