ADVERTISEMENT

ಶುದ್ಧ ಕುಡಿಯುವ ನೀರಿಗೆ ₹ 50 ಕೋಟಿ ಹಣ ಮಂಜೂರು

18 ತಿಂಗಳ ನಂತರ ನಡೆದ ಪುರಸಭೆ ಸಾಮಾನ್ಯ ಸಭೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 16:13 IST
Last Updated 8 ಅಕ್ಟೋಬರ್ 2024, 16:13 IST
ಚಿಂಚೋಳಿ ಪುರಸಭೆ ಸಭಾಂಗಣದಲ್ಲಿ‌ ಅಧ್ಯಕ್ಷ ಆನಂದ ಟೈಗರ್ ಅಧ್ಯಕ್ಷತೆಯಲ್ಲಿ ಪುರಸಭೆ ಸಾಮಾನ್ಯ ಸಭೆ ಬುಧವಾರ ಜರುಗಿತು
ಚಿಂಚೋಳಿ ಪುರಸಭೆ ಸಭಾಂಗಣದಲ್ಲಿ‌ ಅಧ್ಯಕ್ಷ ಆನಂದ ಟೈಗರ್ ಅಧ್ಯಕ್ಷತೆಯಲ್ಲಿ ಪುರಸಭೆ ಸಾಮಾನ್ಯ ಸಭೆ ಬುಧವಾರ ಜರುಗಿತು   

ಚಿಂಚೋಳಿ: ಇಲ್ಲಿನ ಪುರಸಭೆಯ ಸಭಾಂಗಣದಲ್ಲಿ‌ ಅಧ್ಯಕ್ಷ ಆನಂದ ಟೈಗರ್ ಅಧ್ಯಕ್ಷತೆಯಲ್ಲಿ ಮಂಗಳವಾರ 18 ತಿಂಗಳ ನಂತರ ಪುರಸಭೆ ಸಾಮಾನ್ಯ ಸಭೆ ಜರುಗಿತು.

ಪಟ್ಟಣದ ಹೊರ ವಲಯದಲ್ಲಿ ನಿರ್ಮಾಣವಾಗಿರುವ ಸಿದ್ಧಸಿರಿ ಕಂಪನಿಯ ಆಸ್ತಿ ತೆರಿಗೆ, ಕಟ್ಟಡ ತೆರಿಗೆ ವಸೂಲಿಗೆ ಕೈಗೊಂಡ ಕ್ರಮಗಳ ಬಗ್ಗೆ ಸದಸ್ಯ ಅಬ್ದುಲ್ ಬಾಷೀತ ಪ್ರಶ್ನಿಸಿ ತೆರಿಗೆ ಪಾವತಿಸದೇ ಇದ್ದರೆ ಕಂಪನಿಗೆ ಬೀಗ ಹಾಕುವಂತೆ ಒತ್ತಾಯಿಸಿದರು. ಇದಕ್ಕೆ ಸದಸ್ಯ ಅನ್ವರ ಖತೀಬ ಹಾಗೂ ಇತರರು ಬೆಂಬಲಿಸಿದರೆ, ಸದಸ್ಯ ಶಿವಕುಮಾರ ಪೊಚಾಲಿ ವಿರೋಧ ವ್ಯಕ್ತಪಡಿಸಿದರು.

ಚಂದಾಪುರ ಸಾರ್ವಜನಿಕ ಸ್ಮಶಾನದಲ್ಲಿ‌ ಕುಡಿಯುವ‌ ನೀರಿನ‌ ಜಲ ಸಂಗ್ರಹಗಾರ (ಟ್ಯಾಂಕ್) ನಿರ್ಮಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ ಸದಸ್ಯ ಶಬ್ಬೀರ ಅಹಮದ್ ಅವರು, ಚಂದಾಪುರ(ಹೊಸ ಲೇಔಟ್) ಸಿಎ ಸೈಟ್‌ನಲ್ಲಿ ಟ್ಯಾಂಕ್‌ ನಿರ್ಮಾಣಕ್ಕೆ ಸಲಹೆ ನೀಡಿದರು. ಇದಕ್ಕೆ ಜಲ‌ಮಂಡಳಿ ಅಧಿಕಾರಿಗಳು ಒಪ್ಪಿದರು. ಸಭೆಯಲ್ಲಿ ವಾರ್ಡ್‌ ಸದಸ್ಯರು ತಮ್ಮ ವಾರ್ಡ್‌ನ ಸಮಸ್ಯೆಗಳನ್ನು ಪ್ರಸ್ತಾಪಿಸಿದರು.

