ವರ್ಗಾವಣೆ
ಕಲಬುರಗಿ: ಜಿಲ್ಲೆಯ ವಿವಿಧೆಡೆ ಕೆಲಸ ಮಾಡುತ್ತಿದ್ದ ಮೂವರು ಡಿವೈಎಸ್ಪಿ ದರ್ಜೆ ಅಧಿಕಾರಿಗಳು ಹಾಗೂ ಏಳು ಮಂದಿ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ಸೋಮವಾರ ರಾಜ್ಯ ಪೊಲೀಸ್ ಇಲಾಖೆಯು ಆದೇಶ ಹೊರಡಿಸಿದೆ.
ಕಲಬುರಗಿ ಗ್ರಾಮೀಣ ಉಪ ವಿಭಾಗದ ಎಸಿಪಿ ಡಿ.ಜಿ.ರಾಜಣ್ಣ ಅವರನ್ನು ಕಲಬುರಗಿಯ ಪೊಲೀಸ್ ತರಬೇತಿ ಶಾಲೆಗೆ, ಕಲಬುರಗಿ ಸಿಸಿಬಿ ಎಸಿಪಿ ಸಂತೋಷ ಬನಹಟ್ಟಿ ಅವರನ್ನು ಬಾಗಲಕೋಟೆಯ ಜಿಲ್ಲೆಯ ಹುನಗುಂದ ಉಪವಿಭಾಗಕ್ಕೆ, ಸೆನ್ ವಿಭಾಗದ ಎಸಿಪಿ ಮಡೋಳಪ್ಪ ಪಿ.ಎಸ್. ಅವರನ್ನು ಬೀದರ್ ಜಿಲ್ಲೆಯ ಹುಮನಾಬಾದ್ ಉಪವಿಭಾಗಕ್ಕೆ ವರ್ಗಾಯಿಸಲಾಗಿದೆ. ಸ್ಥಳ ನಿರೀಕ್ಷಣೆಯಲ್ಲಿದ್ದ ಗಿರಿಮಲ್ಲ ತಳಕಟ್ಟಿ ಅವರನ್ನು ಗ್ರಾಮೀಣ ಉಪವಿಭಾಗದ ಎಸಿಪಿಯಾಗಿ ವರ್ಗಾಯಿಸಲಾಗಿದೆ.
ಕಲಬುರಗಿಯ ಸ್ಟೇಷನ್ ಬಜಾರ್ ಇನ್‌ಸ್ಪೆಕ್ಟರ್ ಶಕೀಲ್‌ಅಹ್ಮದ್ ಅಂಗಡಿ ಅವರನ್ನು ಡಿಸಿಆರ್‌ಇಗೆ, ಅಶೋಕನಗರ ಠಾಣೆ ಇನ್‌ಸ್ಪೆಕ್ಟರ್ ಅರುಣಕುಮಾರ ಅವರನ್ನು ಕಲಬುರಗಿ ಸಿಸಿಬಿಗೆ, ಫರಹತಾಬಾದ್ ಠಾಣೆ ಇನ್‌ಸ್ಪೆಕ್ಟರ್ ಮಲ್ಲಿಕಾರ್ಜುನ ಇಕ್ಕಳಕಿ ಅವರನ್ನು ಬೀದರ್ ಜಿಲ್ಲೆಯ ಡಿಎಸ್‌ಬಿಗೆ, ವಿಶ್ವವಿದ್ಯಾಲಯ ಠಾಣೆ ಇನ್‌ಸ್ಪೆಕ್ಟರ್ ಸುಶೀಲಕುಮಾರ್ ಅವರನ್ನು ಕಲಬುರಗಿ ಸಬರ್ಬನ್ ಠಾಣೆಗೆ, ಸಬರ್ಬನ್ ಠಾಣೆ ಇನ್‌ಸ್ಪೆಕ್ಟರ್ ಸಂತೋಷ ತಟ್ಟೆಪಲ್ಲಿ ಅವರನ್ನು ಬೀದರ್ ಜಿಲ್ಲೆಯ ಹುಮನಾಬಾದ್ ವೃತ್ತಕ್ಕೆ, ಆಳಂದ ಠಾಣೆ ಇನ್‌ಸ್ಪೆಕ್ಟರ್ ಪ್ರಕಾಶ ಯಾತನೂರ ಅವರನ್ನು ಕಲಬುರಗಿಯ ಅಶೋಕನಗರ ಠಾಣೆಗೆ, ಕಲಬುರಗಿ ಪೊಲೀಸ್ ವಸತಿ ಶಾಲೆಯ ಹುಸೇನ್‌ಬಾಷಾ ಸಿ. ಅವರನ್ನು ಫರಹತಾಬಾದ್ ಠಾಣೆಗೆ, ಬೀದರ್ ಜಿಲ್ಲೆಯ ಹುಮನಾಬಾದ್ ವೃತ್ತದ ಇನ್‌ಸ್ಪೆಕ್ಟರ್ ಗುರುಲಿಂಗಪ್ಪ ಎಂ. ಪಾಟೀಲ ಅವರನ್ನು ಕಲಬುರಗಿಯ ಸ್ಟೇಷನ್ ಬಜಾರ್ ಠಾಣೆಗೆ ವರ್ಗಾಯಿಸಿ ಆದೇಶಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.