ADVERTISEMENT

ಎಪಿಎಂಸಿ ವರ್ತಕರಿಗೆ ಲಸಿಕೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2021, 17:50 IST
Last Updated 18 ಜೂನ್ 2021, 17:50 IST
ಹಾವೇರಿ ಎಪಿಎಂಸಿಯಲ್ಲಿ ಶುಕ್ರವಾರ ವರ್ತಕರು ಮತ್ತು ಶ್ರಮಿಕರಿಗೆ ಮೊದಲನೇ ಕೋವಿಡ್‌ ಲಸಿಕೆ ಹಾಕಲಾಯಿತು. ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ ಇದ್ದಾರೆ  
ಹಾವೇರಿ ಎಪಿಎಂಸಿಯಲ್ಲಿ ಶುಕ್ರವಾರ ವರ್ತಕರು ಮತ್ತು ಶ್ರಮಿಕರಿಗೆ ಮೊದಲನೇ ಕೋವಿಡ್‌ ಲಸಿಕೆ ಹಾಕಲಾಯಿತು. ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ ಇದ್ದಾರೆ     

ಹಾವೇರಿ: ಎಪಿಎಂಸಿಯಲ್ಲಿ ಕಾರ್ಯನಿರ್ವಹಿಸುವ ವರ್ತಕರು, ಶ್ರಮಿಕರು ಸೇರಿ ವಿವಿಧ ಸಿಬ್ಬಂದಿಗೆ ಮೊದಲ ಹಂತದ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಶುಕ್ರವಾರ ನಗರದ ಗುತ್ತಲ ರಸ್ತೆಯಲ್ಲಿರುವ ಎಪಿಎಂಸಿ ಕಚೇರಿಯಲ್ಲಿ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ರೈತರ ಉತ್ಪನ್ನವನ್ನು ನಿತ್ಯ ಖರೀದಿಸುವ ವಹಿವಾಟು ನಡೆಸುವವರಿಗೂ ಲಸಿಕೆಯ ಅವಶ್ಯವಿತ್ತು. ಈ ಕುರಿತು ಜಿಲ್ಲಾಧಿಕಾರಿ ಹಾಗೂ ಡಿಎಚ್‌ಒ ಅವರಿಗೆ ಮನವಿಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿ ಎಲ್ಲರಿಗೂ ಲಸಿಕೆ ಹಾಕಲು ಅವಕಾಶ ಕಲ್ಪಿಸಿದ್ದಾರೆ. ಮುಂದಿನ ಹಂತದಲ್ಲಿ ತರಕಾರಿ ಹಾಗೂ ಜಾನುವಾರು ಮಾರುಕಟ್ಟೆಯ ವರ್ತಕರು ಹಾಗೂ ಸಿಬ್ಬಂದಿಗೆ ಲಸಿಕೆಯನ್ನು ವಿತರಿಸಲು ಜಿಲ್ಲಾಧಿಕಾರಿಗೆ ಮನವಿ ಮಾಡಲಾಗುವುದು. ಈ ಲಸಿಕಾ ಕಾರ್ಯಕ್ರಮದಲ್ಲಿ 660 ಜನರಿಗೆ ಲಸಿಕೆ ಹಾಕಲಾಗಿದೆ ಎಂದರು.

ಎಪಿಎಂಸಿ ಸದಸ್ಯರಾದ ವಿರೂಪಾಕ್ಷಪ್ಪ ಬಣಕಾರ, ರಮೇಶ ಚಾವಡಿ, ಶಾಂತಪ್ಪ ಅಟವಾಳಗಿ, ವನಜಾಕ್ಷಿ ಬಾಳಿ, ಉಮೇಶ ಮಾಗಳ, ಸಿದ್ದಮ್ಮ ಮುದಿಗೌಡ್ರ, ಕಾರ್ಯದರ್ಶಿ ಪರಮೇಶ್ವರ ನಾಯಕ, ಉಪ ಕಾರ್ಯದರ್ಶಿ ನಾಗರಾಜ ಕೋಟೇರ, ವರ್ತಕರಾದ ಗುರುರಾಜ ಮಹಾಂತ, ಶಿವರಾಜ ಮರ್ತೂರ, ಉಮೇಶ ಬಳ್ಳಾರಿ, ರಾಘವೇಂದ್ರ ಕಾರಂತ, ಆರೋಗ್ಯಾಧಿಕಾರಿ ಅಮೃತಗೌಡ ಪಾಟೀಲ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.