ADVERTISEMENT

ಹಾವೇರಿ: ‘ಹೆಣ್ಣು ಮಾಯೆಯಲ್ಲ, ಪ್ರತ್ಯಕ್ಷ ದೇವತೆ’

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2021, 17:28 IST
Last Updated 9 ಮಾರ್ಚ್ 2021, 17:28 IST
ಹಾವೇರಿಯ ಹೊಸಮಠದಲ್ಲಿ ಸೋಮವಾರ ಮಹಿಳಾ ದಿನಾಚರಣೆ ಅಂಗವಾಗಿ ಅಕ್ಕಮಹಾದೇವಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಬಸವಶಾಂತಲಿಂಗ ಸ್ವಾಮೀಜಿ ಮತ್ತು ಅಕ್ಕನ ಬಳಗದ ಸದಸ್ಯರು ಇದ್ದಾರೆ 
ಹಾವೇರಿಯ ಹೊಸಮಠದಲ್ಲಿ ಸೋಮವಾರ ಮಹಿಳಾ ದಿನಾಚರಣೆ ಅಂಗವಾಗಿ ಅಕ್ಕಮಹಾದೇವಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಬಸವಶಾಂತಲಿಂಗ ಸ್ವಾಮೀಜಿ ಮತ್ತು ಅಕ್ಕನ ಬಳಗದ ಸದಸ್ಯರು ಇದ್ದಾರೆ    

ಹಾವೇರಿ: ‘ಬಸವಾದಿ ಶರಣರು ಸ್ತ್ರೀಯರಿಗೆ ಪ್ರಾಪಂಚಿಕ ಮತ್ತು ಪಾರಮಾರ್ಥ ಎರಡು ನೆಲೆಗಳಲ್ಲಿಯೂ ಸಮಾನ ಅವಕಾಶ ಮಾಡಿಕೊಟ್ಟರು. ಹೆಣ್ಣು ಮಾಯೆಯಲ್ಲ, ಪ್ರತ್ಯಕ್ಷ ದೇವತೆ ಎಂಬುದು ಶರಣರ ಸಂದೇಶ’ ಎಂದು ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ನುಡಿದರು.

ನಗರದ ಹೊಸಮಠ ಹಾಗೂ ಅಕ್ಕಮಹಾದೇವಿ ಮಹಿಳಾ ಬಳಗದ ಆಶ್ರಯದಲ್ಲಿ ‘ವಿಶ್ವ ಮಹಿಳಾ ದಿನಾಚರಣೆ’ ಅಂಗವಾಗಿ ಅಕ್ಕಮಹಾದೇವಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ಸಾಮಾಜಿಕ, ಆರ್ಥಿಕ, ನೈತಿಕ, ಆಧ್ಯಾತ್ಮಿಕ ಮುಂತಾದ ಎಲ್ಲಾ ರಂಗಗಳಲ್ಲಿ ಮಹಿಳೆಯನ್ನು ಉನ್ನತ ಮಟ್ಟಕ್ಕೇರಿಸಿದ ಕೀರ್ತಿ ಬಸವಾದಿ ಶಿವಶರಣರದ್ದು. ವಚನ ಸಾಹಿತ್ಯ ಜನಪರ ಆಂದೋಲನದ ಧ್ವನಿಯಾಗಿದೆ ಎಂದರು.

ADVERTISEMENT

ಅಕ್ಕನ ಬಳಗದ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.