ADVERTISEMENT

ಅಫಜಲಪುರ | ‘ಸಾಮಾಜಿಕ ಜಾಗೃತಿ ಹರಡಿದ ಬಸವ’

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2025, 16:27 IST
Last Updated 30 ಏಪ್ರಿಲ್ 2025, 16:27 IST
ಅಫಜಲಪುರ ತಾಲೂಕಿನ ಬಳ್ಳೂರಗಿ ಗ್ರಾಮದ ನಂದಿ ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಧ್ವಜಾರೋಹಣ ಹಾಗೂ  ಬಸವೇಶ್ವರ ಭಾವಚಿತ್ರಕ್ಕೆ ಪೂಜಿ ನೆರವೇರಿಸಲಾಯಿತು
ಅಫಜಲಪುರ ತಾಲೂಕಿನ ಬಳ್ಳೂರಗಿ ಗ್ರಾಮದ ನಂದಿ ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಧ್ವಜಾರೋಹಣ ಹಾಗೂ  ಬಸವೇಶ್ವರ ಭಾವಚಿತ್ರಕ್ಕೆ ಪೂಜಿ ನೆರವೇರಿಸಲಾಯಿತು   

ಅಫಜಲಪುರ: ‘ಬಸವಣ್ಣ ಮಹಾನ್ ಕವಿ, ಸಮಾಜ ಸುಧಾರಕ ಮತ್ತು ತತ್ವಜ್ಞಾನಿಯಾಗಿ ಹೊರಹೊಮ್ಮಿದರು. ಕಾವ್ಯದ ಮೂಲಕ ಅವರು ಸಾಮಾಜಿಕ ಜಾಗೃತಿಯನ್ನು ಹರಡಲು ಪ್ರಾರಂಭಿಸಿದರು’ ಎಂದು ಮಹಾರಾಷ್ಟ್ರದ ದುಧನಿ ಶಾಂತಲಿಂಗೇಶ್ವರ ವಿರಕ್ತಮಠ ಮಠದ ಗುರುಶಾಂತಲಿಂಗ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಬಳ್ಳೂರಗಿ ಗ್ರಾಮದ ನಂದಿ ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಧ್ವಜಾರೋಹಣ ಹಾಗೂ ಬಸವೇಶ್ವರ ಭಾವಚಿತ್ರಕ್ಕೆ ಪೂಜಿ ನೆರವೇರಿಸಿ ಅವರು ಮಾತನಾಡಿದರು.

ಬಸವ ಜಯಂತಿ ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಗುರುಮಾಂತಯ್ಯ ಮಠಪತಿ, ಅಣವೀರಯ್ಯ ಮಠಪತಿ, ಗ್ರಾಮ ಪಂಚಾಯಿತಿ ಸದಸ್ಯರಾದ ರಾಜು ಹಡಪದ, ಸಿದ್ದರಾಮಯ್ಯ ಮಠಪತಿ, ಶರಣು ಕಲಶೆಟ್ಟಿ, ಗೌರಿಶಂಕರ ಸೊನ್ನ, ಶಾಂತಲಿಂಗ ಕಗ್ಗೋಡ, ಬಸವ ಸೋಮ ಜಾಳ, ಹನುಮಂತ ರೆಡ್ಡಿ, ಶ್ರೀಶೈಲ ಚಲಗೇರಿ, ಮನೋಹರ ರಾಠೋಡ್, ವೆಂಕಟೇಶ ಗುತ್ತೇದಾರ್, ಯಲ್ಲಾಲಿಂಗ ಪೂಜಾರಿ, ಶರಣಯ್ಯ ಮಠಪತಿ, ಪಿಂಟು ವಾಡಿ, ಶ್ರೀಶೈಲ ಸೋಮಜಾಳ ಮತ್ತಿತರರು ಇದ್ದರು.

ADVERTISEMENT

ನಂದಿ ಬಸವೇಶ್ವರ ಜಾತ್ರಾ ಕಾರ್ಯಕ್ರಮ: ಬಳ್ಳೂರಗಿ ಗ್ರಾಮದ ನಂದಿ ಬಸವೇಶ್ವರ ಜಾತ್ರೆ ನಿಮಿತ್ತ ಏ30ರಂದು ರಾತ್ರಿ 8 ಗಂಟೆಗೆ ಕಳಸ ಮೆರವಣಿಗೆ ಮಾಡಲಾಯಿತು. ನಂತರ ಪುರವಂತರ ಸೇವೆ, ಮಂಗಳಾರತಿ ಮಾಡಿದ ನಂತರ ಮದ್ದು ಸುಡುವ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.

ಮೇ.1 ರಂದು ಬೆಳಗ್ಗೆ 9 ಗಂಟೆಗೆ ನಂದಿಕೋಲ ಮತ್ತು ಪಲ್ಲಕ್ಕಿ ಮೆರವಣಿಗೆ, ಸಂಜೆ 4 ಗಂಟೆಗೆ ನಂದಿಬಸವೇಶ್ವರ ತೊಟ್ಟಿಲು ಕಾರ್ಯಕ್ರಮ ಜರುಗುವುದು. 2ರಂದು ಜಂಗೀ ಕುಸ್ತಿಗಳು ಜರುಗಲಿವೆ. ಮೇ.2 ರಂದು ಬೆಳಗ್ಗೆ 8 ಗಂಟೆಯಿಂದ ಮಹಾರಾಷ್ಟ್ರದ ಗುಗವಾಡ ಗ್ರಾಮದ ಶಾಂತಾಬಾಯಿ ಕುಂದ್ರಾಳ, ಜೇವರ್ಗಿ ತಾಲ್ಲೂಕಿನ ಶರಣಬಸಪ್ಪ ನದಿ ಸಿನ್ನೂರು ಸಂಗಡಿಗರಿಂದ ಗೀಗೀ ಪದಗಳ ಹಾಡುಗಾರಿಕೆ ನಡೆಯಲಿದೆ. ಅನ್ನದಾಸೋಹ, ನೀರು, ನೆರಳಿನ ವ್ಯವಸ್ಥೆ ಮಾಡಲಾಗಿದೆ. ಮೇ1, 2 ರಂದು ರಾತ್ರಿ 10 ಗಂಟೆಗೆ ‘ಪ್ರಾಣ ಹೋದರು ಮಾನಬೇಕು’ ನಾಟಕ ಪ್ರದರ್ಶನ ನಡೆಯಲಿದೆ. ಅಫಜಲಪುರ, ಸೋಲಾಪುರ, ಅಕ್ಕಲಕೋಟ, ದುಧನಿಯಿಂದ ಬಸ್‌ ವ್ಯವಸ್ಥೆ ಮಾಡಲಾಗಿದೆ.

ಅಫಜಲಪುರ ತಾಲೂಕಿನ ಬಳ್ಳೂರಗಿ ಗ್ರಾಮದ ಸರ್ಕಾರಿ ಆಯುರ್ವೇದಿಕ್ ಆಸ್ಪತ್ರೆಯಲ್ಲಿ ಬಸವ ಜಯಂತಿಯನ್ನು ಆಚರಿಸಲಾಯಿತು. ಡಾ.ಶ್ರೀಶೈಲ ಪಾಟೀಲ ಹಾಗೂ ಪ್ರಭಾವತಿ ಮೇತ್ರೆ ಮತ್ತಿತರರು ಇದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.