ಆಳಂದ ತಾಲ್ಲೂಕಿನ ಮುನ್ನೋಳ್ಳಿ ಗ್ರಾಮದಲ್ಲಿ ಶಾಂತಲಿಂಗೇಶ್ವರರ ನೂತನ ದೇವಾಲಯದ ಮೂರ್ತಿ ಪೂಜೆಯ ಅಂಗವಾಗಿ ವಚನಪಠಣ ಜಾಥಾ ಜರುಗಿತು
ಆಳಂದ: ಯುದ್ಧ, ಅಶಾಂತಿ, ಅಸಹನೆ ಹಾಗೂ ಬಡತನ ಹೆಚ್ಚುತ್ತಿರುವ ಪ್ರಸ್ತುತ ದಿನಗಳಲ್ಲಿ ಜಗತ್ತಿಗೆ ಬಸವಣ್ಣನವರು ಪ್ರತಿಪಾದಿಸಿದ ಸಮಾನತೆ, ಮಾನವೀಯತೆ ಮೌಲ್ಯಗಳ ಅವಶ್ಯಕತೆ ಇದೆ ಎಂದು ಬೀದರ್‌ನ ಚೆನ್ನಬಸವಾನಂದ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಮುನ್ನೋಳ್ಳಿ ಗ್ರಾಮದಲ್ಲಿ ಭಾನುವಾರ ಶಾಂತಲಿಂಗೇಶ್ವರ ನೂತನ ದೇವಾಲಯದ ಮೂರ್ತಿ ಸ್ಥಾಪನೆ ಅಂಗವಾಗಿ ಆಯೋಜಿಸಿದ್ದ ಪೂಜೆ ಹಾಗೂ ವಚನಪಠಣ ಜಾಗೃತಿ ಜಾಥಾದಲ್ಲಿ ಅವರು ಮಾತನಾಡಿದರು.
ಏಸುಕ್ರಿಸ್ತ್‌ನ 11ಜನ ಶಿಷ್ಯರಿಂದ ಕ್ರಿಸ್ತ ಧರ್ಮ ಜಗತ್ತಿಗೆ ಪರಿಚಯವಾಯಿತು. ಆದರೆ, ಏಳು ನೂರಕ್ಕೂ ಅಧಿಕ ಶರಣರು, ವಿರಕ್ತಮಠಗಳು ಇದ್ದರೂ ಸಹ ಬಸವಣ್ಣನ ತತ್ವ, ಚಿಂತನೆಗಳು ಪ್ರಸಾರ ಕಾರ್ಯ ಯಶಸ್ವಿಗೊಳಿಸಲು ಅಡ್ಡಿಯಾಗುತ್ತಿವೆ. ಸಮ ಸಮಾಜ, ವೈಚಾರಿಕತೆ ವಿರೋಧಿಸುವ ಶಕ್ತಿಗಳಿಂದ ಅಪಪ್ರಚಾರ ನಡೆಯುತ್ತಿದೆ ಎಂದರು.
ತೋಂಟದಾರ್ಯ ಅನುಭವ ಮಂಟಪದ ಸಂಚಾಲಕ ಕೋರಣೇಶ್ವರ ಸ್ವಾಮೀಜಿ ಮಾತನಾಡಿ, 15ನೇ ಶತಮಾನದ ಶಾಂತಲಿಂಗ ಶಿವಯೋಗಿಗಳು ಅಪ್ಪಟ ಬಸವಭಕ್ತರು, ಕಲ್ಯಾಣ ಕರ್ನಾಟಕ ಭಾಗದಲ್ಲಿ 64ಕ್ಕೂ ಹೆಚ್ಚು ಮಠಗಳನ್ನು ಸ್ಥಾಪಿಸಿ ಬಸವತತ್ವ ಪ್ರಚಾರ ನಡೆಸಿದರು. ಸಮಾಜದ ಪರಿವರ್ತನೆ ಮತ್ತು ಪ್ರಗತಿಗೆ ಶರಣರ ಚಿಂತನೆಗಳು ದಾರಿದೀಪವಾಗಿವೆ ಎಂದರು.
ಗ್ರಾಮದ ಮುಖ್ಯಬೀದಿಗಳಲ್ಲಿ ಬಸವಾದಿ ಶರಣರ ಭಾವಚಿತ್ರದ ಮೆರವಣಿಗೆಯೊಂದಿಗೆ ವಚನ ಪಠಣದ ಜಾಥಾ ಕೈಗೊಳ್ಳಲಾಯಿತು.
ಬಸವಕಲ್ಯಾಣದ ಗೋಣಿರುದ್ರ ಸ್ವಾಮೀಜಿ, ಗುಂಡಯ್ಯ ಸ್ವಾಮಿ ಮಾತನಾಡಿದರು. ಸ್ಥಳೀಯ ಮಠದ ಪೀಠಾಧಿಪತಿ ಕರಿಬಸವಯ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಧಾನಮ್ಮ ಶಹಾಪುರೆ, ದತ್ತಪ್ಪ ನಂದಗಾಂವ, ಧರಣಿ ಕಟ್ಟಿಮನಿ ಅವರ ವಚನಗಾಯನ ಗಮನ ಸೆಳೆಯಿತು.
ಪ್ರಮುಖರಾದ ಶಿವಪುತ್ರಪ್ಪ ಪಾಟೀಲ, ಮಾರುತಿರಾವ ಕುಲಕರ್ಣಿ, ವಿಶ್ವನಾಥ ಕಾಮಾಜಿ, ಶಂಭುಲಿಂಗ ಸ್ವಾಮಿ, ಮಹಾದೇವ ಗುಂಡೂರೆ, ಸಿದ್ದು ವೇದಶೆಟ್ಟಿ, ಶ್ರೀಶೈಲ ಸುತಾರ, ಮಹಾಂತಪ್ಪ ಬಿರಾದಾರ, ರಾಜೇಂದ್ರ ಗುಂಡೆ, ಬಾಬುರಾವ ಮಡ್ಡೆ, ಸಂಜಯ ಪಾಟೀಲ, ಅಪ್ಪಾಸಾಹೇಬ ತೀರ್ಥೆ, ಸುಭಾಷ ಪಾಟೀಲ, ಎಸ್.ಬಿ.ಪಾಟೀಲ, ಬಸವರಾಜ ಪವಾಡಶೆಟ್ಟಿ, ಗುರಪ್ಪ ಶಹಾಪುರೆ, ಪಾರ್ವತಿ ಗುಂಡಯ್ಯ ಸ್ವಾಮಿ, ಶ್ರೀಶೈಲ ಪಾಟೀಲ, ರಮೇಶ ಲೋಹಾರ, ಮೊನಪ್ಪ ಸುತಾರ, ವೀರಭದ್ರಪ್ಪ ಹಾರಕೆ, ವಿಶ್ವನಾಥ ಘೋಡಕೆ, ನಿಂಗಪ್ಪ ಮಂಗೋಡೆ, ಮಹೇಶ ಪಾಟೀಲ, ಮಲ್ಲಿನಾಥ ವಚ್ಚೆ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.