ADVERTISEMENT

ಶಿಗ್ಗಾವಿ: 22 ಕೊಳಚೆ ಪ್ರದೇಶ ಘೋಷಣೆ

2 ಸಾವಿರ ಮನೆ ನಿರ್ಮಾಣ: ಬಸವರಾಜ ಬೊಮ್ಮಾಯಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2020, 5:38 IST
Last Updated 23 ಜುಲೈ 2020, 5:38 IST
ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ  
ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ     

ಹಾವೇರಿ: ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಶಿಗ್ಗಾವಿ, ಸವಣೂರ ಹಾಗೂ ಬಂಕಾಪುರ ಪುರಸಭೆ ವ್ಯಾಪ್ತಿಯಲ್ಲಿ ಹೊಸದಾಗಿ 22 ಕೊಳಚೆ ಪ್ರದೇಶಗಳನ್ನು ಸರ್ಕಾರ ಘೋಷಣೆ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಶಿಗ್ಗಾವಿ ಪುರಸಭೆ ವ್ಯಾಪ್ತಿಯಲ್ಲಿ 7 ಪ್ರದೇಶಗಳನ್ನು, ಬಂಕಾಪುರ ಪುರಸಭೆ ವ್ಯಾಪ್ತಿಯಲ್ಲಿ 10 ಪ್ರದೇಶಗಳನ್ನು ಸವಣೂರ ಪುರಸಭೆ ವ್ಯಾಪ್ತಿಯಲ್ಲಿ 5 ಪ್ರದೇಶಗಳನ್ನು ಕೊಳಚೆ ಪ್ರದೇಶಗಳೆಂದು ಹೊಸದಾಗಿ ಘೋಷಣೆ ಮಾಡಲಾಗಿರುತ್ತದೆ. ಈ ಪ್ರದೇಶಗಳ ವ್ಯಾಪ್ತಿಯಲ್ಲಿ ಸುಸಜ್ಜಿತವಾದ 2 ಸಾವಿರ ಮನೆಗಳನ್ನು ಸರ್ಕಾರದ ವತಿಯಿಂದ ನಿರ್ಮಿಸಲಾಗುವುದು. ಇದರಿಂದ 10 ಸಾವಿರಕ್ಕಿಂತ ಹೆಚ್ಚು ಜನರು ನಿರ್ಮಲ ಪ್ರದೇಶದಲ್ಲಿ ವಾಸಿಸಲು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ಶಿಗ್ಗಾವಿ ಪುರಸಭೆ ವ್ಯಾಪ್ತಿಯಲ್ಲಿ ಜನತಾ ಪ್ಲಾಟ್, ಹಳೆ ಆಶ್ರಯ ಬಡಾವಣೆ, ಕುಂಚಿಕೊರವರ ಓಣಿ, ಮೌಲಾಲಿ ಗುಡ್ಡ, ಹಳೇ ಆಶ್ರಯ ಬಡಾವಣೆ, ರಾಜೀವನಗರ, ಕಾರಡಗಿ ಪ್ಲಾಟ್ ಹಾಗೂ ಜನತಾ ಪ್ಲಾಟ್, ಮೆಹಬೂಬ ನಗರ ಹೊಸ ಕೊಳಚೆ ಪ್ರದೇಶಗಳಾಗಿ ಘೋಷಣೆ ಮಾಡಲಾಗಿದೆ.

ADVERTISEMENT

ಬಂಕಾಪುರ ಪುರಸಭೆ ವ್ಯಾಪ್ತಿಯ ಮಂಡಲ ಮೊಹಲ್ಲಾ ಓಣಿ, ಡೋರ್ ಓಣಿ, ಹರಿಜನಕೇರಿ ಓಣಿ, ಮೋಮಿನ ಮೊಹಲ್ಲಾ ಓಣಿ, ಜಮಾದಾರ ಓಣಿ, ವಡ್ಡರ ಓಣಿ, ಪಟವೇಗಾರ ಓಣಿ, ರಾಯಚೂರ ಓಣಿ ಹಾಗೂ ಮಂಜುನಾಥ ನಗರ (ಮಟಗಾರ ಓಣಿ)ಗಳನ್ನು ಹಾಗೂಸವಣೂರ ಪುರಸಭೆ ವ್ಯಾಪ್ತಿಯಲ್ಲಿ ಶುಕ್ರವಾರಪೇಟೆ ಓಣಿ, ದುಕಾನದಾರ ಓಣಿ, ಖಾದರಬಾಗ ಓಣಿ, ಉಜರೆ ಓಣಿ, ಕಮಾಲಬಂಗಡಿ ಓಣಿಗಳನ್ನು ಕೊಳಚೆ ಪ್ರದೇಶಗಳೆಂದು ಘೋಷಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.