ADVERTISEMENT

ಧರೆಗುರುಳಿದ ವಿದ್ಯುತ್‌ ಕಂಬಗಳು

ಚಿಂಚೋಳಿ: ಬಿರುಗಾಳಿ ಮಳೆಗೆ ನೆಲಕ್ಕುರುಳಿದ ಮೆಕ್ಕೆಜೋಳ ಬೆಳೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2025, 16:16 IST
Last Updated 18 ಏಪ್ರಿಲ್ 2025, 16:16 IST
ಚಿಂಚೋಳಿ ತಾಲ್ಲೂಕು ಚಿಮ್ಮನಚೋಡ ಬಳಿ ಬಿರುಗಾಳಿ ಮಳೆಗೆ ವಿದ್ಯುತ್ ತಂತಿ ಮೇಲೆ ಮರ ಉರುಳಿ ರಸ್ತೆಗೆ ಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಜೆಸ್ಕಾಂ ಸಿಬ್ಬಂದಿ ತೆರವುಗೊಳಿಸಿದರು
ಚಿಂಚೋಳಿ ತಾಲ್ಲೂಕು ಚಿಮ್ಮನಚೋಡ ಬಳಿ ಬಿರುಗಾಳಿ ಮಳೆಗೆ ವಿದ್ಯುತ್ ತಂತಿ ಮೇಲೆ ಮರ ಉರುಳಿ ರಸ್ತೆಗೆ ಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಜೆಸ್ಕಾಂ ಸಿಬ್ಬಂದಿ ತೆರವುಗೊಳಿಸಿದರು   

ಚಿಂಚೋಳಿ: ತಾಲ್ಲೂಕಿನ ಕುಂಚಾವರಂ ಸುತ್ತಲೂ ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಬಿರುಗಾಳಿ ಸಹಿತ ಮಳೆಗೆ ಪೋಚಾವರಂ ಗ್ರಾಮದ ಅರ್ಜುನ ಶಿರವಾಟಿ ಎಂಬ ರೈತರ ಎರಡು ಎಕರೆ ಮೆಕ್ಕೆಜೋಳ ನೆಲಸಮವಾಗಿದೆ.

ಜೋಳ ತೆನೆಬಿಟ್ಟು ಕಾಳುಗಳು ಹಾಲು ತುಂಬಿಕೊಳ್ಳುತ್ತಿದ್ದವು. ಇದರಿಂದ ರೈತರಿಗೆ ₹2 ಲಕ್ಷ ನಷ್ಟ ಉಂಟಾಗಿದೆ.

ಸಿಡಿಲಿಗೆ ಹಸು ಬಲಿ: ತಾಲ್ಲೂಕಿನ ಗಡಿಲಿಂಗದಳ್ಳಿಯಲ್ಲಿ ಸಿಡಿಲು ಬಡಿದು ನೈನಮ್ಮ ಮುದ್ನಾಳ ಎಂಬುವವರ ಹಸು ಸಾವನ್ನಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ADVERTISEMENT

ತಾಲ್ಲೂಕಿನಲ್ಲಿ ಶುಕ್ರವಾರ ಸುರಿದ ಬಿರುಗಾಳಿ ಮಳೆಗೆ 25 ವಿದ್ಯುತ್ ಕಂಬಗಳು ಧರೆಗುರುಳಿದರೆ, 6 ಟಿಸಿಗಳು ಹಾಳಾಗಿವೆ. ಮಳೆ ಬಿರುಗಾಳಿಯಿಂದ ಏಪ್ರಿಲ್ ತಿಂಗಳಲ್ಲಿಯೇ ಧರೆಗುರುಳಿದ ವಿದ್ಯುತ್ ಕಂಬಗಳ ಸಂಖ್ಯೆ 75ಕ್ಕೇರಿದರೆ, 15 ವಿದ್ಯುತ್ ಪರಿವರ್ತಕಗಳು ಕೆಟ್ಟು ಹೋಗಿವೆ. ಇದರಿಂದ ಜೆಸ್ಕಾಂಗೆ ಸುಮಾರು ₹ 15 ಲಕ್ಷದಿಂದ ₹20 ಲಕ್ಷ ನಷ್ಟ ಉಂಟಾಗಿದೆ ಎಂದು‌ ಜೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಕಾಮಣ್ಣ ಇಂಜಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಚಿಂಚೋಳಿ ತಾಲ್ಲೂಕು ಪೋಚಾವರಂ ಗ್ರಾಮದಲ್ಲಿ ಬಿರುಗಾಳಿ ಮಳೆಗೆ ನೆಲಕ್ಕುರುಳಿದ ಮೆಕ್ಕೆ ಜೋಳದ ಬೆಳೆ ಹಾಳಾಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.