
ಅಫಜಲಪುರ: ಡಾ.ಬಿ.ಆರ್ ಅಂಬೇಡ್ಕರ ಅವರು ರಚಿಸಿದ ಸಂವಿಧಾನದ ಆಶಯಗಳ ಅಡಿ ನಾವೆಲ್ಲರೂ ಜೀವನ ನಡೆಸುತ್ತಿದ್ದೇವೆ ಎಂದು ಶಾಸಕ ಎಂ.ವೈ.ಪಾಟೀಲ ಹೇಳಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಮಹಾ ಪರಿನಿರ್ವಾಣ ದಿನದ ಪ್ರಯುಕ್ತ ಸೋಮವಾರ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.
‘ನಿತ್ಯ ಅಂಬೇಡ್ಕರ್ ಅವರನ್ನು ಸ್ಮರಿಸಿ ಅಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಇಂದು ಅವರು ನಮ್ಮೊಂದಿಗೆ ಇಲ್ಲ. ಆದರೆ, ಅವರು ಹಾಕಿಕೊಟ್ಟ ಆದರ್ಶಗಳು ನಮ್ಮ ಜತೆಗೆ ಇವೆ. ಅವರಿಂದಾಗಿ ಎಲ್ಲ ವರ್ಗದ ಜನರು ಇಂದು ನೆಮ್ಮದಿ ಹಾಗೂ ಸಮಾನತೆಯಿಂದ ಜೀವನ ನಡೆಸುತ್ತಿದ್ದಾರೆ’ ಎಂದರು.
ದೇಶದ ಪ್ರತಿಯೊಬ್ಬ ಪ್ರಜೆಯು ಸಂವಿಧಾನದ ಮೂಲ ಆಶಯಗಳನ್ನು ಅರಿಯಬೇಕು. ಜತೆಗೆ ಕಾನೂನಿಗೂ ಗೌರವ ಕೊಡಬೇಕು ಎಂದು ಸಲಹೆ ನೀಡಿದರು.
ಪ್ರಕಾಶ ಜಮಾದಾರ್, ಸಿದ್ಧಾರ್ಥ ಬಸರಿಗಿಡ, ರಾಜು ಪಾಟೀಲ, ಶಿವಾನಂದ ಗಾಡಿಸಾಹುಕಾರ, ಯಮನಪ್ಪ ಭಾಸಗಿ, ನಿಂಗಪ್ಪ ಚಲವಾದಿ, ಹಣಮಂತ ಗಾಡಿವಡ್ಡರ್, ಭೀಮರಾವ ಗೌರ, ಪಪ್ಪು ಪಟೇಲ, ಮಹಾಂತೇಶ ಬಡದಾಳ, ಶ್ರೀಮಂತ ಬಿರಾದಾರ, ಸಿದ್ದು ದಿಕ್ಸಂಗಿ, ದಯಾನಂದ ದೊಡಮನಿ, ಶ್ರೀಕಾಂತ ಮ್ಯಾಳೇಶಿ, ಶರಣು ಕುಂಬಾರ, ಬಸವರಾಜ ಚಾಂದಕವಟೆ, ನಾಗಪ್ಪ ಆರೇಕರ್, ರಾಜು ಆರೇಕರ್, ಮಾಹನಿಂಗ ಅಂಗಡಿ, ಮಹಾಂತೇಶ ಬಳೂಂಡಗಿ, ಮಲ್ಲಯ್ಯ ಹೊಸಮಠ, ರವಿ ಗೌರ, ಶಿವು ಹೊಸಮನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.