ADVERTISEMENT

ಪಕ್ಷಿಗಳಿಗೆ ನೀರುಣಿಸಲು ಬುಟ್ಟಿ ಅಳವಡಿಕೆ

ಅಂಬೇಡ್ಕರ್ ಜಯಂತಿ ಅರ್ಥಪೂರ್ಣ ಆಚರಣೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2022, 4:09 IST
Last Updated 15 ಏಪ್ರಿಲ್ 2022, 4:09 IST
ಕಮಲಾಪುರ ಪಟ್ಟಣದಲ್ಲಿ ಬಿ.ಆರ್.ಅಂಬೇಡ್ಕರ್ ಜಯಂತಿ ನಿಮಿತ್ತ ವಿಜ್ಞಾನ ಪರಿಷತ್‌ ವತಿಯಿಂದ ಪಕ್ಷಗಳಿಗೆ ದಾಹ ತೀರಿಸಲು ಪಿಂಗಾಣಿ ಅಳವಡಿಕೆ ವಿತರಣೆ ಅಭಿಯಾನಕ್ಕೆ ತಹಶೀಲ್ದಾರ್ ಗಂಗಾಧರ ಪಾಟೀಲ ಗುರುವಾರ ಚಾಲನೆ ನೀಡಿದರು
ಕಮಲಾಪುರ ಪಟ್ಟಣದಲ್ಲಿ ಬಿ.ಆರ್.ಅಂಬೇಡ್ಕರ್ ಜಯಂತಿ ನಿಮಿತ್ತ ವಿಜ್ಞಾನ ಪರಿಷತ್‌ ವತಿಯಿಂದ ಪಕ್ಷಗಳಿಗೆ ದಾಹ ತೀರಿಸಲು ಪಿಂಗಾಣಿ ಅಳವಡಿಕೆ ವಿತರಣೆ ಅಭಿಯಾನಕ್ಕೆ ತಹಶೀಲ್ದಾರ್ ಗಂಗಾಧರ ಪಾಟೀಲ ಗುರುವಾರ ಚಾಲನೆ ನೀಡಿದರು   

ಕಮಲಾಪುರ: ಅಂಬೇಡ್ಕರ್‌ ಜಯಂತಿ ನಿಮಿತ್ತ ರಾಜ್ಯ ವಿಜ್ಞಾನ ಪರಿಷತ್‌ ವತಿಯಿಂದ ಪಟ್ಟಣದ ವಿವಿಧ ಬೀದಿಗಳಲ್ಲಿ, ಮರ, ಗಿಡಗಳಿಗೆ ಪಿಂಗಾಣಿ (ಬುಟ್ಟಿ) ಅಳವಡಿಸಿ ನೀರು ಹಾಕಲಾಯಿತು.

ವಿಜ್ಞಾನ ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷರಾದ ಶಶಿಕಲಾ ಮಾಲಿ ಪಾಟೀಲ ಮಾತನಾಡಿ, ಅಂಬೇಡ್ಕರ್ ಜಯಂತಿಯನ್ನು ಅರ್ಥಪೂರ್ಣ ವಾಗಿ ಆಚರಿಸಲು ವಿಜ್ಞಾನ ಪರಿಷತ್‌ ವಿನೂತನ ಕಾರ್ಯಕ್ರಮ ಆಯೋಜಿಸಿದೆ. ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳ ನೀರಿನ ದಾಹ ತೀರಿಸಲು ಮಣ್ಣಿನ ಪಿಂಗಾಣಿಗಳಲ್ಲಿ ನೀರು ಸಂಗ್ರಹಿಸಿಡಲಾಗುತ್ತಿದೆ. ಪ್ರತಿದಿನ ಅದರಲ್ಲಿ ನೀರು ತುಂಬಿಸಲು ಪಕ್ಕದಲ್ಲಿ ಹೋಟೆಲ್‌, ಅಂಗಡಿ, ಕಚೇರಿ ಸಿಬ್ಬಂಧಿಗಳಿಗೆ ಜವಾಬ್ದಾರಿ ಒಪ್ಪಿಸಲಾಗಿದೆ. ಜತೆಗೆ ತಹಶೀಲ್ದಾರ್ ಕಚೇರಿ ಹಾಗೂ ಪದವಿ ಪೂರ್ವಕಾಲೇಜುಗಳಲ್ಲಿ ಎರಡು ತಂಪು ನೀರಿನ ರಂಜಣಗಿಗಳಲ್ಲಿ ಇರಿಸಲಾಗಿದೆ. ಇವುಗಳಿಗೆ ನಮ್ಮ ಪರಿಷತ್‌ನ ಉಪಾಧ್ಯೆಕ್ಷೆ ಶೃತಿ ಬಿರಾದಾರ ಶುದ್ಧ ನೀರು ಒದಗಿಸಲಿದ್ದಾರೆ ಎಂದರು. ಪರಿಷತ್‌ನ ಉಪಾಧ್ಯಕ್ಷೆ ಶೃತಿ ಬಿರದಾರ ಮಾತನಾಡಿದರು.

ತಹಶೀಲ್ದಾರ್ ಗಂಗಾಧರ ಪಾಟೀಲ, ಉಪ ತಹಶೀಲ್ದಾರ್ ದೀಪಕ್‌ ಶೆಟ್ಟಿ, ಕಂದಾಯ ನಿರೀಕ್ಷಕ ರಘುನಂದನ್‌ ದ್ಯಾಮಣಿ, ಪರಿಷತ್ತಿನ ಸದಸ್ಯರಾದ ನಿವೃತ್ತ ಶಿಕ್ಷಕ ಪುಂಡಲೀಕರಾವ ಚಿರಡೆ, ಹರಿಶ ಪಟ್ನಾಯಕ, ಮಲ್ಲಿಕಾರ್ಜುನ ವಾಲಿ, ನಾಗರಾಜ ಮೈಲವಾರ, ಶರಣಬಸಪ್ಪ ಜೀವಣಗಿ, ಸಾಗರ ಗುತ್ತೇದಾರ, ನಾಗರಾಜ ಕಲ್ಯಾಣ, ಡಾ.ಪ್ರವೀಣ ಶೇರಿ, ರಾಮಕೃಷ್ಣ ಖಡಕೆ, ಶಿವಕುಮಾರ ಮರತೂರ, ಶ್ರೀಶೈಲ್‌ ದೋಶೆಟ್ಟಿ, ಅರುಣ ಧಮ್ಮೂರ, ರಾಹುಲ್‌ ಕೋಡ್ಲಿ, ಮಂಜುನಾಥ ಬಿರಾದಾರ, ಪ್ರವೀಣ, ಶಿವಲಿಂಗ, ಸಿದ್ದು ಗೋಣ, ನಾಗೇಂದ್ರ ಗಿರಿ, ರಾಮಲಿಂಗ ಅನನ್ಯಾ ರಾವ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.