ADVERTISEMENT

ಹೈದರಾಬಾದ್-ಕೊಲ್ಲಂ ವಿಶೇಷ ರೈಲು ನಿಲುಗಡೆ: ಸಂಭ್ರಮ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2017, 8:32 IST
Last Updated 27 ನವೆಂಬರ್ 2017, 8:32 IST

ಚಿತ್ತಾಪುರ: ನೆರೆ ರಾಜ್ಯ ತೆಲಂಗಾಣದ ಹೈದರಾಬಾದಿನಿಂದ ಕೊಲ್ಲಮ್ ವರೆಗೆ ಪ್ರಥಮ ಬಾರಿಗೆ ಸಂಚರಿಸುತ್ತಿರುವ ಶಬರಿಮಲ (ಆದೋನಿ ಮಾರ್ಗ) ವಿಶೇಷ ರೈಲು ಶನಿವಾರ ರಾತ್ರಿ ಪಟ್ಟಣದ ರೈಲ್ವೆ ನಿಲ್ದಾಣಕ್ಕೆ ಬರುತ್ತಿದ್ದಂತೆ ಜನರು ಸಂಭ್ರಮದಿಂದ ಸ್ವಾಗತಿಸಿಕೊಂಡರು.

ರೈಲು ನಿಲ್ದಾಣಕ್ಕೆ ಬರುತ್ತಿದ್ದಂತೆ ಪಟ್ಟಣದ ಅನೇಕ ಮುಖಂಡರು, ಯುವಕರು, ರಾಜಕೀಯ ಕಾರ್ಯಕರ್ತರು ಜಯಘೋಷದೊಂದಿಗೆ ಸ್ವಾಗತಿಸಿಕೊಂಡು ರೈಲು ಚಾಲಕರನ್ನು ಕೆಳಗಿಸಿ ಸನ್ಮಾನಿಸಿ, ಸಂಭ್ರಮಿಸಿದರು.

‘ಶಬರಿಮಲ ವಿಶೇಷ ರೈಲು ಪಟ್ಟಣದ ನಿಲ್ದಾಣದಲ್ಲಿ ನಿಲುಗಡೆ ಮಾಡುತ್ತಿರುವುದರಿಂದ ಪಟ್ಟಣದ ವ್ಯಾಪಾರಸ್ಥರಿಗೆ, ಉದ್ಯಮಿಗಳಿಗೆ, ಸಾರ್ವಜನಿಕ ಪ್ರಯಾಣಿಕರಿಗೆ ತುಂಬಾ ಪ್ರಯೋಜನವಾಗಲಿದೆ’ ಎಂದು ಮುಖಂಡರಾದ ಗೋಪಾಲ ರಾಠೋಡ್, ಪ್ರವೀಣ ಪವಾರ್ ಅವರು ಹರ್ಷ ವ್ಯಕ್ತಪಡಿಸಿದರು.

ADVERTISEMENT

ಈ ಸಂದರ್ಭದಲ್ಲಿ ಮುಖಂಡರಾದ ಬಾಲಾಜಿ ಬುರಬುರೆ, ಮಲ್ಲಿಕಾರ್ಜುನ ಇಜೇರಿ, ಅಕ್ಕಮಾಹದೇವಿ, ವಿನೋದ ಪವಾರ್, ರೂಪೇಶ, ವಿನೋದ ರಾಠೋಡ್, ಅಶ್ವಥ್ ರಾಠೋಡ್, ಚಂದ್ರು ಕಾಳಗಿ, ಶಿವರಾಂ ಚವ್ಹಾಣ್, ಯಮನಪ್ಪ ಬೋಸಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.