ADVERTISEMENT

ಕಲಬುರಗಿ ಜನರಿಗೆ ಎಜಿಪಿ ಸಿಎನ್‌ಜಿ ಸಂಪರ್ಕ

ಮುಂದಿನ ಮೂರು ತಿಂಗಳೊಳಗಾಗಿ ಜನತೆಗೆ ಅಡುಗೆ ಅನಿಲ ಜಾಲ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2022, 5:59 IST
Last Updated 21 ಸೆಪ್ಟೆಂಬರ್ 2022, 5:59 IST
ದೇಬಶಿಷ್
ದೇಬಶಿಷ್   

ಕಲಬುರಗಿ: ನಗರದ ಜನರಿಗೆ ಅತಿ ಕಡಿಮೆ ದರದಲ್ಲಿ ಸಿಎನ್‌ಜಿ ಹಾಗೂ ಅಡುಗೆ ಅನಿಲ ಸಂಪರ್ಕವನ್ನು ನೀಡುವ ಉದ್ದೇಶದಿಂದ ಕಲಬುರಗಿ ನಗರದಲ್ಲಿ ಪೈಪ್‌ಲೈನ್‌ ಕಾಮಗಾರಿ ನಡೆಯುತ್ತಿದ್ದು, ಮುಂದಿನ ಮೂರು ತಿಂಗಳಲ್ಲಿ ಅಡುಗೆ ಅನಿಲ ಸಂಪರ್ಕವನ್ನು ನೀಡಲಾಗುವುದು ಎಂದು ಎಜಿ ಅಂಡ್ ಪಿ ಪ್ರಥಮ್ ಕಂಪನಿಯ ವಿಭಾಗೀಯ ಮುಖ್ಯಸ್ಥ ದೇಬಶಿಷ್ ಚಟ್ಟೋಪಾಧ್ಯಾಯ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಗರದಲ್ಲಿ ಈಗಾಗಲೇ ಪೈಪ್‌ಲೈನ್‌ ಅಳವಡಿಕೆ ಕಾಮಗಾರಿ ಆರಂಭವಾಗಿದ್ದು, ಒಟ್ಟು 74 ಕಿ.ಮೀ. ಸಿಎನ್‌ಜಿ ಅನಿಲ ಸಾಗಿಸುವ ಪೈಪ್‌ಲೈನ್‌ ಅಳವಡಿಸಲಾಗುತ್ತಿದೆ. 37 ಸಿಎನ್‌ಜಿ ಸ್ಟೇಶನ್‌ಗಳನ್ನು ಆರಂಭಿಸಲಾಗುವುದು’ ಎಂದರು. ರಾಜ್ಯದ 15 ಜಿಲ್ಲೆಗಳಲ್ಲಿ ಪೈಪ್‌ಲೈನ್‌ ಮೂಲಕ ನೈಸರ್ಗಿಕ ಅನಿಲ ಒದಗಿಸಲಾಗುವುದು. ಇದಕ್ಕಾಗಿ ಕಂಪನಿಯು ₹ 5 ಸಾವಿರ ಕೋಟಿ ಹೂಡಿಕೆಯನ್ನು ಮಾಡುತ್ತಿದ್ದು, ರಾಜ್ಯದಲ್ಲಿ 6 ಸಾವಿರಕ್ಕೂ ಅಧಿಕ ಉದ್ಯೋಗಗಳನ್ನು ಸೃಷ್ಟಿಸಲಿದೆ. ಇದರಲ್ಲಿ ಬಹುತೇಕ ಸ್ಥಳೀಯರಿಗೇ ಉದ್ಯೋಗ ನೀಡಲಾಗುವುದು’ ಎಂದರು.

‘ಉತ್ತರ ಕರ್ನಾಟಕದ ಕಲಬುರಗಿ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಕಳೆದ ಆಗಸ್ಟ್‌ವರೆಗೆ 17 ಸಾವಿರ ಜನರು ತಮ್ಮ ಮನೆಗಳಿಗೆ ಪೈಪ್ ಮೂಲಕ ಅಡುಗೆ ಅನಿಲ ಪೂರೈಸಲು ಹೆಸರು ನೋಂದಾಯಿಸಿಕೊಂಡಿದ್ದಾರೆ. 5 ಸಾವಿರಕ್ಕೂ ಅಧಿಕ ಮನೆಗಳಿಗೆ ಪೈಪ್‌ಲೈನ್‌ ಕೆಲಸ ಮಾಡಲಾಗಿದೆ’ ಎಂದರು.

ADVERTISEMENT

‘ಪೈಪ್‌ ಮೂಲಕವೇ ಅಡುಗೆ ಅನಿಲ ಬರುವುದರಿಂದ ಅಡುಗೆ ಮನೆಯಲ್ಲಿ ಸಿಲಿಂಡರ್ ಇರಿಸುವ ಅಗತ್ಯವಿಲ್ಲ. ಅಲ್ಲದೇ, ಗ್ಯಾಸ್ ಖಾಲಿ ಆಯಿತು ಮತ್ತೊಂದು ಗ್ಯಾಸ್ ತರಿಸಬೇಕು ಎಂಬ ಚಿಂತೆಗೆ ಒಳಗಾಗುವ ಅವಶ್ಯವಿಲ್ಲ. ಪೈಪ್‌ ಮೂಲಕ ಗ್ಯಾಸ್ ನಿರಂತರವಾಗಿ ಬರುತ್ತಿರುತ್ತದೆ’ ಎಂದು ಹೇಳಿದರು.

‘ಈಗ ಬಳಕೆ ಮಾಡುತ್ತಿರುವ ಎಲ್‌ಪಿಜಿ ಸಿಲಿಂಡರ್‌ಗಿಂತ ಶೇ 20ಕ್ಕಿಂತ ಕಡಿಮೆ ದರದಲ್ಲಿ ಸಿಎನ್‌ಜಿ ದೊರೆಯಲಿದೆ. ಆಟೊ, ಕಾರುಗಳಿಗೆ ಸಿಎನ್‌ಜಿ ಮರುಪೂರ್ಣ ಮಾಡಲು ಅಲ್ಲಲ್ಲಿ ಸ್ಟೇಶನ್‌ಗಳನ್ನು ಆರಂಭಿಸಲಾಗುತ್ತಿದೆ. ಭಾರತ ಸರ್ಕಾರದ ಇಂಧನ ಸಚಿವಾಲಯದ ಮಾರ್ಗಸೂಚಿಗಳನ್ನು ಪಾಲಿಸಲೇಬೇಕಿರುವುದರಿಂದ ಬೆಲೆಯಲ್ಲಿ ದಿಢೀರ್ ಹೆಚ್ಚಳ ಮಾಡುವ ಸಾಧ್ಯತೆ ಇಲ್ಲ’ ಎಂದರು. ಎಜಿ ಅಂಡ್ ಪಿ ಪ್ರಥಮ್ ಕಂಪನಿಯ ಕ್ಲಸ್ಟರ್ ಮಾರ್ಕೆಟಿಂಗ್ ಹೆಡ್ ದುಶ್ಯಂತ್ ವರಂದಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.