ADVERTISEMENT

ಹಾವೇರಿ | ವಿದ್ಯುತ್‌ ತಂತಿ ಬಿದ್ದು ವಿದ್ಯಾರ್ಥಿ ಸಾವು

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 18:37 IST
Last Updated 25 ಜುಲೈ 2025, 18:37 IST
<div class="paragraphs"><p>ಸಾವು&nbsp; (ಪ್ರಾತಿನಿಧಿಕ ಚಿತ್ರ)</p></div>

ಸಾವು  (ಪ್ರಾತಿನಿಧಿಕ ಚಿತ್ರ)

   

ಹಾವೇರಿ: ಜಿಲ್ಲೆಯ ಹಂಸಬಾವಿಯ ಶಿವಯೋಗೇಶ್ವರ ಪ್ರೌಢಶಾಲೆ ಆವರಣದಲ್ಲಿ ವಿದ್ಯುತ್ ತಂತಿ ಮೈ ಮೇಲೆ ಬಿದ್ದು ಮೊಹಮ್ಮದ್ ಶಾ ಕಲಂದರ್ ಎಂಬ ಬಾಲಕ ಮೃತಪಟ್ಟಿದ್ದಾನೆ.

‘ಮೊಹಮ್ಮದ್ ಶಾ, 4ನೇ ತರಗತಿಯಲ್ಲಿ ಓದುತ್ತಿದ್ದ. ಶುಕ್ರವಾರ ಮಧ್ಯಾಹ್ನ ಊಟದ ವಿರಾಮದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಇನ್ನಿಬ್ಬರು ಬಾಲಕರು ಗಾಯಗೊಂಡಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಹಂಸಬಾವಿ ಪೊಲೀಸರು ಹೇಳಿದರು.

ADVERTISEMENT

‘ಶಾಲೆ ಆವರಣದಲ್ಲಿನ ತೆಂಗಿನ ಮರ‌ಕ್ಕೆ ತಾಗಿಕೊಂಡು ವಿದ್ಯುತ್ ತಂತಿ ಹಾದು ಹೋಗಿದೆ. ವಿದ್ಯಾರ್ಥಿಗಳಾದ ಮೊಹಮ್ಮದ್ ಶಾ ಹಾಗೂ ಇನ್ನಿಬ್ಬರು ಸ್ನೇಹಿತರು ಮಧ್ಯಾಹ್ನ ಊಟದ ಅವಧಿಯಲ್ಲಿ ಆವರಣದಲ್ಲಿದ್ದಾಗ‌ ವಿದ್ಯುತ್‌ ತಂತಿ ಸಮೇತ ತೆಂಗಿನ ಮರ‌ ಬಿದ್ದಿತು. ವಿದ್ಯುತ್‌ ತಂತಿಯು ಮೊಹಮ್ಮದ್ ಶಾ ಮೈ ಮೇಲೆ ಬಿತ್ತು. ಇದೇ ವೇಳೆ ಅಕ್ಕ–ಪಕ್ಕದಲ್ಲಿದ್ದ ಸ್ನೇಹಿತರಿಬ್ಬರಿಗೂ ವಿದ್ಯುತ್‌ ತಂತಿ ತಗುಲಿತು’ ಎಂದರು.

‘ಮೂವರೂ ವಿದ್ಯಾರ್ಥಿಗಳನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಮೊಹಮ್ಮದ್ ಶಾ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದರು. ಇನ್ನಿಬ್ಬರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ’ ಎಂದು ಹೇಳಿದರು.

‘ಬಾಲಕನ ಸಾವಿಗೆ ಸಂಬಂಧಪಟ್ಟಂತೆ ಪೋಷಕರು ದೂರು ನೀಡಿಲ್ಲ’ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.