ಶಿಗ್ಗಾವಿ: ತಾಲ್ಲೂಕಿನ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಆವರಣದಲ್ಲಿ ಶನಿವಾರ ವಿದ್ಯಾರ್ಥಿಗಳು ಸೆಮಿಸ್ಟರ್ ಫಲಿತಾಂಶ ಹಾಗೂ ಅಂಕಪಟ್ಟಿ ಸೇರಿದಂತೆ ಮೂಲ ಸೌಕರ್ಯಗಳ ಪರಿಹಾರಕ್ಕಾಗಿ ಒತ್ತಾಯಿಸಿ ಎಸ್ಎಫ್ಐ ಘಟಕ ನೇತೃತ್ವದಲ್ಲಿ ಸಭೆ ನಡೆಸಿ ಅನಿರ್ದಿಷ್ಟಾವಧಿ ಧರಣಿ ಹೋರಾಟಕ್ಕೆ ತೀರ್ಮಾನಿಸಿದರು.
ಎಲ್ಲ ವಿಭಾಗದ ವಿದ್ಯಾರ್ಥಿಗಳ ಪ್ರಥಮ, ದ್ವೀತಿಯ, ತೃತೀಯ ಸೆಮಿಸ್ಟರ್ ಫಲಿತಾಂಶ ಬಿಡುಗಡೆಗಾಗಿ ಹಾಗೂ ಮುದ್ರಿತ ಅಂಕಪಟ್ಟಿ ಸೇರಿದಂತೆ ವಿದ್ಯಾರ್ಥಿಗಳ ಅನೇಕ ಬೇಡಿಕೆ ಈಡೇರಿಸಲು ಒತ್ತಾಯಿಸಿ ಮನವಿ ಸಲ್ಲಿಸಿದರೂ ಕೆಲವು ಬೇಡಿಕೆ ಈಡೇರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು
ಜ. 27 ರಂದು ಫಲಿತಾಂಶ ಬಿಡುಗಡೆಗಾಗಿ ಕುಲಪತಿಗಳು ಭರವಸೆ ನೀಡಿದ್ದರು ಅಲ್ಲಿಯವರೆಗೆ ಕಾಯುತ್ತೇವೆ. ಒಂದು ವೇಳೆ ಭರವಸೆ ಹುಸಿಯಾದರೆ ವಿವಿ ಎದುರು ಧರಣಿ ನಡೆಸಲಾಗುವುದು ಎಂದು ಸಂಘಟನೆಯ ಜಿಲ್ಲಾ ಅಧ್ಯಕ್ಷ ಬಸವರಾಜ ಎಸ್, ಅರುಣ್ ಪಾಂಡೆ, ಸೌಭಾಗ್ಯ ಕೋಳಿವಾಡ ಎಚ್ಚರಿಕೆ ನೀಡಿದರು.
ಕಾವ್ಯ ಎಂ.ಕೆ, ಪ್ರತಿಭಾ.ಪಿ.ಬಿ, ಬಸವರಾಜ ಬಡಿಗೇರ, ಚನ್ನಪ್ಪ, ಸಹ ಕಾರ್ಯದರ್ಶಿ ಗೀತಾ.ಕೆ, ಶಿಲ್ಪಾ.ಎಸ್, ವಿನೋದಕುಮಾರ್. ಡಿ, ಉಮೇಶ್.ಟಿ, ಪ್ರಶಾಂತ, ಸಂಜಯ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.