ಕಲಬುರಗಿ: ‘ಸಚಿವ ಪ್ರಿಯಾಂಕ್ ಖರ್ಗೆ ಅವರ ಬೆಳವಣಿಗೆಯನ್ನು ಸಹಿಸಿಕೊಳ್ಳದ ಕೇಂದ್ರ ಸರ್ಕಾರವು ಅಮೆರಿಕಕ್ಕೆ ತೆರಳುವ ಅಧಿಕೃತ ಭೇಟಿಯ ಅನುಮತಿಯನ್ನು ನಿರಾಕರಿಸಿದೆ’ ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಹೇಳಿದ್ದಾರೆ.
ಅಮೆರಿಕದ ಬಾಸ್ಟನ್ ಮತ್ತು ಸ್ಯಾನ್‌ಫ್ರಾನ್ಸಿಸ್ಕೊದಲ್ಲಿ ನಡೆದ ಎರಡು ತಂತ್ರಜ್ಞಾನ ಶೃಂಗಸಭೆಗಳಲ್ಲಿ ಪ್ರಿಯಾಂಕ್ ಅವರು ಕರ್ನಾಟಕ ಸರ್ಕಾರ ಹಾಗೂ ಸಂಬಂಧಿತ ಇಲಾಖೆಯ ಸಚಿವರ ಮಟ್ಟದ ಪ್ರತಿನಿಧಿಯಾಗಿ ಪಾಲ್ಗೊಳ್ಳಬೇಕಿತ್ತು. ಅಮೆರಿಕಕ್ಕೆ ಹೋಗುವ ದಾರಿಯಲ್ಲಿ ಅವರಿಗೆ ವೀಸಾ ನಿರಾಕರಿಸಿ ತಡೆದಿರುವ ಕೇಂದ್ರ ಸರ್ಕಾರದ ಕ್ರಮ ಖಂಡನೀಯ. ಇದು ಕಲಬುರಗಿ ಜನರಿಗೆ ಮಾಡಿದ ಅವಮಾನ ಎಂದು ಟೀಕಿಸಿದ್ದಾರೆ.
ಐಟಿಬಿಟಿ ಸಚಿವ ಪ್ರಿಯಾಂಕ್ ಅವರು ಮಾಡಿರುವ ಸಾಧನೆ ದೊಡ್ಡದಾಗಿದೆ. ಹೀಗಾಗಿ, ಐಟಿ ಕಂಪನಿಗಳೇ ಅವರ ದುಂಬಾಲು ಬೀಳುತ್ತಿವೆ. ಐಟಿ ಕ್ಷೇತ್ರಕ್ಕೆ ಹೊಸತನ ತುಂಬಲು ಅಮೆರಿಕಕ್ಕೆ ತೆರಳುತ್ತಿದ್ದವರಿಗೆ ಅನುವು ಮಾಡಿ ಕೊಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಬೇಕಿತ್ತು. ಅದನ್ನು ಬಿಟ್ಟು ಚಿಲ್ಲರೆ ರಾಜಕೀಯ ಮಾಡಿದೆ ಎಂದು ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.