ADVERTISEMENT

ವಿದ್ಯುತ್ ಕಾರ್ಯದಲ್ಲಿ ಮುಂಜಾಗೃತೆ ಮುಖ್ಯ: ಶ್ರೀನಿವಾಸ

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 13:36 IST
Last Updated 4 ಜುಲೈ 2025, 13:36 IST
ಶಿಗ್ಗಾವಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಗುರುವಾರ ನಡೆದ ವಿದ್ಯುತ್ ಸುರಕ್ಷತಾ ಸಪ್ತಾಹ ಸಮಾರಂಭದಲ್ಲಿ ಹಾವೇರಿ ವಿಭಾಗದ ವಿದ್ಯುತ್ ಪರಿವೀಕ್ಷ ಅಧಿಕಾರಿ ಶ್ರೀನಿವಾಸ ಮಾತನಾಡಿದರು.
ಶಿಗ್ಗಾವಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಗುರುವಾರ ನಡೆದ ವಿದ್ಯುತ್ ಸುರಕ್ಷತಾ ಸಪ್ತಾಹ ಸಮಾರಂಭದಲ್ಲಿ ಹಾವೇರಿ ವಿಭಾಗದ ವಿದ್ಯುತ್ ಪರಿವೀಕ್ಷ ಅಧಿಕಾರಿ ಶ್ರೀನಿವಾಸ ಮಾತನಾಡಿದರು.   

ಶಿಗ್ಗಾವಿ: ವಿದ್ಯುತ್ ಇಲಾಖೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ನೌಕರರು ತಾವು ಸುರಕ್ಷತೆಯಿಂದ ಕಾರ್ಯ ಮಾಡುವ ಮೂಲಕ ಸಾರ್ವಜನಿಕರ ಸುರಕ್ಷತೆ ಕಾಪಾಡುವುದು ಮುಖ್ಯವಾಗಿದೆ. ಅದಕ್ಕೆ ನೌಕರರಲ್ಲಿ ಮುಂಜಾಗೃತೆ ವಹಿಸುವುದು ಅವಶ್ಯವಾಗಿದೆ ಎಂದು ಹಾವೇರಿ ವಿಭಾಗದ ವಿದ್ಯುತ್ ಪರಿವೀಕ್ಷ ಅಧಿಕಾರಿ ಶ್ರೀನಿವಾಸ ಹೇಳಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಗುರುವಾರ ಹೆಸ್ಕಾಂ ಇಲಾಖೆ ವತಿಯಿಂದ ನಡೆದ ವಿದ್ಯುತ್ ಸುರಕ್ಷತಾ ಸಪ್ತಾಹ ಸಮಾರಂಭದಲ್ಲಿ ಅವರು ಮಾತನಾಡಿ, ಮನೆಗಳ ಸುರಕ್ಷತೆಗಾಗಿ ಅರ್ಥಿಂಗ್‌ ಮಾಡುವುದು ಮುಖ್ಯವಾಗಿದೆ. ಆದರೆ ಅದರ ಬಗ್ಗೆ ಸರಿಯಾಗಿ ಅರ್ಥೈಸಿಕೊಳ್ಳಬೇಕು. ಅದರ ಬಳಕೆ ಬಗ್ಗೆ ತಿಳಿಸಬೇಕು. ನೌಕರರು ಕೆಲಸ ಮಾಡುವ ಸಂದರ್ಭದಲ್ಲಿ ಸುರಕ್ಷಾ ಕವಚಗಳನ್ನು ಹಾಕಿಕೊಳ್ಳಬೇಕು. ಅದರಿಂದ ಅನಾಹುತಗಳನ್ನು ತಡೆಯಲು ಸಾಧ್ಯವಿದೆ ಎಂದರು.

