ADVERTISEMENT

23 ಸ್ಪರ್ಧಿಗಳಿಂದ ನಾಮಪತ್ರ ವಾಪಸ್; ಅಂತಿಮ ಕಣದಲ್ಲಿ 305 ಅಭ್ಯರ್ಥಿಗಳು

ರಂಗೇರಿದ ಚುನಾವಣಾ ಕಣ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2021, 1:31 IST
Last Updated 27 ಆಗಸ್ಟ್ 2021, 1:31 IST

ಕಲಬುರ್ಗಿ: ಕಲಬುರ್ಗಿ ಮಹಾನಗರ ಪಾಲಿಕೆಯ ಚುನಾವಣೆಯನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯ ದಿನವಾದ ಗುರುವಾರ 23 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಹಿಂದಕ್ಕೆ ಪಡೆದರು.

360 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಅವರ ಪೈಕಿ 19 ನಾಮಪತ್ರಗಳು ತಿರಸ್ಕೃತಗೊಂಡಿದ್ದವು. 55 ವಾರ್ಡ್‌ಗಳಲ್ಲಿ ಒಟ್ಟು 305 ಅಭ್ಯರ್ಥಿಗಳು ಕಣದಲ್ಲಿ ಉಳಿದಂತಾಗಿದೆ.

ನಾಮಪತ್ರ ಪರಿಶೀಲನೆ ಮುಕ್ತಾಯವಾದ ದಿನದಿಂದಲೇ ಬಹುತೇಕ ಅಭ್ಯರ್ಥಿಗಳು ಪ್ರಚಾರ ಕಾರ್ಯವನ್ನು ಶುರು ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಪರವಾಗಿ ದತ್ತಾತ್ರೇಯ ಪಾಟೀಲ ರೇವೂರ, ವಿಧಾನಪರಿಷತ್ ಸದಸ್ಯ ಬಿ.ಜಿ. ಪಾಟೀಲ, ಕ್ರೆಡೆಲ್ ಅಧ್ಯಕ್ಷ ಚಂದು ಪಾಟೀಲ ಸೇರಿದಂತೆ ಹಲವು ಮುಖಂಡರು ಪ್ರಚಾರ ಕಣಕ್ಕು ಧುಮುಕಿದ್ದಾರೆ. ಚುನಾವಣಾ ಆಯೋಗವು ಮನೆ ಮನೆ ಪ್ರಚಾರಕ್ಕೆ ಐದು ಜನರಿಗೆ ಮಾತ್ರ ಅವಕಾಶ ನೀಡಿದ್ದರಿಂದ ಹೆಚ್ಚು ಮುಖಂಡರು ಗುಂಪು ಸೇರುತ್ತಿಲ್ಲ. ಓಣಿಯೊಂದರ ಮುಖಂಡರ ಮನೆಗೆ ಪಕ್ಷದ ವರಿಷ್ಠರು ಭೇಟಿ ನೀಡಿ ಅಲ್ಲಿಂದ ವಾಪಸಾಗುತ್ತಾರೆ. ಮನೆ ಮನೆ ಸುತ್ತುವ ಹೊಣೆಯನ್ನು ಆಯಾ ಅಭ್ಯರ್ಥಿಗಳು ಹಾಗೂ ಅವರ ಕುಟುಂಬ ಸದಸ್ಯರು, ಬೆಂಬಲಿಗರಿಗೆ ವಹಿಸಲಾಗಿದೆ.

ADVERTISEMENT

ಕಾಂಗ್ರೆಸ್‌ ಅಭ್ಯರ್ಥಿಗಳ ಪರವಾಗಿ ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ, ಶಾಸಕಿ ಖನೀಜ್ ಫಾತಿಮಾ, ವಿಧಾನಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ ಸೇರಿದಂತೆ ಹಲವು ಮುಖಂಡರು ಮತಯಾಚನೆ ಮಾಡುತ್ತಿದ್ದಾರೆ.

