ADVERTISEMENT

ತೊಗರಿ ಮಾರಾಟ: ಡಿ.ಸಿ ಸೂಚನೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2018, 9:31 IST
Last Updated 15 ಮಾರ್ಚ್ 2018, 9:31 IST

ಕಲಬುರ್ಗಿ: ವಿಶ್ವವಿದ್ಯಾಲಗಳಲ್ಲಿ ಉಪನ್ಯಾಸಕರ ನೇಮಕಾತಿಯಲ್ಲಿ ಹೊಸ ಮೀಸಲಾತಿ ನೀತಿ ಅಳವಡಿಸಿಕೊಳ್ಳಬೇಕು ಎಂದು
ವಿಶ್ವವಿದ್ಯಾಲಯಗಳ ಅನುದಾನ ಆಯೋಗ(ಯು.ಜಿ.ಸಿ) ಹೊರಡಿಸಿರುವ ಸುತ್ತೋಲೆ ವಾಪಸ್‌ ಪಡೆಯುವಂತೆ ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಈ ಸಂಬಂಧ ಕುಲಪತಿ ಪ್ರೊ.ಎಚ್‌.ಎಂ.ಮಹೇಶ್ವರಯ್ಯ ಅವರು ಮೂಲಕ ರಾಷ್ಟ್ರಪತಿಗೆ ಮಂಗಳವಾರ ಮನವಿ ಸಲ್ಲಿಸಿರುವ ವಿಶ್ವವಿದ್ಯಾಲಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರ ಮತ್ತು ಅಖಿಲ ಭಾರತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಸಂಘವು, ‘ಮಿಸಲಾತಿ ನಿರ್ಧರಿಸುವಾಗ ವಿಶ್ವವಿದ್ಯಾಲಯದ ಬದಲಿಗೆ ಅದರ ವಿಭಾಗವನ್ನು ಒಂದು ಯುನಿಟ್‌ ಎಂದು ಪರಿಗಣಿಸಬೇಕು ಎಂದು ಯು.ಜಿ.ಸಿ ಹೇಳಿದೆ. ಈ ಆದೇಶವು ಉಪನ್ಯಾಸಕ ಹುದ್ದೆಗಳಲ್ಲಿ ಪರಿಶಿಷ್ಟರು, ಹಿಂದುಳಿದ ವರ್ಗಗಳವರ ಸಂಖ್ಯೆಯನ್ನು ಕಡಿಮೆ ಮಾಡಲಿದೆ’ ಎಂದು ತಿಳಿಸಿದ್ದಾರೆ.

‘ಅಲಹಾಬಾದ್ ಹೈಕೋರ್ಟ್‌ ಆದೇಶದ ಆಧಾರದ ಮೇಲೆ ಹೊರಡಿಸಿರುವ ಆದೇಶವು ಅಸಮರ್ಪಕವಾಗಿದೆ. ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ನಡೆಸಿದ 2016-17ರ ಸಮೀಕ್ಷೆ ಪ್ರಕಾರ ಕೇವಲ ಶೇ 8ರಷ್ಟು ಪರಿಶಿಷ್ಟ ಜಾತಿ ಮತ್ತು ಶೇ2ರಷ್ಟು ಪರಿಶಿಷ್ಟ ಪಂಗಡದ ನೌಕರರು ಇದ್ದಾರೆ. ವಾಸ್ತವ ಹೀಗಿರುವಾಗ ಹೊಸ ಮೀಸಲಾತಿ ನಿಯಮ ಆ ಸಮುದಾಯಗಳ ಸಂಖ್ಯೆಯನ್ನು ಇನ್ನಷ್ಟು ಕಡಿಮೆ ಮಾಡಲಿದೆ. ಈ ನೀತಿ ಅವರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಪ್ರಗತಿಯ ಮೇಲೆ ದುಷ್ಪರಿಣಾಮ ಬಿರಲಿದೆ. ರಾಷ್ಟ್ರಪತಿ ಈ ಆದೇಶವನ್ನು ಮರು ಪರಿಶೀಲಿಸಬೇಕು’ ಎಂದು ಮನವಿ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.