ADVERTISEMENT

ಬಹುತೇಕ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ‌ ಸಮಸ್ಯೆ ಎದುರಾಗಿರುವುದು, ಅಸಮರ್ಪಕ ನೀರು‌ ಬಿಡುಗಡೆ ಕುರಿತು ಅಧ್ಯಕ್ಷರ ಗಮನ ಸೆಳೆದರು. ರಸ್ತೆ ಹಾಳಾಗಿದ್ದು ನೀರು ಬರುತ್ತಿಲ್ಲ, ವಾಲಿದ ವಿದ್ಯುತ್ ಕಂಬಗಳ ಸರಿಪಡಿಸಬೇಕು. ಸರಿಯಾಗಿ‌ ಕಸ ಎತ್ತುವುದಿಲ್ಲ, ಚರಂಡಿ ತುಂಬಿ ಹರಿದರೂ ಕೇಳುವುದಿಲ್ಲ. ಬೀದಿ ದೀಪಗಳ ಅಸಮರ್ಪಕ‌ ನಿರ್ವಹಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ನಮ್ಮಲ್ಲಿ ನೀರಿಗೆ ತೊಂದರೆ ಇಲ್ಲ, ಸಮಸ್ಯೆಯೇ ಇರಬಾರದು ಮುಲ್ಲಾಮಾರಿಯಲ್ಲಿ ಸಾಕಷ್ಟು ನೀರಿದೆ ಸರಿಯಾಗಿ‌ ಮೇಲ್ವಿಚಾರಣೆ ಮಾಡಿ ಎಂದು ಅಧ್ಯಕ್ಷ ಆನಂದ ಟೈಗರ್ ಸೂಚಿಸಿದರು.

ಉಪಾಧ್ಯಕ್ಷೆ ಸುಲ್ತಾನಾ ಬೇಗಂ, ಮುಖ್ಯಾಧಿಕಾರಿ ಕಾಶಿನಾಥ ಧನ್ನಿ, ಸದಸ್ಯ ಭೀಮರಾವ ರಾಠೋಡ,ಶಬ್ಬೀರ ಅಹ್ಮದ್, ರಾಧಾಬಾಯಿ ಓಲಗೇರಿ, ರೂಪಕಲಾ ಕಟ್ಟಿಮನಿ, ಸುಲೋಚನಾ ಕಟ್ಟಿ, ಶೇಷಾದ್ರಿ ಕಳಸ್ಕರ, ಬಸವರಾಜ ಸಿರ್ಸಿ, ನಾಗೇಂದ್ರ ಗುರಂಪಳ್ಳಿ, ಲಕ್ಷ್ಮೀಕಾಂತ ಹಾಜರಿದ್ದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸವಿತಾ, ಲೋಕೊಪಯೋಗಿ ಎಇಇ ಬಸವರಾಜ‌ ಬೈನೂರ, ಗಿರಿರಾಜ ಸಜ್ಜನಶೆಟ್ಟಿ, ಬಿಆರ್‌ಸಿ ಸಮನ್ವಯಾಧಿಕಾರಿ ನಾಗಶೆಟ್ಟಿ‌ ಭದ್ರಶೆಟ್ಟಿ, ಅಕ್ಷರ ದಾಸೋಹ ಸಹಾಯಕ‌ ನಿರ್ದೇಶಕ ಜಯಪ್ಪ ಚಾಪಲ, ಜೆಸ್ಕಾಂ ಎಇಇ ಕಾಮಣ್ಣ ಇಂಜಳ್ಳಿಕರ, ಪರಿಸರ ಎಂಜಿನಿಯರ್‌ ಸಂಗಮೇಶ ಪನಶೆಟ್ಟಿ ಹಾಗೂ ಪುರಸಭೆ ಸಿಬ್ಬಂದಿ ಹಾಜರಿದ್ದರು.

ಈ ಹಿಂದೆ 2023ರ ಮಾರ್ಚ್ 16ರಂದು ಪುರಸಭೆ ಸಾಮಾನ್ಯ ನಡೆದಿತ್ತು. ಹಿಂದಿನ ಅಧ್ಯಕ್ಷೆ ಜಗದೇವಿ ಗಡಂತಿ ಅವರ ಅವಧಿ‌ ಮುಗಿದ ಮೇಲೆ ಆಡಳಿತಾಧಿಕಾರಿ ನೇಮಕವಾಗಿತ್ತು. ಆಗ ಯಾವುದೇ ಸಭೆ ನಡೆದಿರಲಿಲ್ಲ. ಇದರಿಂದ 14ರಿಂದ 15 ತಿಂಗಳು ಕಾಲ ಸಾಮಾನ್ಯ ಸಭೆ ಇಲ್ಲದೇ ಸದಸ್ಯರ ಸಮಯ ವ್ಯರ್ಥವಾಗಿದೆ. ಪುರಸಭೆಗೆ ಸೆ.10ರಂದು ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.