ಬುಧವಾರ ಸಂಜೆ ನಗರಕ್ಕೆ ಬಂದಿದ್ದ ಎಐಎಂಐಎಂ ಸಂಸ್ಥಾಪಕ, ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಕಲಬುರ್ಗಿ ಉತ್ತರ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದ್ದಾರೆ. ಆಮ್‌ ಆದ್ಮಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಪೃಥ್ವಿ ರೆಡ್ಡಿ, ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್, ಜಿಲ್ಲಾ ಘಟಕದ ಅಧ್ಯಕ್ಷ ಜಗದೀಶ ಬಳ್ಳಾರಿ 28 ವಾರ್ಡ್‌ಗಳ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಜೆಡಿಎಸ್‌ ಅಭ್ಯರ್ಥಿಗಳ ಪರವಾಗಿ ಜಿಲ್ಲಾ ಅಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಶಾಮರಾವ್ ಸೂರನ್ ಪ್ರಚಾರ ನಡೆಸಿದ್ದಾರೆ.

ಕಣದಲ್ಲಿರುವ ಅಭ್ಯರ್ಥಿಗಳು

ವಾರ್ಡ್‌ ಸಂಖ್ಯೆ 6

ಅಭ್ಯರ್ಥಿಗಳು; ಪಕ್ಷ

ಅರುಣಾಬಾಯಿ ಅಂಬಾರಾಯ; ಬಿಜೆಪಿ

ಕಾವೇರಿ ಮಹಾಲಿಂಗ; ಕಾಂಗ್ರೆಸ್

ಮಹಾನಂದಾ ಶಿವಕುಮಾರ್; ಜೆಡಿಎಸ್

**

ವಾರ್ಡ್‌ ಸಂಖ್ಯೆ 7

ಕೃಷ್ಣರಾಜ ರೇವುನಾಯಕ; ಬಿಜೆಪಿ

ಪ್ರವೀಣ ಜಾಧವ; ಜೆಡಿಎಸ್‌

ಶಿವಾನಂದ ಮಾಳಗಿ; ಕಾಂಗ್ರೆಸ್

ಸುವರ್ಣಾ ನಾಮದೇವ; ಪಕ್ಷೇತರ

**

ವಾರ್ಡ್‌ ಸಂಖ್ಯೆ 8

ಸಚಿನ್ ಹೊನ್ನಾ; ಬಿಜೆಪಿ

ಸೋಮಶೇಖರ ರುಕ್ಕಪ್ಪ; ಕಾಂಗ್ರೆಸ್

ಸೂರ್ಯಕಾಂತ ಕಲ್ಯಾಣರಾವ್; ಆಮ್‌ ಆದ್ಮಿ ಪಾರ್ಟಿ

**

ವಾರ್ಡ್‌ ಸಂಖ್ಯೆ 10

ಜನಾಬಾಯಿ ಗಣಪತರಾವ್; ಬಿಜೆಪಿ

ಹೀನಾಬೇಗಂ ಅಬ್ದುಲ್ ರಹೀಂ; ಕಾಂಗ್ರೆಸ್

**

ವಾರ್ಡ್‌ ಸಂಖ್ಯೆ 11

