ADVERTISEMENT

‘ಎಚ್‌ಕೆಇ ಸಂಸ್ಥೆಗೆ ₹18 ಕೋಟಿ ಜಮೆ ’

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2018, 6:34 IST
Last Updated 2 ಏಪ್ರಿಲ್ 2018, 6:34 IST

ಕಲಬುರ್ಗಿ: ‘ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ (ಎಚ್‌ಕೆಇ)ಯ ಅಧ್ಯಕ್ಷನಾಗಿ ಮೂರು ವರ್ಷಗಳ ಹಿಂದೆ ಅಧಿಕಾರ ಸ್ವೀಕರಿಸಿದ್ದಾಗ ಸಂಸ್ಥೆಯ ಸಿಬ್ಬಂದಿಯ ಆರು ತಿಂಗಳ ಸಂಬಳ ಬಾಕಿ ಇತ್ತು. ಆದರೆ ನನ್ನ ಅವಧಿ ಮುಗಿದಾಗ ಸಂಸ್ಥೆಯಲ್ಲಿ  ₹15 ಕೋಟಿ ಜಮೆ ಇದೆ’ ಎಂದು ಎಚ್‌ಕೆಇ ಸಂಸ್ಥೆ ಮಾಜಿ ಅಧ್ಯಕ್ಷ ಬಸವರಾಜ ಭೀಮಳ್ಳಿ ಹೇಳಿದರು.

‘ಸಂಸ್ಥೆಯ ಆರ್ಥಿಕ ಸ್ಥಿತಿ ಹದಗೆಟ್ಟಿದೆ ಎಂದು ಡಾ. ಭೀಮಾಶಂಕರ ಬಿಲಗುಂದಿ ಗುಂಪಿನವರು ಆರೋಪಿಸಿದ್ದಾರೆ. ಆದರೆ ನಮ್ಮ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದೇವೆ. ಪಿಡಿಎ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿಯರಿಗಾಗಿ ₹2 ಕೋಟಿ ವೆಚ್ಚದ ವಸತಿಗೃಹ ನಿರ್ಮಿಸಿದ್ದೇವೆ. ₹18 ಕೋಟಿ ಆದಾಯ ತೆರಿಗೆ ಬಾಕಿ ಪಾವತಿಸಲಾಗಿದ್ದು, ₹1.5 ಕೋಟಿ ಹಿಂತಿರುಗಿ ಬಂದಿದೆ. ಟೆಕ್ಯುಪ್ ಯೋಜನೆ ಅಡಿ ಪಿಡಿಎ ಕಾಲೇಜಿಗೆ ₹7.5 ಕೋಟಿ ಅನುದಾನ ಮಂಜೂರಾಗಿದ್ದು, ₹2 ಕೋಟಿ ಈಗಾಗಲೇ ಬಿಡುಗಡೆಯಾಗಿದೆ. ಇವು ಅಭಿವೃದ್ಧಿ ಕೆಲಸಗಳಲ್ಲವೇ’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.‘ಸುರಪುರದಲ್ಲಿ ಪದವಿಪೂರ್ವ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ವಿ.ಜಿ. ಮಹಿಳಾ ಮಹಾವಿದ್ಯಾಲಯದಲ್ಲಿ ಸ್ನಾತಕೋತ್ತರ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ನಾವು ಉತ್ತಮ ಆಡಳಿತ ನೀಡಿದ್ದರೂ ನಮ್ಮ ಬಗ್ಗೆ ಅಪಪ್ರಚಾರ ಮಾಡಿದ್ದಾರೆ. ಅಲ್ಲದೆ ಮತದಾರರು ಬದಲಾವಣೆ ಬಯಸಿದ್ದರಿಂದ ನಮಗೆ ಸೋಲುಂಟಾಗಿದೆ. ಮತದಾರರ ತೀರ್ಪಿಗೆ ತಲೆ ಬಾಗುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT