ADVERTISEMENT

ಕಲಬುರಗಿ: 340 ಕೆ.ಜಿ ಗಾಂಜಾ ವಶ; ಮೂವರ ಬಂಧನ

ಆಂಧ್ರದಿಂದ ಸಿನಿಮೀಯ ರೀತಿಯಲ್ಲಿ ಮಾದಕವಸ್ತು ಸಾಗಣೆ, ಜೀಪ್‌ ಬೆನ್ನಟ್ಟಿ ಹಿಡಿದ ನಗರ ಪೊಲೀಸರು

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2021, 7:08 IST
Last Updated 9 ಅಕ್ಟೋಬರ್ 2021, 7:08 IST
ಕಲಬುರಗಿಯಲ್ಲಿ ಶುಕ್ರವಾರ ಐಪಿಎಲ್‌ ಕ್ರಿಕೆಟ್‌ ಬೆಟ್ಟಿಂಗ್‌ಗೆ ಬಳಸಿದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದರು. ಇನ್‍ಸ್ಪೆಕ್ಟರ್ ಪಂಡಿತ ಸಗರ, ಎಸಿಪಿ ಅಂಶುಕುಮಾರ ಹಾಗೂ ರೌಡಿ ನಿಗ್ರಹ ದಳ ಸಿಬ್ಬಂದಿ ಇದ್ದಾರೆ
ಕಲಬುರಗಿಯಲ್ಲಿ ಶುಕ್ರವಾರ ಐಪಿಎಲ್‌ ಕ್ರಿಕೆಟ್‌ ಬೆಟ್ಟಿಂಗ್‌ಗೆ ಬಳಸಿದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದರು. ಇನ್‍ಸ್ಪೆಕ್ಟರ್ ಪಂಡಿತ ಸಗರ, ಎಸಿಪಿ ಅಂಶುಕುಮಾರ ಹಾಗೂ ರೌಡಿ ನಿಗ್ರಹ ದಳ ಸಿಬ್ಬಂದಿ ಇದ್ದಾರೆ   

ಕಲಬುರಗಿ: ಆಂಧ್ರಪ್ರದೇಶದ ಧರ್ಮಾಚಲಂನಿಂದ ನಗರ ತಂದ 340 ಕೆಜಿ ತೂಕದ ಕಾಂಜಾವನ್ನು ನಗರ ಪೊಲೀಸರು ಶುಕ್ರವಾರ ವಶಪಡಿಸಿಕೊಂಡಿದ್ದಾರೆ. ಮೂವರು ಆರೋಪಿಗಳನ್ನೂ ಬಂಧಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ನಗರ ಪೊಲೀಸ್‌ ಆಯುಕ್ತಾಲಯದ ಸೈಬರ್‌ ಅಪರಾಧ ಮತ್ತು ಮಾದಕದ್ರವ್ಯ ನಿಗ್ರಹ ಠಾಣೆ (ಸಿಇಎನ್) ಪೊಲೀಸರು, ವಾಹನ ಜಪ್ತಿ ಮಾಡಿದರು. ಮಹಾರಾಷ್ಟ್ರದ ಲಾತೂರ ಮೂಲದ ಅಕ್ರಮ ಇನಾಮದಾರ, ಸುಮೇರ್ ಇನಾಮದಾರ್ ಹಾಗೂ ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಮೋಹನ್ ಮೇತ್ರೆ ಎಂಬುವರನ್ನು ಬಂಧಿಸಿದರು.‌

ಸರಕು ಸಾಗಣೆ ವಾಹನದಲ್ಲಿ ಒಂದು ಭಾಗದಲ್ಲಿ ಕಬ್ಬಿಣದ ಪ್ಲೇಟ್ ಹಾಕಿ ವೆಲ್ಡಿಂಗ್ ಮಾಡಿ, ಗಾಂಜಾ ತುಂಬಿದ ಬಾಕ್ಸ್‌ಗಳನ್ನು ಅದರ ಸಂದಿಯಲ್ಲಿ ಇಟ್ಟು ಸಾಗಣೆ ಮಾಡುತ್ತಿದ್ದರು. ಮೇಲ್ನೋಟಕ್ಕೆ ಇದು ಕಬ್ಬಿಣ ಸಾಗಣೆ ಮಾಡುವ ರೀತಿಯೇ ಕಾಣಿಸುತ್ತಿತ್ತು. ತಾವರಗೇರಾ ಕ್ರಾಸ್‌ ಹತ್ತಿರ ವಾಹನ ತಪಾಸಣೆ ಮಾಡುವಾಗ, ಆರೋಪಿಗಳು ತಮ್ಮ ವಾಹನ ನಿಲ್ಲಿಸದೇ ಹೋದರು. ಇದರಿಂದ ಸಂಶಯಗೊಂಡ ಪೊಲೀಸರು ವಾಹನವನ್ನು ಬೆನ್ನತ್ತಿ ಬೇಲೂರು ಕ್ರಾಸ್ ಹತ್ತಿರ ತಡೆದರು. ಪರಾರಿಯಾಗಲು ಯತ್ನಿಸಿದ ಮೂವರೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು‌.

ADVERTISEMENT

ಇನ್‍ಸ್ಪೆಕ್ಟರ್ ಬಸವರಾಜ ತೇಲಿ, ಪಿಎಸ್‍ಐ ವಾಹಿದ್ ಹುಸೇನ್ ಕೊತ್ವಾಲ್, ಎಎಸ್‍ಐಗಳಾದ ರವಿಕುಮಾರ, ದೇವೇಂದ್ರ, ಸಿಬ್ಬಂದಿ ಶಿವಲಿಂಗ, ಸುನೀಲ್‍ಕುಮಾರ, ಚಂದ್ರಕಾಂತ, ಹುಸೇನ್‍ಬಾಷಾ ಈ ದಾಳಿಯಲ್ಲಿ ಪಾಲ್ಗೊಂಡವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.