ADVERTISEMENT

ತಂಬಾಕು ಮಾರಾಟ: ದಿಢೀರ್ ದಾಳಿ

ಧೂಮಪಾನದ ದುಷ್ಪರಿಣಾಮದ ಬಗ್ಗೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2018, 4:50 IST
Last Updated 11 ಜೂನ್ 2018, 4:50 IST

ಚಿತ್ತಾಪುರ: ಇಲ್ಲಿಗೆ ಸಮೀಪದ ಶಹಾಬಾದ್ ನಗರದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಮಂಡಳಿ ಹಾಗೂ ಶಹಾಬಾದ್ ನಗರದ ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿಗಳ ತಂಡ ಪಾನ್ ಶಾಪ್, ಕಿರಾಣಿ ಅಂಗಡಿಗಳ ಮೇಲೆ ಈಚೆಗೆ ದಿಢೀರ್ ದಾಳಿ ನಡೆಸಿ, ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದವರಿಗೆ ದಂಡ ವಿಧಿಸಿದರು.

ತಂಬಾಕು ಉತ್ಪನ್ನ ಮಾರಾಟ, ಸೇವನೆ ನಿಯಂತ್ರಣ ಹಾಗೂ ಜನರಲ್ಲಿ ತಂಬಾಕು ಸೇವನೆಯಿಂದ ಆಗುವ ಕೆಟ್ಟ ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲು ಅಧಿಕಾರಿಗಳ ತಂಡವು ಕಾರ್ಯನಿರತವಾಗಿದೆ.

ಬಸವೇಶ್ವರ ವೃತ್ತ, ಬೆಂಡಿ ಬಾಜಾರ, ಬಸ್ ನಿಲ್ದಾಣ, ರೈಲು ನಿಲ್ದಾಣ ಮುಂತಾದ ಕಡೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳಿಗೆ  ದಂಡ ವಿಧಿಸಿದ್ದಲ್ಲದೆ ಎಚ್ಚರಿಕೆ ನೀಡಿದರು.

ADVERTISEMENT

ಅಂಗಡಿ ಮಾಲೀಕರು ತಮ್ಮ ಅಂಗಡಿ ಮುಂದೆ ಸಾರ್ವಜನಿಕರಿಗೆ ಸ್ಪಷ್ಟವಾಗಿ ಕಾಣುವಂತೆ ತಂಬಾಕು ಮತ್ತು ಧೂಮಪಾನದಿಂದ ಆಗುವ ದುಷ್ಪರಿಣಾಮದ ಎಚ್ಚರಿಕೆ ಫಲಕ ಹಾಕುವುದು ಕಡ್ಡಾಯ. ಚಿಕ್ಕ ಮಕ್ಕಳಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಅಥವಾ ಮಕ್ಕಳಿಂದ ಮಾರಾಟ ಮಾಡಿಸುವುದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ ಎಂದು ಅಧಿಕಾರಿಗಳು ಅಂಗಡಿಗಳ ಮಾಲೀಕರಿಗೆ ಹಾಗೂ ಸಾರ್ವಜನಿಕರಿಗೆ ತಿಳಿಹೇಳಿದರು

ದಾಳಿಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಮಂಡಳಿಯ ಕೋಶ ಅಧಿಕಾರಿ ಡಾ.ಶರಣಪ್ಪ ಭೂಸನೂರ್, ಸಲಹೆಗಾರ ಸುಜಾತ ಪಾಟೀಲ್, ಸಮುದಾಯ ಆರೋಗ್ಯ ಕೇಂದ್ರದ ಕೌಸರ್ ನಿಯಾಜ್ ಅಹಮ್ಮದ್, ಅಮರೇಶ ಇಟಗಿಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.