ADVERTISEMENT

ರಾಣೆಬೆನ್ನೂರು | ವೈಕುಂಠ ಏಕಾದಶಿ: ಗೋವಿಂದ ನಾಮಸ್ಮರಣೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 3:18 IST
Last Updated 31 ಡಿಸೆಂಬರ್ 2025, 3:18 IST
ರಾಣೆಬೆನ್ನೂರಿನ ವಾಗೀಶನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ಮಂಗಳವಾರ ವೈಕುಂಠ ಏಕಾದಶಿ ಆಚರಿಸಲಾಯಿತು  
ರಾಣೆಬೆನ್ನೂರಿನ ವಾಗೀಶನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ಮಂಗಳವಾರ ವೈಕುಂಠ ಏಕಾದಶಿ ಆಚರಿಸಲಾಯಿತು     

ರಾಣೆಬೆನ್ನೂರು: ಇಲ್ಲಿನ ವಾಗೀಶನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ಮಂಗಳವಾರ ವೈಕುಂಠ ಏಕಾದಶಿ ಅದ್ದೂರಿಯಾಗಿ ಆಚರಿಸಲಾಯಿತು. ದೇವಸ್ಥಾನಕ್ಕೆ ವಿಶೇಷ ಹೂವು ಹಾಗೂ ವಿದ್ಯುತ್‌ ದೀಪದಿಂದ ಅಲಂಕರಿಸಲಾಗಿತ್ತು.

ಬೆಳಿಗ್ಗೆ ಸುಪ್ರಭಾತ ಸೇವೆ, ಅಭಿಷೇಕ, ಬೆಳ್ಳಿ ಅಲಂಕಾರ, ವೈಕುಂಠ ದ್ವಾರ ದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ, ಜಪಯಜ್ಞ, ಮಹಾಪೂಜೆ, ಭಜನೆ, ವೇದ ಪಾರಾಯಣ ಸೇರಿದಂತೆ ವಿವಿಧ ಕಾರ್ಯಕ್ರಮ ನಡೆಸಲಾಯಿತು. ಸಂಜೆ ಹಾಸ್ಯ ಮತ್ತು ರಸಮಂಜರಿ ಕಾರ್ಯಕ್ರಮ ನಡೆಯಿತು.

ದೇವಸ್ಥಾನದ ಆವರಣದಲ್ಲಿ ನಿರ್ಮಿಸಿದ ವೈಕುಂಠ ದ್ವಾರದ ಮೂಲಕ ಭಕ್ತರು ದೇವರ ದರ್ಶನ ಪಡೆದರು. ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು.

ADVERTISEMENT

ಅರ್ಚಕ ಗೋವಿಂದ ಚಿಮ್ಮಲಗಿ ಅವರು ಮಾತನಾಡಿದರು. ಶಾಸಕ ಪ್ರಕಾಶ ಕೋಳಿವಾಡ, ನಗರಯೋಜನಾ ಪ್ರಾಧಿಕಾರ ಅಧ್ಯಕ್ಷ ವಿರೇಶ ಮೋಟಗಿ, ಸದಸ್ಯ ಗುರುರಾಜ ಕಂಬಳಿ, ಮಾಜಿ ಶಾಸಕ ಅರುಣಕುಮಾರ ಪೂಜಾರ, ಮಂಗಳಗೌರಿ ಪೂಜಾರ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಏಕನಾಥ ಬಾನುವಳ್ಳಿ, ಸಂತೋಷ ಪಾಟೀಲ, ಸೀತಾರಾಮರಡ್ಡಿ, ಮಧು ಕೋಳಿವಾಡ, ಡಾ.ಮನೋಜ ಸಾವುಕಾರ, ಶ್ರೀನಿವಾಸ ಸಾವುಕಾರ, ರುಕ್ಮಿಣಿ ಸಾಹುಕಾರ, ಡಾ. ಬಸವರಾಜ ಕೇಲಗಾರ, ನಗರಸಭೆ ಮಾಜಿ ಅಧ್ಯಕ್ಷೆ ಚಂಪಕಾ ಬಿಸಲಹಳ್ಳಿ ಸೇರಿದಂತೆ ಮುಂತಾದವರು ಇದ್ದರು.

ರಾಣೆಬೆನ್ನೂರಿನ ವಾಗೀಶನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ವೆಂಕಟೇಶ್ವರ ಮೂರ್ತಿಗೆ ಬೆಳ್ಳಿಯ ಕವಚ ತೊಡಿಸಿ ವಿವಿಧ ಹೂ ತುಳಸಿ ಮತ್ತು ಹಣ್ಣಗಳ ಅಲಂಕಾರ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.