ADVERTISEMENT

‘ಕೈಗೆತ್ತಿಕೊಂಡ ಕಾಯಕ ಪೂರೈಸಿದ ಖರ್ಗೆ’

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2014, 7:01 IST
Last Updated 14 ಏಪ್ರಿಲ್ 2014, 7:01 IST

ಗುಲ್ಬರ್ಗ: ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಕೈಗೆತ್ತಿಕೊಂಡ ಕಾಯಕ ವನ್ನು ಸುಭದ್ರ ತಳಹದಿ, ಯೋಜನಾ ಬದ್ಧತೆ, ದೂರದೃಷ್ಟಿ ಹಾಗೂ ವಿವೇಚನೆಯಿಂದ ಎಲ್ಲರಿಗೂ ಫಲ ದೊರಕುವಂತೆ ಅತಿ ಪ್ರಚಾರ ಇಲ್ಲದೇ ಯಶಸ್ವಿಗೊಳಿಸುತ್ತಾರೆ ಎಂದು ಕಾಂಗ್ರೆಸ್‌ ವಕ್ತಾರ ಭೀಮರಡ್ಡಿ ಪಾಟೀಲ ಕುರಕುಂದಾ ಹೇಳಿದರು.

ನಗರದ ತಾರಫೈಲ್‌ ಬಡಾವಣೆ ಯಲ್ಲಿ ಪಾಲಿಕೆ ಸದಸ್ಯ ಹಮೀದ್ ನಿಸ್ಸಾರ್ ನೇತೃತ್ವದಲ್ಲಿ ಭಾನುವಾರ ಗುಲ್ಬರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಪರ ಪಾದಯಾತ್ರೆಯಲ್ಲಿ ಮತಯಾಚಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, 371–ಜೆ ಕಲಂ ಜಾರಿಗೊಳಿಸುವ  ವೇಳೆ ಸಂಸತ್ತಿನಲ್ಲಿ ಮೂರನೇ ಎರಡು ಬೆಂಬಲ ನೀಡಿರುವುದಾಗಿ ಬಿಜೆಪಿ ಹೇಳುತ್ತಿದೆ.  ಇದು ಹಾಸ್ಯಾಸ್ಪದ ಹೇಳಿಕೆಯಾಗಿದೆ ಎಂದು ಲೇವಡಿ ಮಾಡಿದರು.  

ಬಂಜಾರ ಸಮುದಾಯದ ಅಭಿವೃ ದ್ಧಿಗೋಸ್ಕರ ಬಾಬುರಾವ ಚವಾಣ ಅವರನ್ನು ಖರ್ಗೆ ಹಾಗೂ ಧರ್ಮಸಿಂಗ್‌ ಮಂತ್ರಿಯನ್ನಾಗಿ ಮಾಡಿ ದರು. ಅವರು ಸಮಾಜದ ಅಭಿವೃದ್ಧಿಗೆ ನೀಡಿದ ಕೊಡುಗೆ ಏನು ಎಂದು ಸಾಬೀತು ಪಡಿಸಲಿ. ಈಗ ತಮ್ಮ ವೈಫಲ್ಯ ಮುಚ್ಚಿಹಾಕಲು ಸುಖಾ ಸುಮ್ಮನೆ ಹೇಳಿಕೆ ನೀಡುತ್ತಿದ್ದಾರೆ ಎಂದರು.

ಪಾದಯಾತ್ರೆಯಲ್ಲಿ ಅಭಿನಂದನ್ ಪಾಟೀಲ್, ಅಬ್ದುಲ್ ಹಮೀದ್‌, ನಯೀಮ್, ಫಾರೂಕ್‌ ಮಾನಿ ಯಾಳ್, ಸೊಹೈಲ್‌, ಸುನೀಲ್ ಚವ್ಹಾಣ್, ಮಹ್ಮದ ಸಿರಾಜುದ್ದಿನ್, ಡಾ. ರೆಡಸನ್ ಎಸ್.ಆರ್. ಸೇರಿದಂತೆ ಹಲವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.