ಗುತ್ತಲ: ಅಕ್ಕೂರ ಮತ್ತು ಮರಡೂರ ಗ್ರಾಮಗಳ ಮಧ್ಯೆ ವದರಾ ನದಿಗೆ ನಿರ್ಮಿಸಿರುವ ಬ್ರಿಡ್ಜ್ ಕಂ ಬ್ಯಾರೇಜ್ ಮೇಲಿಂದ ನದಿಗೆ ಟ್ರ್ಯಾಕ್ಟರ್ ಬಿದ್ದ ಘಟನೆ ಮಂಗಳವಾರ ನಡೆದಿದೆ.
ಮಾರಾಟಕ್ಕೆಂದು ಟ್ರ್ಯಾಕ್ಟರ್ ಮೇಲೆ ಮರಡೂರ ಗ್ರಾಮದಿಂದ 5 ಚೀಲ ಹಸಿಮೆಣಸಿಕಾಯಿ ಹಾಕಿಕೊಂಡು ಅಕ್ಕೂರ ಗ್ರಾಮಕ್ಕೆ ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಬರುವ ಮುನ್ನವೇ ನೂರಾರು ರೈತರು ಒಂದು ದಡದಿಂದ ಇನ್ನೊಂದು ದಡಕ್ಕೆ ಹಗ್ಗ ಹಾಕಿ, ಹಗ್ಗದ ತುದಿಗೆ ಕ್ಯಾನ್ ಕಟ್ಟಿ ಬಿಟ್ಟಿದ್ದಾರೆ. ನದಿಗೆ ಬಿದ್ದ ದೀಪಕ್ ದೊಡ್ಡಗೌಡ್ರ ಮತ್ತು ಸಂತೋಷ ಪಾಟೀಲ್ ಅವರನ್ನು ರಕ್ಷಣೆ ಮಾಡಲಾಗಿದೆ.
ನದಿಗೆ ಬಿದ್ದ ಇಬ್ಬರನ್ನು ರಕ್ಷಣೆ ಮಾಡಲು ನದಿಗೆ ಹಾರಿದ ಫಕ್ಕೀರಪ್ಪ ಕಾಕೋಳ ಪವಾಡ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬ್ಯಾರೇಜಿಗೆ ತಡೆಗೋಡೆ ಇಲ್ಲದ ಕಾರಣ ಈ ದುರಂತ ಸಂಭವಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.