ADVERTISEMENT

ಜೇವರ್ಗಿ ತಾಲೂಕಿನ 26 ಗ್ರಾಮಗಳ ಸ್ಥಳಾಂತರ

26 ಕಾಳಜಿ ಕೇಂದ್ರ– ತಹಶೀಲ್ದಾರ್ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2020, 15:02 IST
Last Updated 17 ಅಕ್ಟೋಬರ್ 2020, 15:02 IST
ಜೇವರ್ಗಿ ತಾಲ್ಲೂಕಿನ ಬಳ್ಳುಂಡಗಿ ಗ್ರಾಮಕ್ಕೆ ತಹಶೀಲ್ದಾರ್ ಸಿದರಾಯ ಭೋಸಗಿ ಭೇಟಿ ನೀಡಿ ಪ್ರವಾಹ ಪೀಡಿತರ ಸಮಸ್ಯೆಗಳನ್ನು ಆಲಿಸಿದರು. ಸಿಪಿಐ ರಮೇಶ ರೊಟ್ಟಿ ಇದ್ದರು
ಜೇವರ್ಗಿ ತಾಲ್ಲೂಕಿನ ಬಳ್ಳುಂಡಗಿ ಗ್ರಾಮಕ್ಕೆ ತಹಶೀಲ್ದಾರ್ ಸಿದರಾಯ ಭೋಸಗಿ ಭೇಟಿ ನೀಡಿ ಪ್ರವಾಹ ಪೀಡಿತರ ಸಮಸ್ಯೆಗಳನ್ನು ಆಲಿಸಿದರು. ಸಿಪಿಐ ರಮೇಶ ರೊಟ್ಟಿ ಇದ್ದರು   

ಜೇವರ್ಗಿ: ಮಹಾರಾಷ್ಟ್ರದ ಉಜನಿ ಮತ್ತು ವೀರ್ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಭೀಮಾ ನದಿಗೆ ನೀರು ಹರಿಸಿದ್ದರಿಂದ ತಾಲೂಕಿನ ಭೀಮಾ ನದಿ ದಂಡೆಯಲ್ಲಿರುವ 37 ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ. ಈಗಾಗಲೇ 25-30 ಹಳ್ಳಿಗಳಿಗೆ ನೀರು ಸುತ್ತುವರಿದು ಗ್ರಾಮಸ್ಥರು ದೈನಂದಿನ ಬದುಕು ಸಾಗಿಸಲು ಪರದಾಡುವಂತಾಗಿದೆ.

ಜೇವರ್ಗಿ ತಾಲ್ಲೂಕಿನ ಭೀಮಾ ತೀರದಲ್ಲಿರುವ ಒಟ್ಟು 26 ಗ್ರಾಮಗಳ ನಿವಾಸಿಗಳನ್ನು ಈಗಾಗಲೇ ಸ್ಥಳಾಂತರ ಮಾಡಲಾಗಿದ್ದು, ಆಯಾ ಗ್ರಾಮಗಳ ಸುರಕ್ಷಿತ ಸ್ಥಳಗಳಲ್ಲಿ ಕಾಳಜಿ ಕೇಂದ್ರ ಆರಂಭಿಸಲಾಗಿದೆ ಎಂದು ತಹಶೀಲ್ದಾರ್ ಸಿದರಾಯ ಭೋಸಗಿ ತಿಳಿಸಿದ್ದಾರೆ.

ಜೇವರ್ಗಿ ಪಟ್ಟಣ, ಮದರಿ, ಹೋತಿನಮಡು, ರಾಂಪೂರ, ಹೊನ್ನಾಳ, ಕಟ್ಟಿಸಂಗಾವಿ, ಯನಗುಂಟಿ, ನರಿಬೋಳ, ಮಲ್ಲಾ.ಕೆ, ಮಲ್ಲಾ.ಬಿ, ರಾಜವಾಳ, ರದ್ದೇವಾಡಗಿ, ಕೂಡಿ, ಕೂಡಿ, ಕೋಬಾಳ, ರಾಸಣಗಿ, ಹಂದನೂರ, ಮಂದರವಾಡ, ಕೋನಾಹಿಪ್ಪರಗಾ, ಹರವಾಳ, ಮಾಹೂರ, ಕಲ್ಲೂರ.ಬಿ, ಭೋಸಗಾ.ಬಿ, ಇಟಗಾ, ಅಂಕಲಗಾ, ಬಳ್ಳುಂಡಗಿ ಗ್ರಾಮಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ADVERTISEMENT

ತಾಲ್ಲೂಕು ಆಡಳಿತದಿಂದ ನೆರೆ ಸಂತ್ರಸ್ತರಿಗೆ ಕಾಳಜಿ ಕೇಂದ್ರಗಳಲ್ಲಿ ಊಟ, ಉಪಾಹಾರ, ಟೀ ಜೊತೆಗೆ ಬೆಡ್‌ಶೀಟ್, ಟವೆಲ್‌, ಸಾಬೂನು, ಟೂತ್ ಪೇಸ್ಟ್, ಕೊಬ್ಬರಿ ಎಣ್ಣೆ, ಸ್ನ್ಯಾಕ್ಸ್, ಬಟ್ಟೆಯ ಮಾಸ್ಕ್ ಹಾಗೂ ಇತರ ಅವಶ್ಯಕ ವಸ್ತುಗಳನ್ನು ವಿತರಿಸಲಾಗುತ್ತಿದೆ.

ತಹಶೀಲ್ದಾರ್ ಸಿದರಾಯ ಭೋಸಗಿ ನರಿಬೋಳ, ಇಟಗಾ, ಭೊಸಗಾ.ಕೆ, ಭೋಸಗಾ.ಬಿ, ಕಲ್ಲೂರ.ಬಿ, ಅಂಕಲಗಾ, ಮಂದರವಾಡ, ಕೋನಾಹಿಪ್ಪರಗಾ ಗ್ರಾಮಗಳಿಗೆ ಭೇಟಿ ನೀಡಿ ಸಂತ್ರಸ್ಥರ ಸಮಸ್ಯೆ ಆಲಿಸಿದರು. ಈ ಸಂದರ್ಭದಲ್ಲಿ ಸಿಪಿಐ ರಮೇಶ ರೊಟ್ಟಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.