ADVERTISEMENT

ಯುವಕರು ದುಶ್ಚಟಗಳಿಂದ ದೂರವಿರಿ: ಸದಾಶಿವವ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 4:28 IST
Last Updated 17 ನವೆಂಬರ್ 2025, 4:28 IST
ಹಾವೇರಿ ಹುಕ್ಕೇರಿಮಠದ ಶಿಕ್ಷಣ ಸಂಸ್ಥೆಗಳ ಸುವರ್ಣ ಮಹೋತ್ಸವ, ಜಾತ್ರಾ ಮಹೋತ್ಸವ, ಹಾಗೂ ಪ್ರಸಾದ ನಿಲಯದ ಅಮೃತೋತ್ಸವ ಮತ್ತು ರಜತ ತುಲಾಭಾರ ಕಾರ್ಯಕ್ರಮದ ಅಂಗವಾಗಿ ನಡೆದ ಜನಜಾಗೃತಿ ಪಾದಯಾತ್ರೆಯ ಸಭೆಯಲ್ಲಿ ಪಾಲ್ಗೊಳ್ಳಲು ಗುತ್ತಲ ಪಟ್ಟಣಕ್ಕೆ ಬಂದ ಸದಾಶಿವ ಸ್ವಾಮೀಜಿ ನೇತೃತ್ವದ ಸ್ವಾಮೀಜಿಗಳ ತಂಡವನ್ನು ಭಕ್ತರು ಸ್ವಾಗತಿಸಿದರು
ಹಾವೇರಿ ಹುಕ್ಕೇರಿಮಠದ ಶಿಕ್ಷಣ ಸಂಸ್ಥೆಗಳ ಸುವರ್ಣ ಮಹೋತ್ಸವ, ಜಾತ್ರಾ ಮಹೋತ್ಸವ, ಹಾಗೂ ಪ್ರಸಾದ ನಿಲಯದ ಅಮೃತೋತ್ಸವ ಮತ್ತು ರಜತ ತುಲಾಭಾರ ಕಾರ್ಯಕ್ರಮದ ಅಂಗವಾಗಿ ನಡೆದ ಜನಜಾಗೃತಿ ಪಾದಯಾತ್ರೆಯ ಸಭೆಯಲ್ಲಿ ಪಾಲ್ಗೊಳ್ಳಲು ಗುತ್ತಲ ಪಟ್ಟಣಕ್ಕೆ ಬಂದ ಸದಾಶಿವ ಸ್ವಾಮೀಜಿ ನೇತೃತ್ವದ ಸ್ವಾಮೀಜಿಗಳ ತಂಡವನ್ನು ಭಕ್ತರು ಸ್ವಾಗತಿಸಿದರು   

ಗುತ್ತಲ: ‘ಜನಜಾಗೃತಿ ಪಾದಯಾತ್ರೆಯ ಮುಖ್ಯ ಸಂಕಲ್ಪವೇ ವ್ಯಸನ ಮುಕ್ತ ಹಾಗೂ ಯುವ ಸಮುದಾಯವನ್ನು ದುಶ್ಚಟಗಳಿಂದ ಮುಕ್ತ ಮಾಡುವ ಸಂಕಲ್ಪವಾಗಿದೆ. ಪಾದಯಾತ್ರೆಯಲ್ಲಿ ‘ದುಶ್ಚಟಗಳ ಭಿಕ್ಷೆ ಸದ್ಗುಣ ದೀಕ್ಷೆ’ ಎಂಬ ಸಂಕಲ್ಪ ಮುಖ್ಯವಾಗಿದೆ’ ಎಂದು ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.

