
ರಟ್ಟೀಹಳ್ಳಿ: ತಾಲ್ಲೂಕಿನಾದ್ಯಂತ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಳ್ಳುವಂತೆ ನೇಮಿಸಿದ್ದು, ಹಲವಾರು
ಹಲವು ತಾಂತ್ರಿಕ ತೊಂದರೆಗಳಿಂದಾಗಿ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಕಾರ್ಯಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಬುಧವಾರ ರಟ್ಟೀಹಳ್ಳಿ ತಹಶೀಲ್ದಾರ್ ಶ್ವೇತಾ ಅಮರಾವತಿ ಅವರಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ರಟ್ಟೀಹಳ್ಳಿ ತಾಲ್ಲೂಕು ಘಟಕವು ಮನವಿ ಸಲ್ಲಿಸಿದೆ.
ಸಮೀಕ್ಷಾ ಆ್ಯಪ್ ತೆರೆಯುತ್ತಿಲ್ಲ. ಒ.ಟಿ.ಪಿ. ಬರುತ್ತಿಲ್ಲ ಮತ್ತು ನಿಗದಿಪಡಿಸಿದ ಸಮೀಕ್ಷಾ ಕ್ಷೇತ್ರವನ್ನು ಹುಡುಕುವುದು ತುಂಬಾ ಕಷ್ಟವಾಗಿದೆ. ಸಮೀಕ್ಷೆಗೆ ನಿಗದಪಡಿಸಿದ ಕ್ಷೇತ್ರದಲ್ಲಿ ಆರ್.ಆರ್. ನಂಬರ ಮತ್ತು ಯು.ಹೆಚ್.ಐ.ಡಿ. ನಂಬರಗಳು ಸಿಗುತ್ತಿಲ್ಲ. ದಿನಕ್ಕೆ ಒಂದು ಮನೆ ಸಮೀಕ್ಷೆ ಕೂಡ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಸಮೀಕ್ಷೆ ಕಾರ್ಯದ ಶಿಕ್ಷಕರು ತಮ್ಮ ಅಳಲು ತೋಡಿಕೊಂಡರು.
ಸಮೀಕ್ಷಾ ಕ್ಷೇತ್ರವು ಮೂರಕ್ಕೂ ಹೆಚ್ಚು ಹಳ್ಳಿಗಳನ್ನು ಒಳಗೊಂಡಿದೆ. ಇದರಿಂದ ಶಿಕ್ಷಕರಿಗೆ ಬಹಳ ತೊಂದರೆಯಾಗಿದೆ. ಸಮೀಕ್ಷಾ ಆ್ಯಪ್ ಸರಿಪಡಿಸುವವರೆಗೂ ಸಮೀಕ್ಷಾ ಕಾರ್ಯವನ್ನು ಮುಂದೂಡಬೇಕೆಂದು ಮನವಿಯಲ್ಲಿ ವಿನಂತಿಸಿದರು.
ಈ ಸಂದರ್ಭದಲ್ಲಿ ಸಮೀಕ್ಷೆಕಾರ್ಯಕ್ಕೆ ನಿಯೋಜನೆಗೊಂಡ ಶಿಕ್ಷಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.