ADVERTISEMENT

ಹಾನಗಲ್ | ವಾಲ್ಮೀಕಿ ಜಾತ್ರೆ: ಪೋಸ್ಟರ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2024, 16:00 IST
Last Updated 29 ಡಿಸೆಂಬರ್ 2024, 16:00 IST
ಹಾನಗಲ್‌ನಲ್ಲಿ ಫೆಬ್ರುವರಿಯಲ್ಲಿ ನಡೆಯುವ ವಾಲ್ಮೀಕಿ ಜಾತ್ರೆಯ ಪೋಸ್ಟರ್‌ಅನ್ನು ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಶನಿವಾರ ಬಿಡುಗಡೆ ಮಾಡಿದರು
ಹಾನಗಲ್‌ನಲ್ಲಿ ಫೆಬ್ರುವರಿಯಲ್ಲಿ ನಡೆಯುವ ವಾಲ್ಮೀಕಿ ಜಾತ್ರೆಯ ಪೋಸ್ಟರ್‌ಅನ್ನು ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಶನಿವಾರ ಬಿಡುಗಡೆ ಮಾಡಿದರು   

ಹಾನಗಲ್: ಹರಿಹರ ತಾಲ್ಲೂಕು ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಫೆಬ್ರುವರಿ 8 ಮತ್ತು 9 ರಂದು ನಡೆಯುವ ಮಹರ್ಷಿ ವಾಲ್ಮೀಕಿ ಜಾತ್ರೆಯ ಕುರಿತು ಶನಿವಾರ ಪಟ್ಟಣದಲ್ಲಿ ಪೂರ್ವಬಾವಿ ಸಭೆ ನಡೆಯಿತು.

ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಾತ್ರೆಯ ಪೋಸ್ಟರ್ ಬಿಡುಗಡೆ ಮಾಡಿದರು. ಮಹಾರಥೋತ್ಸವ ಮತ್ತು ಜಾತ್ರೆಯ ಯಶಸ್ಸಿಗೆ ಸದ್ಭಕ್ತರು ಸಹಕಾರ ನೀಡಬೇಕು ಎಂದರು.

ಮಹರ್ಷಿ ವಾಲ್ಮೀಕಿ ನಾಯಕ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪರಶುರಾಮ ಮುನಿಯಣ್ಣನವರ, ಉಪಾಧ್ಯಕ್ಷರಾದ ರಾಮಣ್ಣ ಮಡ್ಲೂರ, ರವಿ ಲಕ್ಮಾಪೂರ, ಪುಟ್ಟಪ್ಪ ನರೇಗಲ್, ಶಿವಾನಂದ ಕನ್ನಕ್ಕನವರ, ಕಾರ್ಯದರ್ಶಿ ಸತೀಶ ಅಂಕೋಲ, ಬಸಣ್ಣ ಡುಮ್ಮನವರ ಮತ್ತು ಪ್ರಮುಖರಾದ ಪ್ರಕಾಶ ಯಳ್ಳೂರ, ಪ್ರಕಾಶ ನಂದಿಕೊಪ್ಪ, ಶಿವಣ್ಣ ಅರಳೇಶ್ವರ, ಶಿವಣ್ಣ ಮಾಸನಕಟ್ಟಿ, ಮಹೇಂದ್ರ ಬಿಳಗಲಿ, ಶಿವು ತಳವಾರ, ವಸಂತ ವಾಸನದ, ಸುಭಾಸ ಮಾವಕೊಪ್ಪ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.