ADVERTISEMENT

ಅದ್ದೂರಿಯಾಗಿ ನೆರವೇರಿದ ಚಿಮ್ಮನಚೋಡದ ಸಂಗಮೇಶ್ವರ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2018, 14:53 IST
Last Updated 23 ಮಾರ್ಚ್ 2018, 14:53 IST
ಚಿತ್ರ ಕೃಪೆ: ಮಂಜುನಾಥ ದುಬಲಗುಂಡಿ
ಚಿತ್ರ ಕೃಪೆ: ಮಂಜುನಾಥ ದುಬಲಗುಂಡಿ   

ಕಲಬುರ್ಗಿ: ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಚಿಮ್ಮನಚೋಡ ಗ್ರಾಮದಲ್ಲಿ 7೦ನೇ ಶ್ರೀ ಸಂಗಮೇಶ್ವರ ರಥೋತ್ಸವ ಅದ್ದೂರಿಯಾಗಿ ನೆರವೇರಿತು.  

ಸಂಗಮೇಶ್ವರ ಜಾತ್ರಾ ಪ್ರಯುಕ್ತ ಜರುಗಿದ ಭವ್ಯ ರಥೋತ್ಸವದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.

ಪ್ರತಿ ವರ್ಷ ಯುಗಾದಿ ದಿನದಂದು ಸಂಗಮೇಶ್ವರ ದೇವರ ಉತ್ಸವ ಮೂರ್ತಿಯ ಪಲ್ಲಕ್ಕಿ ಉತ್ಸವ ಆರಂಭಗೊಂಡು 4 ದಿವಸಗಳು ಪಲ್ಲಕ್ಕಿಯ ಮೆರವಣಿಗೆ ನಡೆಯುತ್ತದೆ. ನಂತರ 5 ನೇ ದಿವಸಕ್ಕೆ ರಥೋತ್ಸವ ನಡೆಯುತ್ತದೆ.

ADVERTISEMENT

ಜಾತ್ರಾ ಪ್ರಯುಕ್ತ ಕುಸ್ತಿ ,ಕ್ರಿಕೆಟ್ ಪಂದ್ಯಾವಳಿಯನ್ನು ಏರ್ಪಡಿಸಲಾಗಿದ್ದು, ಶುಕ್ರವಾರ ರಾತ್ರಿ ‘ಪಾಪ ತೊಳೆದ ಪುಣ್ಯವಂತೆ’ ಸಾಮಾಜಿಕ ನಾಟಕ ನಡೆಯಲಿದೆ.

1949 ರಲ್ಲಿ ಆರಂಭವಾದ ಜಾತ್ರೆಯು ಚಿಂಚೋಳಿ ತಾಲ್ಲೂಕಿನ ಪ್ರಮುಖ ಜಾತ್ರೆಗಳಲ್ಲಿ ಒಂದಾಗಿದೆ ಎಂದು ಚಿಮ್ಮನಚೋಡ ಗ್ರಾಮದ ಗಣ್ಯರಾದ ಆನಂದ ಕುಮಾರ್ ಬೆಡಸೂರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.