
ಕಮಲಾಪುರ: ವರ್ಗ ಕೋಣೆಯ ಪಾಠ ಬೋಧನೆ ಮಾಡಿದರೆ ಸಾಲದು ಗುಣಮಟ್ಟದ ಕಲಿಕೆಗೆ ಮಗುವಿಗೆ ಕ್ರೀಯಾಶೀಲ ಚಟುವಟಿಕೆಯಲ್ಲಿ ತೊಡಿಗಿಸುವುದು ಅಗತ್ಯ ಎಂದು ಬಿಜೆಪಿ ನಾಯಕಿ ಜಯಶ್ರೀ ಮತ್ತಿಮಡು ತಿಳಿಸಿದರು.
ಪಟ್ಟಣದ ಪ್ರತಿಭಾ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ‘ವಿಜ್ಞಾನ ವಸ್ತು ಪ್ರದರ್ಶನ ಮತ್ತು ಮೋಜಿನ ಮೇಳ’ ಉದ್ಘಾಟಿಸಿ ಮಾತನಾಡಿದರು.
ಭಾಷೆ, ಸಮಾಜ, ವಿಜ್ಞಾನ, ಗಣಿತ, ಇತಿಹಾಸ, ವ್ಯವಹಾರ, ಆಹಾರ, ಪರಿಸರ ಆಧಾರಿತ ಪ್ರತಿಕೃತಿಗಳನ್ನು ತಯ್ಯಾರಿಸಿರುವ ಈ ಮಕ್ಕಳು ಅವುಗಳ ಬಗ್ಗೆ ಅಚ್ಚುಕಟ್ಟಾಗಿ ವಿವರಣೆ ನೀಡುತ್ತಾರೆ. ಇದು ಮಕ್ಕಳ ಮನದಲ್ಲಿ ಅಚಳಿಯದೆ ಉಳಿಯುತ್ತದೆ. ಸಂತಸದ ಕಲಿಕೆಗೆ ರಹದಾರಿಯಗಿದೆ. ತರಗತಿ ಕೋಣೆಯಲ್ಲಿ ಪಾಠ ಮಾಡಿದರೆ ಮನದಟ್ಟಾಗುವುದಿಲ್ಲ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪರಮೇಶ್ವರ ಓಕಳಿ ಮಾತನಾಡಿದರು.
ವಿವಿಧ ಮಕ್ಕಳು ತಾವು ತಯಾರಿಸಿದ ಪೃತಿಕೃತಿಗಳ ಕುರಿತು ವಿವರಣೆ ನೀಡಿದರು.
ಕೆಜಿಬಿ ಬ್ಯಾಂಕ್ ವ್ಯವಸ್ಥಾಪಕಿ ಹರ್ಷಾ ಕುಲಕರ್ಣಿ, ಬಿಜೆಪಿ ಮುಖಂಡ ಆನಂದ ಕಣಸೂರ, ಸಿಆರ್‌ಪಿ ಅಂಬಿಕಾ ಉಪ್ಪಿನ, ಶರಣಬಸಪ್ಪ ಜೀವಣಗಿ, ಸಂಸ್ಥೆ ಅಧ್ಯಕ್ಷ ಸಂಗಮೇಶ ಇಮಡಾಪುರ, ಶಾಲೆ ಮುಖ್ಯ ಶಿಕ್ಷಕಿ ಸಪ್ನಾ ಇಮಡಾಪುರ, ಶರಣು ರಟಕಲ್, ತಯ್ಯಬ್ ಚೌದ್ರಿ, ಬಾಬು ಜಾಲಳ್ಳಿ, ಮಾರುತಿ ಚೌವಾಣ್ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.