ಕೇದಾರನಾಥ ಪೊಲೀಸ್ ಪಾಟೀಲ; ಕಾಂಗ್ರೆಸ್

ಪ್ರಭುಲಿಂಗ ಧೂಳಪ್ಪ; ಕಮಲ

ಸಿದ್ರಾಮಪ್ಪ ಹಣಮಂತರಾಯ; ಜೆಡಿಎಸ್

ಶರಣಬಸಪ್ಪ ಶ್ರೀಮಂತಪ್ಪ; ಪಕ್ಷೇತರ

**

ವಾರ್ಡ್‌ ಸಂಖ್ಯೆ 22

ಮಹಮ್ಮದ್ ಅಜಿಮೊದ್ದೀನ್; ಕಾಂಗ್ರೆಸ್

ಮಿರ್ಜಾ ಕಾಸೀಂ ಬೇಗ್; ಜೆಡಿಎಸ್‌

ಅಬ್ದುಲ್ ರಹೀಂ; ಎಐಎಂಐಎಂ

ಮೊಹಮ್ಮದ್ ಸಿರಾಜೊದ್ದೀನ್; ಆಮ್ ಆದ್ಮಿ ಪಾರ್ಟಿ

ನಿಸಾರ್ ಅಹ್ಮದ್; ಪಕ್ಷೇತರ

ಮೊಹಮ್ಮದ್ ಯೂನುಸ್; ಪಕ್ಷೇತರ

ಶಮಾ ಸುಲ್ತಾನಾ; ಪಕ್ಷೇತರ

ಎಂ.ಡಿ. ಸಮಿವುದ್ದೀನ್; ಪಕ್ಷೇತರ

ಹಬೀಬ್ ಅಹ್ಮದ್; ಪಕ್ಷೇತರ

**

ವಾರ್ಡ್‌ ಸಂಖ್ಯೆ 28

ಫರಿನ್ ಫಯಾಜ್ ಹುಸೇನ್; ಜೆಡಿಎಸ್‌

ರೇಷ್ಮಾ ಬೇಗಂ; ಬಿಎಸ್ಪಿ

ವಿಜಯಲಕ್ಷ್ಮಿ ಚೌಧರಿ; ಬಿಜೆಪಿ

ಸಯೀದಾ ಮಸೀರಾ ನಸ್ರೀನ್; ಕಾಂಗ್ರೆಸ್

ಉಮ್ಮೆ ಸಲ್ಮಾ; ಆಮ್‌ ಆದ್ಮಿ ಪಾರ್ಟಿ

ಬಾನುಬಿ; ಎಐಎಂಐಎಂ

**

ವಾರ್ಡ್‌ ಸಂಖ್ಯೆ 29

ಎಂ.ಡಿ. ಇಮ್ರಾನ್; ಕಾಂಗ್ರೆಸ್

ಶೇಖ್ ಮೆಹಬೂಬ್; ಜೆಡಿಎಸ್

ಮಹಮ್ಮದ್ ಅಫ್ನನ್; ಪಕ್ಷೇತರ

ಜಹೀರ್ ಅಹ್ಮದ್ ಖಾನ್; ಪಕ್ಷೇತರ

ಸೈಯದ್ ಆರೀಫ್ ಹುಸೇನ್ ಇನಾಮದಾರ; ಪಕ್ಷೇತರ

**

ವಾರ್ಡ್ ಸಂಖ್ಯೆ 30

ಮೇಘನಾ ಕಳಸ್ಕರ; ಬಿಜೆಪಿ

ಸಾಫಿಯಾ ಸುಲ್ತಾನಾ; ಕಾಂಗ್ರೆಸ್

ಸುವರ್ಣ ಎನ್. ರೇವಣಕರ; ಜೆಡಿಎಸ್‌

ಮಂಜುಳಾ ಹಳ್ಳಿಕರ; ಪಕ್ಷೇತರ

**

ವಾರ್ಡ್‌ ಸಂಖ್ಯೆ 33

ನಜ್ಮೀನ್ ಸುಲ್ತಾನಾ; ಜೆಡಿಎಸ್‌

ರಾಗಮ್ಮ; ಕಾಂಗ್ರೆಸ್

ಸುಲ್ತಾನಾ ಉಪಾಧ್ಯಾಯ; ಬಿಜೆಪಿ

ನೀಲೋಫರ್ ಬೇಗಂ; ಆಮ್ ಆದ್ಮಿ ಪಕ್ಷ

ರಾಜಿಯಾಬೇಗಂ; ಪಕ್ಷೇತರ

**

ವಾರ್ಡ್‌ 34

