
ವಾಡಿ: ನಾಲವಾರ ವಲಯದ ಸೂಗೂರ (ಎನ್) ಗ್ರಾಮದ ಭೋಜಲಿಂಗೇಶ್ವರ ಸಂಸ್ಥಾನ ಮಠದಲ್ಲಿ ಕಿರಿಯ ಪೀಠಾಧಿಪತಿ ಕುಮಾರ ಭೋಜರಾಜರ 30ನೇ ಜನ್ಮದಿನೋತ್ಸವ ನಿಮಿತ್ತ ಜ.3ರ ಶನಿವಾರ ಸಂಜೆ 1008 ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಆಯೋಜಿಸಲಾಗಿದೆ.
ಪ್ರಸ್ತುತ ಪೀಠಾಧಿಪತಿಗಳಾದ ಹಿರಗಪ್ಪ ತಾತನವರ ಸಾನ್ನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬೆಳಿಗ್ಗೆ ಕರ್ತೃ ಗದ್ದುಗೆಗೆ ರುದ್ರಾಭೀಷೇಕ, ಬಿಲ್ವಾರ್ಚನೆ ನಡೆಯಲಿದೆ. ಸಂಜೆ 5ಗಂಟೆಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಬೆಳಿಗ್ಗೆಯಿಂದ ಸಂಜೆವರೆಗೆ ಆರೋಗ್ಯ ತಪಾಸಣೆ ಶಿಬಿರ ಸಹ ನಡೆಯಲಿದೆ. ಸಂಜೆ ನಡೆಯುವ ಧಾರ್ಮಿಕ ಸಭೆಯಲ್ಲಿ ಹಲವಾರ ಗಣ್ಯರು ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಹಿರಗಪ್ಪ ತಾತನವರಿಗೆ ಮತ್ತು ಕುಮಾರ ಭೋಜರಾಜರಿಗೆ ನಾಣ್ಯಗಳ ಮತ್ತು ಕುಪ್ಪಸದಿಂದ ತುಲಾಭಾರ ನಡೆಯಲಿದ್ದು, ನಂತರ ದಾಸೋಹ ಸೇವೆ ಜರುಗಲಿದೆ ಎಂದು ಮಠದ ಭಕ್ತರಾದ ಸಿದ್ದುಗೌಡ ಕುರಾಳ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.