ADVERTISEMENT

ಕಲಬುರಗಿಯಲ್ಲಿ ಅಂಬಿಗರ ‌ಚೌಡಯ್ಯ ಜಯಂತಿ: ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಟಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 9:38 IST
Last Updated 21 ಜನವರಿ 2026, 9:38 IST
   

ಕಲಬುರಗಿ: ನಿಜ‌ಶರಣ ಅಂಬಿಗರ ಚೌಡಯ್ಯ ಅವರ 906ನೇ ಜಯಂತ್ಯುತ್ಸವವನ್ನು ನಗರದಲ್ಲಿ ಬುಧವಾರ ಅದ್ದೂರಿಯಾಗಿ ಆಚರಿಸಲಾಯಿತು.

ನಗರದ ನಗರೇಶ್ವರ ಶಾಲೆಯಿಂದ ಅಂಬಿಗರ ಚೌಡಯ್ಯ ಚಿತ್ರವುಳ್ಳ ರಥದ ಮೆರವಣಿಗೆಗೆ ಡಾ.ಎಸ್.ಎಂ‌.ಪಂಡಿತ್ ರಂಗಮಂದಿರದ ತನಕ ಮೆರವಣಿಗೆ‌ ನಡೆಯಿತು.

ಮೆರವಣಿಗೆಗೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಚಾಲನೆ ನೀಡಿದರು. ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಶಾಸಕರಾದ ಅಲ್ಲಮಪ್ರಭು ಪಾಟೀಲ, ಬಸವರಾಜ ಮತ್ತಿಮಡು, ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ, ಎಸ್ಪಿ ಅಡ್ಡೂರು ಶ್ರೀನಿವಾಸುಲು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ADVERTISEMENT

ಮೆರವಣಿಗೆಯು ನಗರದ ಚೌಕ ಪೊಲೀಸ್ ‌ಸ್ಟೇಷನ್ ವೃತ್ತ ತಲುಪಿದಾಗ ಹೆಲಿಕಾಪ್ಟರ್ ನಿಂದ ಗುಲಾಬಿ ಪಕಳೆಗಳ ವೃಷ್ಟಿಗೈಯಲಾಯಿತು.

ಮೇಳೈಸಿದ ಕಲಾ ಸೊಬಗು: ವಿವಿಧ ಕಲಾ ತಂಡಗಳು ಮೆರವಣಿಗೆ ಅಂದ ಹೆಚ್ಚಿಸಿದವು.

ಐದು ಒಂಟೆಗಳು, ಐದು‌ ಕುದುರೆಗಳು, ಪುರುಷ ಹಾಗೂ ‌ಮಹಿಳಾ ಡೊಳ್ಳಿನ ತಂಡಗಳು,, ಗಾರುಡಿ ಗೊಂಬೆಗಳ ಕುಣಿತ ಮೆರವಣಿಗೆಯ ಆಕರ್ಷಣೆ ‌ಹೆಚ್ಚಿಸಿತು.

ಸಮುದಾಯದ ನೂರಾರು ಯುವಕರು ಕೈಯಲ್ಲಿ ಚೌಡಯ್ಯ ಚಿತ್ರವುಳ್ಳ‌ ಬಾವುಟ ಹಿಡಿದು ಹೆಜ್ಜೆಹಾಕಿದರು. ಕಿವಿಗಡಚ್ಚಿಕ್ಕುವ ಧ್ವನಿವರ್ಧಕಗಳಿಂದ ಹೊಮ್ಮುತ್ತಿರುವ ಹಾಡುಗಳಿಗೆ‌ ಯುವಜನರು ಹೆಜ್ಜೆ ಹಾಕಿ ಸಂಭ್ರಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.