ADVERTISEMENT

ಅಫಜಲಪುರ | ಕಾರಿನ ಮೇಲೆ ಹತ್ತಿದ ಟ್ರ್ಯಾಕ್ಟರ್‌: 6 ಜನರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 21 ಜನವರಿ 2024, 16:30 IST
Last Updated 21 ಜನವರಿ 2024, 16:30 IST
ಅಫಜಲಪುರ ಪಟ್ಟಣದ ಭೀಮಾ ಏತ ನೀರಾವರಿ ಉಪ ವಿಭಾಗದ ಕಚೇರಿ ಎದುರುಗಡೆ ಭಾನುವಾರ ಸಾಯಂಕಾಲ ದೇವಲಗಣಗಾಪುರಕ್ಕೆ ಹೊರಟಿದ್ದ ಮಹಾರಾಷ್ಟ್ರ ಮೂಲದ ಕಾರ್ ಮೇಲೆ ಟ್ರ್ಯಾಕ್ಟರ್ ಹತ್ತಿರುವುದು
ಅಫಜಲಪುರ ಪಟ್ಟಣದ ಭೀಮಾ ಏತ ನೀರಾವರಿ ಉಪ ವಿಭಾಗದ ಕಚೇರಿ ಎದುರುಗಡೆ ಭಾನುವಾರ ಸಾಯಂಕಾಲ ದೇವಲಗಣಗಾಪುರಕ್ಕೆ ಹೊರಟಿದ್ದ ಮಹಾರಾಷ್ಟ್ರ ಮೂಲದ ಕಾರ್ ಮೇಲೆ ಟ್ರ್ಯಾಕ್ಟರ್ ಹತ್ತಿರುವುದು   

ಅಫಜಲಪುರ: ಪಟ್ಟಣದ ಭೀಮಾ ಏತ ನೀರಾವರಿ ಉಪವಿಭಾಗದ ಕಚೇರಿ ಎದುರುಗಡೆ ಭಾನುವಾರ ಸಂಜೆ ದೇವಲಗಣಗಾಪುರಕ್ಕೆ ಹೊರಟಿದ್ದ ಮಹಾರಾಷ್ಟ್ರ ಮೂಲದ ಕಾರ್ ಮೇಲೆ ಟ್ರ್ಯಾಕ್ಟರ್‌ ಹತ್ತಿ, ಕಾರಿನಲ್ಲಿದ್ದ ಒಟ್ಟು 6 ಜನರಲ್ಲಿ ಇಬ್ಬರಿಗೆ ಗಂಭೀರಗಳಾಗಿವೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ತಕ್ಷಣ ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸ್ ಮುಖಾಂತರ ಕಲಬುರಗಿ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ತಿಳಿದು ಬಂದಿದೆ.

ಮಹಾರಾಷ್ಟ್ರದಿಂದ ದೇವಲ್ ಗಾಣಗಾಪುರಕ್ಕೆ ದತ್ತ ಮಹಾರಾಜರ ದರ್ಶನಕ್ಕೆ ತೆರಳುತ್ತಿದ್ದ ಕಾರು ಪಟ್ಟಣದ ಭೀಮಾ ಏತ ನೀರಾವರಿ ಕಚೇರಿ ಎದುರುಗಡೆ ರಾಷ್ಟ್ರೀಯ ಹೆದ್ದಾರಿ ಮೇಲೆ ಹೋಗುವಾಗ ಕಾರಿಗೆ ಎದುರಾಗಿ ಬಂದು ಟ್ರ್ಯಾಕ್ಟರ್‌ ಹತ್ತಿದೆ. ಈ ಕುರಿತು ಪ್ರಕರಣ ದಾಖಲಾಗಿಲ್ಲ ಎಂದು ಅಫಜಲಪುರ ಪೊಲೀಸ್ ಠಾಣಾ ಸಿಬ್ಬಂದಿ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT