ADVERTISEMENT

‘ಗ್ರಾಮೀಣ ಆರ್ಥಿಕತೆಗೆ ‘ಸಹಕಾರ’ ಬುನಾದಿ’: ಶಿವಾನಂದ ರಾಮಗೇರಿ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 3 ಜನವರಿ 2024, 4:59 IST
Last Updated 3 ಜನವರಿ 2024, 4:59 IST

ಶಿಗ್ಗಾವಿ: ಸಹಕಾರಿ ಸಂಘಗಳು ಗ್ರಾಮೀಣ ಜನರ ಆರ್ಥಿಕ ಬೆಳವಣಿಗೆಗೆ ಬುನಾದಿಯಾಗಿವೆ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಶಿವಾನಂದ ರಾಮಗೇರಿ ಹೇಳಿದರು.

ತಾಲ್ಲೂಕಿನ ಮುಗಳಿ ಗ್ರಾಮದಲ್ಲಿ ಧಾರವಾಡ ಕೆಸಿಸಿ ಬ್ಯಾಂಕ್, ನಬಾರ್ಡ್‌, ಆರ್ಥಿಕ ಸಾಕ್ಷರತಾ ಯೋಜನೆಯಡಿ ಮಂಗಳವಾರ ಏರ್ಪಡಿಸಿದ್ದ ಬ್ಯಾಂಕಿನ ಆರ್ಥಿಕ ಹಾಗೂ ಡಿಜಿಟಲ್ ಸೇವಾ ಸೌಲಭ್ಯಗಳ ಬಗ್ಗೆ ತಿಳಿವಳಿಕೆ ಕಾರ್ಯಾಗಾರ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಪದಾಧಿಕಾರಿಗಳ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಘ, ಸಂಘಟನೆಗಳ ಕಾರ್ಯ ಪಾರದರ್ಶಕ ಇದ್ದರೆ ಮಾತ್ರ ಅವುಗಳ ಬೆಳವಣಿಗೆ ಸಾಧ್ಯವಿದೆ. ಹೀಗಾಗಿ ಇಲ್ಲಿನ ಪತ್ತಿನ ಸಹಕಾರಿ ಸಂಘ ಜನಪರ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಹೆಮ್ಮರವಾಗಿ ಬೆಳೆಯಲು ಸಾಧ್ಯವಾಗಿದೆ. ರಾಜ್ಯದಲ್ಲಿ ಸುಮಾರು 21 ವಿವಿಧ ಸಹಕಾರಿ ಸಂಘಗಳಿದ್ದು, ಅದಕ್ಕೆ ಸಹಕಾರವೇ ಆಧಾರ ಸ್ತಂಭವಾಗಿದೆ ಎಂದರು.

ADVERTISEMENT

ಸಹಕಾರಿ ದುರೀಣ ರವಿ ಕುಡವಕ್ಕಲಿಗೇರ, ಬಸವೇಶ್ವರ ಸಹಕಾರಿ ಸಂಘದ ಅಧ್ಯಕ್ಷ ಶಿವಾನಂದ ಕಮಡೋಳ್ಳಿ ಮಾತನಾಡಿದರು.

ಕಂಪನಿ ಅಧಿಕಾರಿ ನವೀಣಕುಮಾರ, ನಬಾರ್ಡ್‌ ಬ್ಯಾಂಕ್‌ ಅಧಿಕಾರಿ ಎಸ್.ಎಂ.ನೀಲಗುಂದ ಉಪನ್ಯಾಸ ನೀಡಿದರು. ನೂತನ ಪದಾಧಿಕಾರಿಗಳನ್ನು ಸನ್ಮಾನಿಸಿ, ಪ್ರಮಾಣ ಪತ್ರ ನೀಡಲಾಯಿತು. ಬ್ಯಾಂಕಿನ ಹೊಸ ಪಾಸ್ ಬುಕ್‌ಗಳನ್ನು ವಿತರಿಸಲಾಯಿತು.

ಬಸಪ್ಪ ಭದ್ರಶೆಟ್ಟಿ, ಸುಭಾಸ ಕತ್ತಿ, ಬಸವಣ್ಣೆಪ್ಪ ದುಂಡಪ್ಪನವರ, ಕಲ್ಲಪ್ಪ ತಳವಾರ,ಯಲ್ಲಪ್ಪ ಬೆಂಗೇರಿ,ಬಸವರಾಜ ಪೂಜಾರ, ನಾಗನಗೌಡ ಪಾಟೀಲ, ಯಲ್ಲಪ್ಪ ಹರಿಜನ, ಉಳವನಗೌಡ ಪಾಟೀಲ, ಪ್ರೇಮವ್ವ ಭರಮಗೌಡ್ರ, ನೀಲವ್ವ ತೋಪಗಿ, ಬ್ಯಾಂಕ್ ನಿರೀಕ್ಷಕ ಎಸ್.ಬಿ. ನೀಲಗುಂದ, ಪತ್ತಿನ ಸಹಕಾರಿ ಬ್ಯಾಂಕಿನ ಮುಖ್ಯಕಾರ್ಯನಿವಾರ್ಹಕ ಅಧಿಕಾರಿ ಸುಮಂಗಲಾ ಬೆಂಗೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.