ADVERTISEMENT

ಸಮಾಜ ಛಿದ್ರಗೊಳಿಸುವ ಕಾಂಗ್ರೆಸ್: ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2021, 4:09 IST
Last Updated 27 ಅಕ್ಟೋಬರ್ 2021, 4:09 IST
ಹಾನಗಲ್ ತಾಲ್ಲೂಕಿನ ಕೊಪ್ಪರಸಿಕೊಪ್ಪ ಗ್ರಾಮದಲ್ಲಿ ಮಂಗಳವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು
ಹಾನಗಲ್ ತಾಲ್ಲೂಕಿನ ಕೊಪ್ಪರಸಿಕೊಪ್ಪ ಗ್ರಾಮದಲ್ಲಿ ಮಂಗಳವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು   

ಹಾನಗಲ್: ಹಾನಗಲ್–ಶಿರಸಿ ರಸ್ತೆಯ ವಂಶಿ ಫಾರ್ಮ್‌ಹೌಸ್‌ನಲ್ಲಿ ಮಂಗಳವಾರ ಬೆಳಿಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಾಲ್ಲೂಕಿನ ವಿವಿಧ ಸಮುದಾಯಗಳ ಪ್ರಮುಖರ ಸಭೆ ನಡೆಸಿದರು.

ಬಳಿಕ ಕೊಪ್ಪರಸಿಕೊಪ್ಪ ಮತ್ತು ಆಡೂರ ಗ್ರಾಮಗಳಲ್ಲಿ ಬಹಿರಂಗ ಚುನಾವಣಾ ಪ್ರಚಾರ ಸಭೆಗಳಲ್ಲಿ ಅವರು ಮಾತನಾಡಿದರು. ಸಚಿವ ಶಿವರಾಮ ಹೆಬ್ಬಾರ, ಸಂಸದ ಶಿವಕುಮಾರ ಉದಾಸಿ, ಶಾಸಕ ಅಮೃತ ದೇಸಾಯಿ ಮತ್ತಿತರರು ಇದ್ದರು.

ಆಡೂರು ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಸಿ.ಎಂ ಬೊಮ್ಮಾಯಿ ಮತ್ತೆ ಕಂಬಳಿ ವಿಷಯ ಪ್ರಸ್ತಾಪಿಸಿದರು. ಕಂಬಳಿ ನೇಯ್ಗೆ ಶ್ರಮದ ಕೆಲಸ. ಈ ರಾಜ್ಯದ ಎಲ್ಲ ಶ್ರಮಿಕ ವರ್ಗಕ್ಕೆ ನನ್ನ ಗೌರವವಿದೆ ಎಂದರು.

ADVERTISEMENT

ಕೊಪ್ಪರಸಿಕೊಪ್ಪದಲ್ಲಿ ಮಾತನಾಡಿ, ಹಾನಗಲ್ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧರಿದ್ದೇವೆ. ಅಂದುಕೊಂಡ ಕಾರ್ಯಕ್ರಮಗಳನ್ನು ಒಂದೂವರೆ ವರ್ಷದಲ್ಲಿ ಪೂರ್ಣಗೊಳಿಸಿ ಮತದಾರರ ಮೆಚ್ಚುಗೆ ಪಡೆಯುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ಬ್ರಿಟಿಷರು ಹುಟ್ಟುಹಾಕಿದ ಪಕ್ಷ. ಸಮಾಜವನ್ನು ಛಿದ್ರಗೊಳಿಸಿ, ಜಾತಿ ಉಪಜಾತಿಯನ್ನಾಗಿ ಹರಿದು ಹಂಚುವುದೇ ಅದರ ಕೆಲಸ ಎಂದರು.

ಎಲ್ಲ ಜಾತಿ ಒಂದಾಗಬೇಕು. ಡಿವೈಡೆಡ್ ಬೇಡ, ಯುನೈಟೆಡ್ ರೂಲ್ ಬರಬೇಕು. ಈ ವ್ಯವಸ್ಥೆ ಹಾನಗಲ್ ಕ್ಷೇತ್ರದಲ್ಲಿ ಕಾಣುತ್ತಿದೆ. ಬಿಜೆಪಿ ಪರವಾಗಿ ಸಾಮಾಜಿಕ ಸಮೀಕರಣ ನಡೆಯುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.