ADVERTISEMENT

ಮಳೆ, ಬಿರುಗಾಳಿಗೆ ಕಬ್ಬು ಬೆಳೆಹಾನಿ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2017, 8:58 IST
Last Updated 7 ಅಕ್ಟೋಬರ್ 2017, 8:58 IST

ಅಫಜಲಪುರ: ತಾಲ್ಲೂಕಿನಲ್ಲಿ ಗುರುವಾರ ಸುರಿದ ಮಳೆ ಮತ್ತು ಬಿರುಗಾಳಿಗೆ ಕಟಾವಿಗೆ ಬಂದಿರುವ ಕಬ್ಬು ಬೆಳೆ ನೆಲಕ್ಕೆ ಬಿದ್ದು ಹಾಳಾಗಿದೆ ಎಂದು ರೈತರು ದೂರಿದ್ದಾರೆ.
ತಾಲ್ಲೂಕಿನ ಬಳೂರ್ಗಿ ಗ್ರಾಮದ ಭೀಮಣ್ಣ ಪೂಜಾರಿ, ಸುರೇಶ ಮಠಪತಿ, ಬಸವರಾಜ ಚಲಗೇರಿ ಅವರಿಗೆ ಸೇರಿದ ಕಬ್ಬು ನೆಲಕ್ಕೆ ಬಿದ್ದು ಸುಮಾರು 20 ಎಕರೆ ಕಬ್ಬು ಹಾಳಾಗಿದೆ.

ಪಟ್ಟಣದ ವ್ಯಾಪ್ತಿಗೆ ಬರುವ ಜಮೀನುಗಳಲ್ಲಿ ಮಳೆ ಬಿರುಗಾಳಿಗೆ ಸಂಪೂರ್ಣಕಬ್ಬು ನೆಲಕ್ಕೆ ಬಿದ್ದಿದೆ. ಚಂದು ಎನ್‌. ಕರಜಗಿ ಅವರ ಜಮೀನಿನಲ್ಲಿ ಬೆಳೆದಿರುವ ಕಬ್ಬು ಬಿರುಗಾಳಿಗೆ ಹಾಳಾಗಿದೆ.

‘ಕೆಲ ಜಮೀನುಗಳಲ್ಲಿ ಟೊಮೆಟೊ, ಹಿರೇಕಾಯಿ ಬೆಳೆ ಸಂಪೂರ್ಣ ಹಾಳಾಗಿದೆ. ಮಳೆ ಕಡಿಮೆಯಾದರೂ ಹೆಚ್ಚಿನ ಬಿರುಗಾಳಿಗೆ ಬೆಳೆ ಹಾನಿಯಾಗುತ್ತಿವೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಶರಣಗೌಡ ಪಾಟೀಲ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.