
ಚಿಂಚೋಳಿ: ತಾಲ್ಲೂಕಿನ ಐನಾಪುರ ಸುತ್ತಲಿನ ಹಳ್ಳಿ ಹಾಗೂ ತಾಂಡಾಗಳಲ್ಲಿ ಶನಿವಾರ ರಾತ್ರಿ 7.45ಕ್ಕೆ ಲಘು ಭೂ ಕಂಪನ ಸಂಭವಿಸಿದ ಅನುಭವವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಐನಾಪುರ, ಚನ್ನೂರು ತಾಂಡಾ, ಖಾನಾಪುರ, ಭೂಂಯಾರ ತಾಂಡಾ, ಗಡಿಲಿಂಗದಳ್ಳಿ, ಹೇಮ್ಲಾನಾಯಕ ತಾಂಡಾ, ಖಾನಾಪುರ, ಬೆನಕೆಪಳ್ಳಿ ಮೊದಲಾದ ಕಡೆಗಳಲ್ಲಿ ಭೂಮಿಯಿಂದ ಗುರ್ ಎಂಬ ಸದ್ದು ಕೇಳಿ ಬಂದಿದ್ದರಿಂದ ಜನ ಬೆಚ್ಚಿ ಬಿದ್ದಿದ್ದಾರೆ. ಹೊಟೇಲ್‌ನಲ್ಲಿ ಚಹಾ ಸೇವಿಸುತ್ತ ಕುಳಿತವರಿಗೆ, ಅಂಗಡಿಗಳಲ್ಲಿ ಇದ್ದವರಿಗೆ, ಮನೆಯಲ್ಲಿ ಕುಳಿತವರಿಗೆ ಲಘು ಭೂ ಕಂಪನದ ಅನುಭವಾಗಿದೆ. ಇಲ್ಲಿ ಎರಡು ತಿಂಗಳ ಹಿಂದೆ ಲಘು ಕಂಪನದ ಅನುಭವ ಹಲವು ಬಾರಿ ಉಂಟಾಗಿತ್ತು.
ಐನಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರೇವಪ್ಪ ಉಪ್ಪಿನ್, ಚನ್ನೂರು ತಾಂಡಾದ ಶಿವಕುಮಾರ ರಾಠೋಡ, ಗ್ರಾ.ಪಂ. ಮಾಜಿ ಸದಸ್ಯ ಲಕ್ಷ್ಮಣ ಚವ್ಹಾಣ, ಭೂಂಯಾರ ಫತ್ತು ನಾಯಕ ತಾಂಡಾದ ಮಾಜಿ ಗ್ರಾ.ಪಂ ಸದಸ್ಯ ಲಕ್ಷ್ಮಣ ರಾಠೋಡ, ಹೇಮ್ಲಾ ನಾಯಕ ತಾಂಡಾದ ವಿಜಯಕುಮಾರ ಜಾಧವ ಅವರು ಭೂಮಿ ಕಂಪಿಸಿದ ಅನುಭವ ಆಯಿತು ಎಂದು ತಿಳಿಸಿದರು.
ಐನಾಪುರದಲ್ಲಿ ಎರಡು ತಿಂಗಳ ಹಿಂದೆ ಕೇಳಿ ಬಂದಿರುವ ಸದ್ದಿಗಿಂತಲೂ ಜೋರು ಸದ್ದು ಹಾಗೂ ಲಘು ಕಂಪನದ ಅನುಭವ ಶನಿವಾರ ರಾತ್ರಿ ಉಂಟಾಗಿದ್ದು ಜನರಲ್ಲಿ ಭೀತಿಗೆ ಕಾರಣವಾಗಿದೆರಮೇಶ ಪಡಶೆಟ್ಟಿ ಗ್ರಾಮ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.