ವಿದ್ಯುತ್ ಬಳಕೆ ಗ್ರಾಹಕರು ಸ್ವತಃ ವಿದ್ಯುತ್ ಕಾರ್ಯ ನಿರ್ವಹಿಸಬಾರದು. ವಿದ್ಯುತ್ ಕಂಬಗಳ ಆಧಾರ ಬಳಸಿ ಬಟ್ಟೆ ಒಣಗಿಸಲು ಸ್ಟೇ ತಂತಿಗಳನ್ನು ಬಿಗಿಯಬಾರದು. ತುಂಡಾಗಿ ನೆಲದ ಮೇಲೆ ಬಿದ್ದಿರುವ ಸ್ಥಳದಿಂದ 10 ಮೀಟರ್ ಅಂತರದಲ್ಲಿರಬೇಕು. ವಿದ್ಯುತ್ ಕಂಬಗಳಿಗೆ ದನಕರುಗಳನ್ನು ಕಟ್ಟಬಾರದು. ವಿದ್ಯುತ್ ಮಾರ್ಗದ ಕೆಳಗೆ ವಾಹನ, ಬಂಡೆಗಳನ್ನು ಸಾಗಿಸಬಾರದು ಮತ್ತು ಗಾಳಿಪಟ , ಡ್ರೋನ್ ಗಳನ್ನು ಹಾರಿಸಬಾರದು. ಅಲ್ಲದೆ ಜಾಹಿರಾತು ಬ್ಯಾನರಗಳನ್ನು ಕಟ್ಟಬಾರದು. ವಿದ್ಯುತ್ ಪರಿವರ್ತಕಗಳ ಸುತ್ತಲಿನ ಬೇಲಿ ಹತ್ತಬಾರದು. ಅವುಗಳ ಕುರಿತು ಮುಂಜಾಗೃತ ಕ್ರಮ ವಹಿಸುವುದು ಮುಖ್ಯವಾಗಿದೆ ಎಂದರು.

ADVERTISEMENT

ಹಾವೇರಿ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಬಿ.ಹೊಸಮನಿ, ಸಹಾಯಕ ಕಾರ್ಯನಿರ್ವಾಹಕ ಎಂಜನಿಯರ್‌ ವೈ.ಎಸ್.ನೀರಲಗಿ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಸ್.ಬಿ.ಹಾದಿಮನಿ, ತಾಲ್ಲೂಕು ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ನಾಗಯ್ಯ ಹಿರೇಮಠ, ಜಿಲ್ಲಾ ಘಟಕದ ಮಾಜಿ ಸದಸ್ಯ ಮಂಜುನಾಥ ಮಣ್ಣಣ್ಣವರ, ಶಂಕರ ಕಾಳಶೆಟ್ಟಿ, ಹನುಮಂತಪ್ಪ ಮರಿದ್ಯಾಮಣ್ಣವರ, ಕೆ.ಎನ್.ಅಂಗಡಿ, ದಯಾನಂದ ಸೋಲಾವರ, ಎಂ.ಬಿ.ಮಿಶ್ರಿಕೋಟಿ, ಕವಿಪ್ರನಿ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಎಸ್.ಬಂಡಿವಡ್ಡರ, ತಾಲ್ಲೂಕು ಕಾರ್ಯದರ್ಶಿ ಎನ್.ಡಿ.ವಡ್ಡರ್‌, ಸದಸ್ಯರಾದ ಎಸ್.ಬಿ.ಹಿರೇಮಠ, ಬಿ.ಡಿ.ಕಲ್ಯಾಣಕರ ಹೆಸ್ಕಾಂ ಬಂಕಾಪುರ ಘಟಕದ ಅಧಿಕಾರಿ ನಾಗರಾಜ ಕೆ, ಎಸ್.ಕೆ.ಮಾಳಿ, ಎನ್.ಎಂ.ಆದಮಬಾಯಿ, ಎ.ಎಂ.ಪತ್ತಾರ, ಹಿರಾಸಿಂಗ್ ಟೋಪಣ್ಣವರ, ಸಿ.ಎಸ್.ಅಜ್ಜನವರ, ಡಿ.ಎಸ್.ಮಾಹಾಂತೇಶ, ಎಫ್.ಜಿ.ಪೂಜಾರ ಸೇರಿದಂತೆ ಎಲ್ಲ ನೌಕರರು, ಹೆಸ್ಕಾಂ ಕಚೇರಿ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.