ADVERTISEMENT

ಸಮಾನತೆಗೆ ಅನನ್ಯ ಕೊಡುಗೆ ನೀಡಿದ ಅಂಬೇಡ್ಕರ್; ತಹಶೀಲ್ದಾರ್

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 10:55 IST
Last Updated 6 ಡಿಸೆಂಬರ್ 2021, 10:55 IST
ಜೇವರ್ಗಿ ಪಟ್ಟಣದ ಅಂಬೇಡ್ಕರ್‌ ವೃತ್ತದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನ ಆಚರಿಸಲಾಯಿತು
ಜೇವರ್ಗಿ ಪಟ್ಟಣದ ಅಂಬೇಡ್ಕರ್‌ ವೃತ್ತದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನ ಆಚರಿಸಲಾಯಿತು   

ಜೇವರ್ಗಿ: ’ದೇಶದಲ್ಲಿನ ಎಲ್ಲ ಜಾತಿ ಮತ್ತು ವರ್ಗಗಳಿಗೆ ಸಾಮಾಜಿಕ ಸಮಾನತೆ ಕಲ್ಪಿಸುವಲ್ಲಿ ಡಾ. ಅಂಬೇಡ್ಕರ್ ಅವರ ಕೊಡುಗೆ ಅಪಾರವಾಗಿದೆ’ ಎಂದು ತಹಶೀಲ್ದಾರ್ ವಿನಯಕುಮಾರ ಪಾಟೀಲ ಹೆಳಿದರು.

ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದ ಸಭಾಂಗಣದಲ್ಲಿ ಸೋಮವಾರ ನಡೆದ ಡಾ.ಬಿ.ಆರ್ ಅಂಬೇಡ್ಕರ ಅವರ 65ನೇ ಮಹಾ ಪರಿನಿರ್ವಾಣ ದಿನದ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

‘ಹಲವು ಸಮಸ್ಯೆಗಳನ್ನು ಎದುರಿಸಿ ಸಾಕಷ್ಟು ನೋವು ಅನುಭವಿಸಿ, ಎಲ್ಲರನ್ನೂ ಒಳಗೊಳ್ಳುವಂತಹ ಸಂವಿಧಾನ ರಚಿಸಿದ್ದರು. ಅವರ ಜೀವನ ಚರಿತ್ರೆ ಪ್ರತಿಯೊಬ್ಬರಿಗೂ ಪ್ರೇರಣೆ ಆಗಿದೆ. ದೇಶಕ್ಕೆಸಂವಿಧಾನ ಎಂಬ ಪವಿತ್ರ ಗ್ರಂಥ ನೀಡಿ, ಪ್ರಜಾಪ್ರಭುತ್ವಕ್ಕೆ ನೈಜ ಅರ್ಥ ಕೊಟ್ಟರು’ ಎಂದು ಬಣ್ಣಿಸಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮರೆಪ್ಪ ಬಡಿಗೇರ ಮಾತನಾಡಿ, ‘ಸೂರ್ಯ– ಚಂದ್ರ ಇರುವವರೆಗೂ ಅಂಬೇಡ್ಕರ್ ಅವರ ಸಿದ್ಧಾಂತ ಮತ್ತು ವಿಚಾರಗಳು ಜೀವಂತವಾಗಿ ಇರುತ್ತವೆ. ಅವರ ಆಸೆಯದಂತೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಅಶೋಕ ನಾಯಕ್, ಪುರಸಭೆ ಮುಖ್ಯಾಧಿಕಾರಿ ಶರಣಯ್ಯ ಹಿರೇಮಠ, ಪಿಎಸ್‌ಐ ಸಂಗಮೇಶ ಅಂಗಡಿ, ಮುಖಂಡರಾದ ಭೀಮರಾಯ ನಗನೂರ, ಸಿದ್ದಪ್ಪ ಆಲೂರ, ಬಸಣ್ಣ ಸರಕಾರ, ಗುರಲಿಂಗಪ್ಪ ಗೌನಳ್ಳಿ, ಪ್ರಭಾಕರ ಸಾಗರ, ಮಲ್ಲಿಕಾರ್ಜುನ ಕೆಲ್ಲೂರ, ಶರಣಪ್ಪ ಜೈನಾಪೂರ, ರಾಯಪ್ಪ ಬಾರಿಗೀಡ, ರಾಜಶೇಖರ ಶಿಲ್ಪಿ, ಸಂಗಮೇಶ ಕೊಂಬಿನ್, ಸೋಮು ಗೋಪಾಲಕರ್, ಶರಣಪ್ಪ ಜಟ್ನಾಕರ್, ಗಣಪತಿ ಡೂಗನಕರ, ಬಸವರಾಜ ದನ್ನಾಕರ್, ಅಶೋಕ ಜಟ್ನಾಕರ್, ಮರೆಪ್ಪ ಜಟ್ನಾಕರ್, ಪಾರ್ವತಿ ಮದ್ರಕಿ, ಸಾಂಬಾಯಿ ಡೂಗನಕರ, ತಿಪ್ಪಮ್ಮ ಊಗನಕರ, ಸೀತಾಬಾಯಿ ಜಟ್ನಾಕರ್, ಗುರುಶಾಂತಮ್ಮ ಜಟ್ನಾಕರ್, ವಿಶ್ವ ಆಲೂರ, ಮೌನೇಶ ಹಂಗರಗಿ, ದೇವು ಬಡಿಗೇರ, ಶರಣು ಹಂಗರಗಿ, ಹಿರಗಪ್ಪ ಡುಗುನಕರ್, ರಾಜು ಗುತ್ತೇದಾರ ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.