ADVERTISEMENT

ಅಫಜಲಪುರ: ಕಾಡಸಿದ್ದೇಶ್ವರ ಜಾತ್ರೆ ಸಂಪನ್ನ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 4:54 IST
Last Updated 19 ಫೆಬ್ರುವರಿ 2026, 4:54 IST
ಅಫಜಲಪುರ ತಾಲ್ಲೂಕಿನ ಅಮರ್ಜಾ ನದಿ ತೀರದ ಕಾರಭೋಸಗಾ ಗ್ರಾಮದ ಕಾಡಸಿದ್ದೇಶ್ವರ ಜಾತ್ರಾ ಮಹೋತ್ಸವವು ಬುಧವಾರ ಸಂಭ್ರಮದಿಂದ ನಡೆಯಿತು
ಅಫಜಲಪುರ ತಾಲ್ಲೂಕಿನ ಅಮರ್ಜಾ ನದಿ ತೀರದ ಕಾರಭೋಸಗಾ ಗ್ರಾಮದ ಕಾಡಸಿದ್ದೇಶ್ವರ ಜಾತ್ರಾ ಮಹೋತ್ಸವವು ಬುಧವಾರ ಸಂಭ್ರಮದಿಂದ ನಡೆಯಿತು   

ಅಫಜಲಪುರ:ತಾಲ್ಲೂಕಿನ ಸುಕ್ಷೇತ್ರ ಅಮರ್ಜಾ ನದಿ ತೀರದ ಕಾರ ಭೋಸಗಾ ಗ್ರಾಮದ ಕಾಡಸಿದ್ದೇಶ್ವರ ಜಾತ್ರಾ ಮಹೋತ್ಸವವು ಬುಧವಾರ ಸಂಭ್ರಮದಿಂದ ನಡೆಯಿತು.

ಮಂಗಳವಾರ ಸಂಜೆ ಐದು ದಿನಗಳ ಕಾಲ ಪ್ರತಿಷ್ಠಾಪಿಸಿದ ನಂದಿ ಕೋಲುಗಳು ಅಮರ್ಜಾ ನದಿ ತೀರದ ಸಂಗಮೇಶ್ವರ ದೇವಸ್ಥಾನದಲ್ಲಿ ಪೂಜೆ ಮಾಡಿಸಿದರು. ನಂತರ ಕಾಡಸಿದ್ದೇಶ್ವರ ದೇವಸ್ಥಾನದ ಹತ್ತಿರದ ಹೊಲದಲ್ಲಿ ರಾತ್ರಿಯಿಂದ ಬೆಳಗಿನ ಜಾವದ ತನಕ ಗೀಗೀ ಪದಗಳ ಹಾಡುಗಾರಿಕೆ ನಡೆಯಿತು.

ಬೆಳಗಿನ ಜಾವ ನಂದಿ ಕೋಲುಗಳಿಗೆ ಹೂ ಮೂಡಿಸುವ ಕಾರ್ಯಕ್ರಮವು ಸಿಡಿ ಮದ್ದುಗಳ ನಡುವೆ ಚಿತ್ತಾರ ನಡುವೆ ಜರುಗಿತು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಾಗಿ ಬಂದು ಗ್ರಾಮದ ಅಗಸಿ ಬಳಿ ಬಂದು ಮತ್ತೆ ಅರ್ಥಗರ್ಭಿತ ವಾದ ಗೀಗೀ ಪದಗಳ ಹಾಡಿಕೆ ನಡೆಯಿತು.

ADVERTISEMENT

ಸಂಜೆ ಪಲ್ಲಕ್ಕಿ ಮತ್ತು ನಂದಿ ಕೋಲುಗಳು ಮೆರವಣಿಗೆ ಜೊತೆಗೆ ತನಾರತಿ ಹೊತ್ತ ಮಹಿಳೆಯರು ಮಠಕ್ಕೆ ಬಂದು ಐದು ಸುತ್ತು ಹಾಕಿ ಹರಕೆ ತೀ ರಿಸಿದರು. ನಂತರ ಉರುಳು ಸೇವೆಗೈದು ಭಕ್ತಿ ಮೆರೆದರು.

ನಂತರ ಜಾವಳ ಕಾರ್ಯಕ್ರಮವು ನಡೆಯಿತು. ಮಹಾ ಮಂಗಳಾರತಿಯೊಂದಿಗೆ ಜಾತ್ರೆ ಸಂಪನ್ನ ಗೊಂಡಿತು. ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.