ಗುತ್ತಲ ಪಟ್ಟಣದಲ್ಲಿ ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಶಿಕ್ಷಣ ಸಂಸ್ಥೆಗಳ ಸುವರ್ಣ ಮಹೋತ್ಸವ, ಜಾತ್ರಾ ಮಹೋತ್ಸವ, ಹಾಗೂ ಪ್ರಸಾದ ನಿಲಯದ ಅಮೃತೋತ್ಸವ ಮತ್ತು ರಜತ ತುಲಾಭಾರ ಕಾರ್ಯಕ್ರಮದ ಅಂಗವಾಗಿ ನಡೆದ ಜನಜಾಗೃತಿ ಪಾದಯಾತ್ರೆ ಕಾರ್ಯಕ್ರಮದಲ್ಲಿ  ಪಾಲ್ಗೊಂಡು ಮಾತನಾಡಿದ ಅವರು, ಅಂದಿನ ದಿನಮಾನಗಳಲ್ಲಿ ಬಡ ವಿದ್ಯಾರ್ಥಿಗಳಿಗೆ ಹೊಟ್ಟೆಗೆ ಅನ್ನವನ್ನು ಕೊಟ್ಟು ನೆತ್ತಿಗೆ ವಿದ್ಯೆಯನ್ನು ಧಾರೆಯೆರೆದ ಮಠ ಮಾನ್ಯಗಳಲ್ಲಿ ಹುಕ್ಕೇರಿಮಠವೂ ಒಂದಾಗಿದೆ, ಹುಕ್ಕೇರಿಮಠದ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಜೊತೆಗೆ ಉತ್ತಮ ಆಚಾರ ವಿಚಾರ ಮತ್ತು ಒಳ್ಳೆಯ ಸಂಸ್ಕಾರವನ್ನು ನೀಡುತ್ತಿದೆ. ಐವತ್ತು ಅರವತ್ತು ವರ್ಷಗಳ ಹಿಂದೆ ಶಾಲೆಗಳ ಕೊರತೆ ಬಹಳಯಿತ್ತು. ಅಂತಹ ಕಾಲದಲ್ಲಿ ಮಠಗಳಲ್ಲಿ ಶಿಕ್ಷಣ ನೀಡಿ ಸಮಾಜದ ಸುಧಾರಣೆಯಲ್ಲಿ ಮಠಗಳು ಮುಖ್ಯ ಪಾತ್ರವಹಿಸಿದ್ದವು. ನಾಡಿನಲ್ಲಿ ಸರ್ಕಾರ ಮಾಡಲಾಗದ ಕೆಲಸಗಳನ್ನು ಮಠಮಾನ್ಯಗಳು ಮಾಡಿವೆ’ ಎಂದರು.

ಅಕ್ಕಿಆಲೂರಿನ ಶಿವಬಸವ ಸ್ವಾಮೀಜಿ ಮಾತನಾಡಿ, ಪರಮಪೂಜ್ಯರ ಜೊತೆ ಪಾದಯಾತ್ರೆ ಮಾಡುವ ಸೌಭಾಗ್ಯ ದೊರೆಯುವುದು ಪುಣ್ಯವಂತರಿಗೆ ಮಾತ್ರ. ಮಠಮಾನ್ಯಗಳು ಶಿಕ್ಷಣ ಕ್ಷೇತ್ರದಲ್ಲಿ ತನ್ನದೇಯಾದ ಪ್ರಾಮುಖ್ಯವನ್ನು ನೀಡಿದೆ. ಪಾದಯಾತ್ರೆ ಎಂಬುದು ಒಂದು ಪುಣ್ಯದ ಸಂಕೇತವಾಗಿದೆ. ಉತ್ತರ ಕರ್ನಾಟಕ ಭಾಗದ ವೀರಶೈವ ಮಠಗಳ ಕೊಡುಗೆ ಅಪಾರವಾಗಿದೆ. ಈ ಭಾಗದ ಮಠಗಳು ನಾಡಿಗೆ ಉತ್ತಮ ಸೇವೆ ನೀಡುವ ಜೊತೆಗೆ ಶಿಕ್ಷಣ ಕ್ರಾಂತಿಯನ್ನು ಮಾಡಿವೆ ಎಂದರು.

ADVERTISEMENT

ಕಾರ್ಯಕ್ರಮದಲ್ಲಿ ನಂಜುಂಡ ಪಂಡಿತಾರಾಧ್ಯ ಸ್ವಾಮೀಜಿ, ವೀರಬಸವ ದೇವರು, ಮಲ್ಲಿಕಾರ್ಜುನ ದೇವರು, ರಾಮಕೃಷ್ಣ ದೇವರು. ಮುಖಂಡರಾದ ಸಿ.ಬಿ ಕುರವತ್ತಿಗೌಡ್ರ, ಕೊಟ್ರಯ್ಯ ಕೋವಳ್ಳಿಮಠ, ಚನ್ನಪ್ಪ ಕಲಾಲ, ಅಜ್ಜಪ್ಪ ತರ್ಲಿ, ಸಂಗಯ್ಯಸ್ವಾಮಿ ಭೂಸನೂರಮಠ, ಅಜ್ಜಪ್ಪ ಬೆನ್ನೂರ, ವಿಶ್ವನಾಥ ಮನ್ನಂಗಿ, ಗುಡ್ಡಪ್ಪ ಗೊರವರ, ಪ್ರದೀಪ ಸಾಲಗೇರಿ, ಪರಮೇಶ ಹೇಮಗಿರಿಮಠ, ಶಂಕ್ರಪ್ಪ ಚಂದಾಪುರ, ನಾಗರಾಜ ಏರಿಮನಿ, ಎನ್.ಸಿ.ನಾಗನಗೌಡ್ರ, ಫಾಲಾಕ್ಷಯ ನೆಗಳೂರಮಠ, ನೀಲಕಂಠಯ್ಯ ಓದಿಸೋಮಠ, ಚನ್ನವೀರಯ್ಯ ಸುತ್ತೂರುಮಠ, ಹೇಮಯ್ಯ ಕುಲಕರ್ಣಿ ಹಾಗೂ ಪಟ್ಟಣದ ಭಕ್ತರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.