ADVERTISEMENT

ಹಿರೋಳ್ಳಿ: 2 ಕೆ.ಜಿ ಗಾಂಜಾ ಬೆಳೆ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 9:09 IST
Last Updated 17 ಸೆಪ್ಟೆಂಬರ್ 2020, 9:09 IST
ಆಳಂದ ತಾಲ್ಲೂಕಿನ ಹಿರೋಳಿ ಗ್ರಾಮದ ನಿವೇಶನವೊಂದರಲ್ಲಿ ಬೆಳೆದಿದ್ದ ಗಾಂಜಾ ಬೆಳೆಯನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡರು. ತಹಶೀಲ್ದಾರ್ ದಯಾನಂದ ಪಾಟೀಲ, ಡಿವೈಎಸ್‌ಪಿ ಮಲ್ಲಿಕಾರ್ಜುನ ಸಾಲಿ ಇದ್ದರು
ಆಳಂದ ತಾಲ್ಲೂಕಿನ ಹಿರೋಳಿ ಗ್ರಾಮದ ನಿವೇಶನವೊಂದರಲ್ಲಿ ಬೆಳೆದಿದ್ದ ಗಾಂಜಾ ಬೆಳೆಯನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡರು. ತಹಶೀಲ್ದಾರ್ ದಯಾನಂದ ಪಾಟೀಲ, ಡಿವೈಎಸ್‌ಪಿ ಮಲ್ಲಿಕಾರ್ಜುನ ಸಾಲಿ ಇದ್ದರು   

ಆಳಂದ: ತಾಲ್ಲೂಕಿನ ಗಡಿಗ್ರಾಮ ಹಿರೋಳಿಯ ಹೊರವಲಯದ ಖಾಲಿ ನಿವೇಶನದಲ್ಲಿ ಬೆಳೆದಿದ್ದ 2.53 ಕೆಜಿ ಗಾಂಜಾ ಬೆಳೆಯನ್ನು ಬುಧವಾರ ಮಾದನ ಹಿಪ್ಪರಗಾ ಪೊಲೀಸರು ವಶಪಡಿಸಿಕೊಂಡು, ಆರೋಪಿಯನ್ನು ಬಂಧಿಸಿದ್ದಾರೆ.

ಗ್ರಾಮದ ಬಂದೇನವಾಜ್ ಅಬ್ದುಲ್ ಲಾಂಗಡೆ ಬಂಧಿತ ಆರೋಪಿ. ಖಚಿತ ಮಾಹಿತಿ ಮೂಲಕ ಸ್ಥಳಕ್ಕೆ ಭೇಟಿ ನೀಡಿದ ಪಿಎಸ್‌ಐ ಇಂದುಮತಿ ಮತ್ತು ಸಿಬ್ಬಂದಿ ಗಾಂಜಾ ಬೆಳೆ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ತಹಶೀಲ್ದಾರ್ ದಯಾನಂದ ಪಾಟೀಲ, ಡಿವೈಎಸ್‌ಪಿ ಮಲ್ಲಿಕಾರ್ಜುನ ಸಾಲಿ, ಪಿಎಸ್ಐ ಇಂದುಮತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT