ADVERTISEMENT

100 ಶಾಲೆಗಳಿಗೆ ಸ್ಮಾರ್ಟ್ ಟಿವಿ ವಿತರಣೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 7:53 IST
Last Updated 7 ಸೆಪ್ಟೆಂಬರ್ 2025, 7:53 IST
ರಾಣೆಬೆನ್ನೂರು ತಾಲ್ಲೂಕಿನ ಇಟಗಿ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ 41 ಕ್ಲಬ್‌ ಆಪ್‌ ಇಂಡಿಯಾ ಹಾಗೂ ಎಸ್ಕಾನ್ ಅಗ್ರಿಕಲ್ಚರ್ ಪ್ರೈವೇಟ್ ಲಿಮಿಟೆಡ್ ಹಾಗೂ ಪಿಕೆಕೆ ಸಂಸ್ಥೆಯ ಆಶ್ರಯದಲ್ಲಿ ತಾಲ್ಲೂಕಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಎರಡನೇ ಹಂತದ 100 ಸ್ಮಾರ್ಟ್ ಟಿವಿ ವಿತರಣೆ ಮತ್ತು ಉದ್ಘಾಟನಾ ಕಾರ್ಯಕ್ರಮದಲ್ಲಿ ದಾನಿಗಳನ್ನು ಸನ್ಮಾನಿಸಲಾಯಿತು
ರಾಣೆಬೆನ್ನೂರು ತಾಲ್ಲೂಕಿನ ಇಟಗಿ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ 41 ಕ್ಲಬ್‌ ಆಪ್‌ ಇಂಡಿಯಾ ಹಾಗೂ ಎಸ್ಕಾನ್ ಅಗ್ರಿಕಲ್ಚರ್ ಪ್ರೈವೇಟ್ ಲಿಮಿಟೆಡ್ ಹಾಗೂ ಪಿಕೆಕೆ ಸಂಸ್ಥೆಯ ಆಶ್ರಯದಲ್ಲಿ ತಾಲ್ಲೂಕಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಎರಡನೇ ಹಂತದ 100 ಸ್ಮಾರ್ಟ್ ಟಿವಿ ವಿತರಣೆ ಮತ್ತು ಉದ್ಘಾಟನಾ ಕಾರ್ಯಕ್ರಮದಲ್ಲಿ ದಾನಿಗಳನ್ನು ಸನ್ಮಾನಿಸಲಾಯಿತು   

ರಾಣೆಬೆನ್ನೂರು: ಆಧುನಿಕ ಯುಗದಲ್ಲಿ ಡಿಜಿಟಲ್‌ ಸ್ಮಾರ್ಟ್‌ ಕ್ಲಾಸ್‌ ಮಕ್ಕಳ ಭವಿಷ್ಯಕ್ಕೆ ತುಂಬಾ ಸಹಕಾರಿಯಾಗಿದೆ. ಸ್ಮಾರ್ಟ್‌ ಕ್ಲಾಸ್‌ನಿಂದ ತಂತ್ರಜ್ಞಾನ ಬಳಸಿಕೊಂಡು ಸುಲಭವಾಗಿ ಪಾಠವನ್ನು ಅರ್ಥ ಮಾಡಿಕೊಳ್ಳಬಹುದು. ವಿದ್ಯಾರ್ಥಿಗಳು ಸ್ಮಾರ್ಟ್‌ ಕ್ಲಾಸ್‌ ಸದುಪಯೋಗಪಡಿಸಿಕೊಂಡು ಶೈಕ್ಷಣಿಕ ಪ್ರಗತಿ ಸಾಧಿಸಬೇಕು ಎಂದು ಎಂದು ಎಸ್ಕಾನ್ ಅಗ್ರಿಕಲ್ಚರ್ ಪ್ರೈವೇಟ್ ಲಿಮಿಟೆಡ್‌ನ ಚೇರಮನ್‌ ಮತ್ತು ಮ್ಯಾನೇಜಿಂಗ್‌ ಡೈರೆಕ್ಟರ್‌ ಸೆಂಥಿಲ್‌ನಾಥನ್‌ ಸಂಗಟ್ಟುವೇಲು ಹೇಳಿದರು.

