
ಶಿಗ್ಗಾವಿ: ಸಭೆ, ಸಮಾರಂಭದಲ್ಲಿ ಮಹಾತ್ಮರ ಕುರಿತು ಮಾತನಾಡಿದರೆ ಸಾಲದು ಅವರ ಆದರ್ಶ ಚಿಂತನೆಗಳನ್ನು ಪ್ರತಿಯೊಬ್ಬರೂ ಪಾಲಿಸುವುದು ಮುಖ್ಯವಾಗಿದೆ. ಭವಿಷ್ಯದಲ್ಲಿ ಸಾಧಕರ ಸಾಲಿನಲ್ಲಿ ನಿಲ್ಲಲು ಸಾಧ್ಯವಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಅಜ್ಜಣ್ಣವರ ಹೇಳಿದರು.
ಪಟ್ಟಣದ ಪುರಸಭೆ ಆವರಣದಲ್ಲಿ ಸೋಮವಾರ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನುಷ್ಯ ತಂತ್ರಜ್ಞಾನದಿಂದ ಮೊಬೈಲ್, ದೂರದರ್ಶನ ರೂಪಿಸಿದ್ದಾನೆ. ಆದರೆ ಪರಿಪೂರ್ಣವಾಗಿ ತಂತ್ರಜ್ಞಾನಕ್ಕೆ ತನ್ನನ್ನು ತಾನು ಸಮರ್ಪಿಸಿಕೊಳ್ಳಬಾರದು. ವಿದ್ಯಾರ್ಥಿಗಳು ಪುಸ್ತಕದ ಜ್ಞಾನವನ್ನು ಮಸ್ತಕದಲ್ಲಿರಿಸಿಕೊಂಡು, ದೇಶಕ್ಕಾಗಿ ತಮ್ಮನ್ನು ತಾವು ಸಮರ್ಪಿಸಬೇಕು. ಮಹಾತ್ಮರ ಜೀವನ ಚರಿತೆಯನ್ನು ಓದಿ ಮೈಗೂಡಿಸಿಕೊಂಡು ನಡೆದಾಗ ಮಾತ್ರ ದೇಶ ಅಭಿವೃದ್ಧಿ ಕಾಣಲು ಸಾಧ್ಯವಿದೆ ಎಂದರು.
ಪುರಸಭೆ ಉಪಾಧ್ಯಕ್ಷ ಆಂಜನೇಯ ಗುಡಗೇರಿ, ಸದಸ್ಯರಾದ ತಹಮಿದ ಖಾಜಿ, ಗದಿಗೆಪ್ಪ ಬಳ್ಳಾರಿ, ರಮೇಶ ಸಿದ್ದುನವರ ಮಾತನಾಡಿದರು. ಜಾನಪದ ಕಲಾವಿದರಾದ ಗುರು ಎಸ್. ಛಲವಾದಿ, ಸಿದ್ದಲಿಂಗಪ್ಪ ನರೇಗಲ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಸಭೆಯಲ್ಲಿ ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಪುರಸಭೆ ಅಧ್ಯಕ್ಷೆ ಮಮತಾ ಮಾಗಿ ದ್ವಜಾರೋಹಣ ನೆರವೇರಿಸಿದರು. ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿದವು. ಕಸಾಪ ಹೊಬಳಿ ಘಟಕದ ಅಧ್ಯಕ್ಷ ಎ.ಕೆ. ಆದವಾನಿಮಠ, ಡಾ. ಬಸವರಾಜ ನರೇಗಲ್, ಅಬ್ದುಲ್ರಜಾಕ ತಹಶೀಲ್ದಾರ್, ಮಂಜಪ್ಪ ತಳವಾರ, ಲಲಿತಾ ಹಂಜಗಿ, ಗೀತಾ ಸಣ್ಣಕ್ಕಿ, ರಾಜು ಬಡ್ಡಿ, ಸುರೇಶ ಕುರಗೋಡಿ, ನೂರಹಮ್ಮದ ಡೊರಳ್ಳಿ, ನಿಂಗನಗೌಡ ಪಾಟೀಲ, ಲಕ್ಷ್ಮವ್ವ ಮಾಳಗಿಮನಿ, ನಾಜಿಮಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.