ಅಶ್ವಿನ್ ಸಂಕಾ; ಕಾಂಗ್ರೆಸ್

ಮಂಜುನಾಥ ನಾಲವಾರಕರ್; ಬಿಎಸ್ಪಿ

ಲಕ್ಷ್ಮಣ ಮೂಲಭಾರತಿ; ಬಿಜೆಪಿ

ವಿಶಾಲಕುಮಾರ ನವರಂಗ; ಜೆಡಿಎಸ್‌

**

ವಾರ್ಡ್‌ ಸಂಖ್ಯೆ 35

ನೀಲೇಶ ತೂಗಾಂವ್; ಕಾಂಗ್ರೆಸ್

ವಿಜಯಕುಮಾರ ಸೇವ್ಲಾನಿ; ಬಿಜೆಪಿ

**

ವಾರ್ಡ್‌ 46

ಈರಮ್ಮ ಸಾಯಬಣ್ಣ; ಜೆಡಿಎಸ್

ವಿಶಾಲ ದರ್ಗಿ; ಬಿಜೆಪಿ

ಸಂಜಯಕುಮಾರ್ ಮಾಕಲ್; ಕಾಂಗ್ರೆಸ್

ವೀರೇಶ; ಆಮ್ ಆದ್ಮಿ ಪಾರ್ಟಿ

ಪ್ರಕಾಶ ಕುಮಾರ; ಪಕ್ಷೇತರ

**

ವಾರ್ಡ್‌ ಸಂಖ್ಯೆ 47

ನಾಗವೇಣಿ ದೇವಿಂದ್ರಕುಮಾರ್; ಕಾಂಗ್ರೆಸ್

ಸುನಿತಾ; ಜೆಡಿಎಸ್‌

ಹೊನ್ನಮ್ಮ ಹಾಗರಗಿ; ಬಿಜೆಪಿ

ಅಶ್ವಿನಿ; ಆಮ್ ಆದ್ಮಿ ಪಾರ್ಟಿ

ರೇಣುಕಾ; ಪಕ್ಷೇತರ

**

ವಾರ್ಡ್‌ ಸಂಖ್ಯೆ 48

ವೀರಣ್ಣ; ಬಿಜೆಪಿ

ಶರಣಕುಮಾರ ದೇಸಾಯಿ; ಕಾಂಗ್ರೆಸ್

ಸಂಜೀವಕುಮಾರ ಕರಿಕಲ್; ಆಮ್ ಆದ್ಮಿ ಪಾರ್ಟಿ

ಸಂಜು; ಪಕ್ಷೇತರ

ಉದಯ ಪಾಟೀಲ; ಪಕ್ಷೇತರ

ಉದಯಕಿರಣ; ಪಕ್ಷೇತರ

**

ನಾಮಪತ್ರ ವಾಪಸ್ ಪಡೆದವರ ವಿವರ

ನಾಮಪತ್ರ ವಾಪಸ್ ಪಡೆದ 23 ಅಭ್ಯರ್ಥಿಗಳ ಪೈಕಿ 19 ಪಕ್ಷೇತರ ಅಭ್ಯರ್ಥಿಗಳಲ್ಲದೇ ನಾಲ್ಕು ನೋಂದಾಯಿತ ರಾಜಕೀಯ ಪಕ್ಷಗಳ ಅಭ್ಯರ್ಥಿಗಳೂ ಇದ್ದಾರೆ.

54ನೇ ವಾರ್ಡ್ ಬಿಎಸ್ಪಿ ಅಭ್ಯರ್ಥಿ ಶೀತಲ್, ಆಮ್ ಆದ್ಮಿ ಪಾರ್ಟಿಯ 55ನೇ ವಾರ್ಡ್‌ ಅಭ್ಯರ್ಥಿ ಶಾಂತಾಬಾಯಿ, ಎಐಎಂಐಎಂನ 44ನೇ ವಾರ್ಡ್ ಅಭ್ಯರ್ಥಿ ಜಗನ್ನಾಥ ಮನ್ನುನಾಯಕ ಹಾಗೂ ಎಸ್‌ಡಿಪಿಐನ 3ನೇ ವಾರ್ಡ್ ಅಭ್ಯರ್ಥಿ ಫರ್ಜಾನ್ ನಾಮಪತ್ರ ವಾಪಸ್ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.