ತಾಲ್ಲೂಕಿನ ಇಟಗಿ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಗುರುವಾರ 41 ಕ್ಲಬ್‌ ಆಫ್‌ ಇಂಡಿಯಾ ಹಾಗೂ ಎಸ್ಕಾನ್ ಅಗ್ರಿಕಲ್ಚರ್ ಪ್ರೈವೇಟ್ ಲಿಮಿಟೆಡ್ ಹಾಗೂ ಪಿಕೆಕೆ ಸಂಸ್ಥೆಯ ಆಶ್ರಯದಲ್ಲಿ ತಾಲ್ಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಎರಡನೇ ಹಂತದ 100 ಸ್ಮಾರ್ಟ್ ಟಿವಿ ವಿತರಣೆ ಮತ್ತು ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರೈತರು ಕಾಲಕಾಲಕ್ಕೆ ತಕ್ಕಂತೆ ಬದಲಾವಣೆ ಹೊಂದಲು ಅವರ ಮಕ್ಕಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದಾಗ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಸ್ಮಾರ್ಟ್‌ ಕ್ಲಾಸ್‌ ಅವಶ್ಯಕವಾಗಿದೆ. ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳು ಉತ್ತಮವಾಗಿದ್ದು, ಈ ಸರ್ಕಾರಿ ಶಾಲೆಗಳನ್ನು ಬೆಳೆಸಬೇಕೆಂಬುದು ನಮ್ಮ ಉದ್ದೇಶವಾಗಿದೆ ಎಂದರು.

ADVERTISEMENT

ಶಾಸಕ ಪ್ರಕಾಶ ಕೋಳಿವಾಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಶಾಲೆಗಳನ್ನು ಉನ್ನತ್ತೀಕರಿಸುವುದು ಹಾಗೂ ಖಾಸಗಿ ಶಾಲೆಗಳಲ್ಲಿ ಸಿಗುವ ಸೌಲಭ್ಯವನ್ನು ಇಲ್ಲಿಯೂ ಕಲ್ಪಿಸುವ ಉದ್ದೇಶದಿಂದ 'ಸ್ಮಾರ್ಟ್‌ಕ್ಲಾಸ್‌' ತೆರೆಯಲಾಗುತ್ತಿದೆ ಎಂದರು.

ತಾಲ್ಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಎರಡನೇ ಹಂತದ 100 ಸ್ಮಾರ್ಟ್ ಟಿವಿ ವಿತರಣೆ ಮಾಡಿದ್ದಕ್ಕೆ 41 ಕ್ಲಬ್‌ಆಪ್‌ ಇಂಡಿಯಾ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.

ಎಚ್‌ಆರ್‌ ಮತ್ತು ವೆಜಿಟೆಬಲ್‌ ಸೇಲ್ಸ್‌ ಸಿಇಒ ಅನಿಲ ಮಲ್ಲಪ್ಪ, ಪ್ರೊಡಕ್ಸನ್‌ ಮ್ಯಾನೇಜರ್‌ ಸಂದೀಪ ಬಿರಾದಾರ, 41 ಕ್ಲಬ್‌ಆಪ್‌ ಇಂಡಿಯಾ ನ್ಯಾಶನಲ್‌ ಪ್ರೆಸಿಡೆಂಟ್‌ ಪಂಕುಜ್‌ ವಾಟ್ಸ್‌, ಏರಿಯಾ ಚೇರಮನ್‌ ದೀಲೀಪ್‌ ಚಂಡಕ್‌, ಖಚಾಂಚಿ ಕಿರಣ ಹೆಬಸೂರ, ಕ್ಲಬ್‌ ಅಧ್ಯಕ್ಷ ವೈದ್ಯ ಡಾ.ನಾರಾಯಣ ಹೆಬಸೂರ, ರಿಯಾಜ್‌ ಬಸರಿ, ಅಜಯ ದೀಕ್ಷೀತ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೇತ್ರಾ ಕಬ್ಬಾರ, ಎಸ್‌ಡಿಎಂಸಿ ಅಧ್ಯಕ್ಷ ಗೋವಿಂದರಡ್ಡಿ ಯರೇಶೀಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಾಮಸುಂದರ ಅಡಿಗ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಮಂಜುನಾಯಕ ಎಲ್‌, ಮುಖ್ಯ ಶಿಕ್ಷಕ ಬಸವರಾಜ ಸೋಮಕ್ಕಳವರ, ರವೀಂದ್ರಗೌಡ ಪಾಟೀಲ, ಬಿಆರ್‌ಪಿ ಗಂಗಪ್ಪ ನಾಯಯ, ಸಿಆರ್‌ಪಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.