ADVERTISEMENT

ಸಿದ್ದರಾಮೋತ್ಸವಕ್ಕೂ ರಾಜಕೀಯ ಬದಲಾವಣೆಗೂ ಸಂಬಂಧವಿಲ್ಲ: ಕೋಟ ಶ್ರೀನಿವಾಸ ಪೂಜಾರಿ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2022, 13:31 IST
Last Updated 6 ಆಗಸ್ಟ್ 2022, 13:31 IST
ಕೋಟ ಶ್ರೀನಿವಾಸ ಪೂಜಾರಿ
ಕೋಟ ಶ್ರೀನಿವಾಸ ಪೂಜಾರಿ   

ಹಾವೇರಿ: ‘ಸಿದ್ದರಾಮಯ್ಯನವರು 75 ವರ್ಷ ಆಗಿದ್ದಕ್ಕೆ ಖಾಸಗಿ ಉತ್ಸವ ಆಚರಿಸಿಕೊಂಡಿದ್ದಾರೆ. ಆ ಉತ್ಸವಕ್ಕೂ ರಾಜಕಾರಣಕ್ಕೂ ಏನೂ ಸಂಬಂಧವಿಲ್ಲ. 2023ರ ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬರುವುದು ನಿಶ್ಚಿತ’ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

ಶನಿವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಯಡಿಯೂರಪ್ಪನವರ ನಾಯಕತ್ವ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಭಿವೃದ್ಧಿ, ಸಂಘಟನಾತ್ಮಕ ಹೋರಾಟ, ಸೈದ್ಧಾಂತಿಕ ಹೋರಾಟದ ಮೂಲಕ ಅಧಿಕಾರಕ್ಕೆ ಬರುತ್ತೇವೆ ಎಂದರು.

ಸಿದ್ದರಾಮೋತ್ಸವ ಬಿಜೆಪಿಗೆ ಎಚ್ಚರಿಕೆ ಗಂಟೆ ಆಗಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಲ ಕಾಲಕ್ಕೆ ನಾವೂ ಸಂಘಟನಾತ್ಮಕ ಸಮಾವೇಶ ಮಾಡಿದ್ದೇವೆ. ಸಿದ್ದರಾಮಯ್ಯನವರು ಮಾಡಿದ್ದಾರೆ ಎನ್ನುವ ಕಾರಣಕ್ಕೆ ಬಿಜೆಪಿ ಸಮಾವೇಶ ಮಾಡುತ್ತಿಲ್ಲ ಎಂದರು.

ADVERTISEMENT

ಯಡಿಯೂರಪ್ಪ ಉತ್ತರಾಧಿಕಾರಿ:ಯಡಿಯೂರಪ್ಪ ಉತ್ತರಾಧಿಕಾರಿ ವಿಚಾರಕ್ಕೆ ಪ್ರತಿಕ್ರಿಯಿಸಿ,ಯಡಿಯೂರಪ್ಪನವರು ಪ್ರಶ್ನಾತೀತ ನಾಯಕರಲ್ಲಿ ಒಬ್ಬರು. ರಾಜ್ಯದಲ್ಲಿ ಪಕ್ಷವನ್ನು ಕಟ್ಟಿದವರು ಈಗಲು ಮುನ್ನಡೆಸುವವರು. ಯಾರು ಯಾರಿಗೂ ಉತ್ತರಾಧಿಕಾರಿಯಲ್ಲ, ವಿಜಯೇಂದ್ರ ಬಿಜೆಪಿ ಉಪಾಧ್ಯಕ್ಷರು. ಬಿಎಸ್‌ವೈ ಅವರು ವಿಜಯೇಂದ್ರ ಸೇರಿದಂತೆ ಎಲ್ಲಾ ಕಾರ್ಯಕರ್ತರಿಗೆ ಮಾರ್ಗದರ್ಶನ ಮಾಡುತ್ತಾರೆ ಎಂದರು.

ಅಮಿತ್‌ ಶಾ ತಿಳಿ ಹೇಳಿದ್ದಾರೆ: ಸಿಎಂ ಸೇರಿದಂತೆ ಬಿಜೆಪಿ ಮುಖಂಡರಿಗೆ ಅಮಿತ್ ಶಾ ತರಾಟೆಗೆ ತೆಗೆದುಕೊಂಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಪೂಜಾರಿ, ಅಮಿತ್ ಶಾ ನಮ್ಮ ಹಿರಿಯರು, ನಮ್ಮನ್ನು ಕರೆದು ರಾಜಕೀಯ ಮಾರ್ಗದರ್ಶನ ಮಾಡೋದು ರೂಢಿ. ಅಮಿತ್ ಶಾ ಅವರು ನಮ್ಮ ಪರಮೋಚ್ಛ ನಾಯಕರು. ನಮಗೆ ಸಲಹೆ, ಸೂಚನೆ ಕೊಡೋ ಜವಾಬ್ದಾರಿ ಸ್ಥಾನದಲ್ಲಿ ಇರುವುದರಿಂದ ನಮಗೆ ಅವರು ತಿಳಿ ಹೇಳಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.